• Tag results for officials

ತೆರಿಗೆ ಪಾವತಿಯಲ್ಲಿ ವಂಚಿಸಲು ಬಿಲ್ಡರ್ ಗಳಿಗೆ ಬಿಬಿಎಂಪಿ ಅಧಿಕಾರಿಗಳಿಂದ ನೆರವು: ಮೇಯರ್ ತನಿಖೆಗೆ ಆದೇಶ

ತೆರಿಗೆ ಪಾವತಿಗೆ ವಿನಾಯ್ತಿ ನೀಡಿ ಕೆಲವು ಬಿಲ್ಡರ್ ಗಳ ಪರವಾಗಿ ನಿಲ್ಲಲು ಯಲಹಂಕ ಬಿಬಿಎಂಪಿ, ಪೂರ್ವ ಮತ್ತು ಇತರ ವಲಯಗಳ ಅಧಿಕಾರಿಗಳು ಇಲ್ಲದಿರುವ ಕರ್ನಾಟಕ ನಗರ ಪಾಲಿಕೆ ಕಾಯ್ದೆಯನ್ನು ಉಲ್ಲೇಖಿಸುತ್ತಿದ್ದಾರೆ ಎಂದು ಪಾಲಿಕೆ ಸಭೆಯಲ್ಲಿ ಬಿಜೆಪಿ ಸದಸ್ಯ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.

published on : 1st July 2020

ಕೊರೋನಾ ವಿರುದ್ಧದ ಹೋರಾಟದಲ್ಲಿ ಮಂಡ್ಯಕ್ಕೆ ನೆರವಾದ ಹೈಡ್ರಾಕ್ಸಿಕ್ಲೋರೋಕ್ವಿನ್: ಅಧಿಕಾರಿಗಳು

ಕಳೆದ ತಿಂಗಳವರೆಗೆ ಮಂಡ್ಯ ಜಿಲ್ಲೆಯಲ್ಲಿ ದಾಖಲೆಯ ಸಂಖ್ಯೆಯ ಕೋವಿಡ್ -19 ಪ್ರಕರಣಗಳು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು.ಆದರೆ, ಇದೀಗ ಹಾಟ್ ಸ್ಪಾಟ್ ಗಳಿಂದ ನಿರಂತರವಾಗಿ ಜನರು ಬರುತ್ತಿದ್ದರೂ ಕೊರೋನಾ ಪ್ರಕರಣಗಳ ಸಂಖ್ಯೆ ತಗ್ಗಿದೆ. ಇದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

published on : 25th June 2020

ಪಾಕ್ ನಿಂದ ವಾಪಸ್ಸಾದ ಭಾರತದ ಐವರು ಹೈ ಕಮೀಷನ್ ಅಧಿಕಾರಿಗಳು

 ಪಾಕಿಸ್ತಾನ ಭದ್ರತಾ ಏಜೆನ್ಸಿಗಳಿಂದ ಅಪಹರಿಸಿ, ಕಿರುಕುಳ ಅನುಭವಿಸಿದ್ದ ಇಬ್ಬರು ಸೇರಿದಂತೆ ಐವರು ಭಾರತೀಯ ಹೈ ಕಮೀಷನ್ ಅಧಿಕಾರಿಗಳು ಸೋಮವಾರ ಅಠಾರಿ-ವಾಘಾ ಗಡಿಯ ಮೂಲಕ ಸ್ವದೇಶಕ್ಕೆ ವಾಪಸ್ಸಾದರು

published on : 22nd June 2020

ಅಳಿಸಿ ಹೋಗುತ್ತಿರುವ ಕ್ವಾರಂಟೈನ್ ಸ್ಟ್ಯಾಂಪ್: ಅಧಿಕಾರಿಗಳಿಗೆ ಶುರುವಾಯ್ತು ಹೊಸ ತಲೆನೋವು

ವ್ಯಕ್ತಿಯೊಬ್ಬರು ಹೋಂ ಕ್ವಾರಂಟೈನ್ ನಲ್ಲಿದ್ದಾರೆಂದರೆ ಅವರನ್ನು ಕಂಡು ಹಿಡಿಯಲು ಇರುವ ಏಕೈಕ ಮಾರ್ಗವೆಂದರೆ, ಕೈಗಳ ಮೇಲಿರುವ ಸ್ಟ್ಯಾಂಪ್. ಆದರೆ, ಅಂತಹ ಸ್ಟ್ಯಾಂಪನ್ನೇ ಅಳಿಸುತ್ತಿರುವ ಕೆಲವರು ಸ್ವತಂತ್ರವಾಗಿ ರಸ್ತೆಗಳಲ್ಲಿ ಓಡಾಡಲು ಆರಂಭಿಸುತ್ತಿದ್ದಾರೆ. ಇಂತಹ ಬೆಳವಣಿಗೆ ಇದೀಗ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

published on : 12th June 2020

ಸಾಲದ ಹಣಕ್ಕೆ ಕೋಳಿ ಅಂಗಡಿಯಲ್ಲಿ ಜೀತದಾಳಾಗಿದ್ದ ಯುವಕನ ರಕ್ಷಣೆ 

ಸಾಲದ ಹಣಕ್ಕಾಗಿ ಚಿಕನ್ ಮತ್ತು ಮಟನ್ ಅಂಗಡಿಯೊಂದರಲ್ಲಿ ಜೀತದಾಳಾಗಿ ದುಡಿಯುತ್ತಿದ್ದ ಯುವಕನೋರ್ವನನ್ನು ತಾಲ್ಲೂಕು ಅಧಿಕಾರಿಗಳು ರಕ್ಷಿಸಿರುವ  ಪ್ರಕರಣ ತಾಲ್ಲೂಕಿನ ಬೆಳ್ಳೂರು ಕ್ರಾಸ್‌ನಲ್ಲಿ ನಡೆದಿದೆ.

published on : 11th June 2020

ದೆಹಲಿಯ 6 ಇಡಿ ಅಧಿಕಾರಿಗಳಿಗೆ ಕೊರೋನಾ ಪಾಸಿಟಿವ್: ಪ್ರಧಾನ ಕಚೇರಿ ಸೀಲ್'ಡೌನ್

ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ದೆಹಲಿಯ ಜಾರಿ ನಿರ್ದೇಶನಾಲಯದ 6 ಮಂದಿ ಅಧಿಕಾರಿಗಳಲ್ಲಿ ವೈರಸ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇದೀಗ ಜಾರಿ ನಿರ್ದೇಶನಾಲಯದ ಪ್ರಧಾನಕಚೇರಿಯನ್ನು ಸೀಲ್'ಡೌನ್ ಮಾಡಲಾಗಿದೆ ಎಂದು ಶುಕ್ರವಾರ ತಿಳಿದುಬಂದಿದೆ. 

published on : 6th June 2020

ಅಧಿಕಾರಿಗಳ ಎಡವಟ್ಟು: ಕ್ವಾರಂಟೈನ್ ಉಲ್ಲಂಘನೆ ಶಂಕೆ; ಮಹಿಳೆಯನ್ನು ರೈಲಿನಿಂದ ಕೆಳಗಿಳಿಸಿ ಅವಾಂತರ!

ಕ್ವಾರಂಟೈನ್ ನಿಯಮಗಳ ಅರಿವಿನ ಕೊರತೆ ಮತ್ತು ಅನಗತ್ಯ ಭೀತಿಯ ಕಾರಣ ಬೆಂಗಳೂರು-ಬೆಳಗಾವಿ ರೈಲಿನಿಂದ ಮಹಿಳೆಯೊಬ್ಬರನ್ನು ಕೆಳಗಿಳಿಸಿ ಅಧಿಕಾರಿಗಳು ಅವಾಂತರ ಮಾಡಿರುವ ಘಟನೆ ಸೋಮವಾರ ನಡೆದಿದೆ.

published on : 2nd June 2020

ಭೇಟಿಯ ವೇಳೆ ಅಧಿಕಾರಿಗಳು ಗೈರು: ಅಮಾನತುಗೊಳಿಸಲು ಕೃಷಿ ಸಚಿವ ಬಿ.ಸಿ. ಪಾಟೀಲ್ ಸೂಚನೆ

ಕೃಷಿ ವಿಜ್ಞಾನ ಕೇಂದ್ರದಲ್ಲಿ ಗೈರಾದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ.

published on : 1st June 2020

ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದಿದ್ದಲ್ಲಿ ಕಠಿಣ ಕ್ರಮ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ಚರಿಕೆ

ನಗರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಬಿ.ಬಿ.ಎಂ.ಪಿ ನಿಯಂತ್ರಣಾ ಕೊಠಡಿ/ಸಹಾಯವಾಣಿಗಳಿಗೆ ಸಾರ್ವಜನಿಕರಿಂದ ಬರುವ ಕರೆಗಳನ್ನು ಸ್ವೀಕರಿಸಿ ತಕ್ಷಣ ಸ್ಪಂದಿಸಬೇಕು. ಕರೆ ಸ್ವೀಕರಿಸದೇ ಇರುವ ಬಗ್ಗೆ ದೂರುಗಳು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

published on : 30th May 2020

ಚೆನ್ನೈನ ಖಾಸಗಿ ಆಸ್ಪತ್ರೆಗಳು ಕೊರೋನಾ ರೋಗಿಗಳಿಂದ ಹಣ ಸುಲಿಗೆ ಮಾಡುತ್ತಿವೆಯೇ?: ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ ಈ ನಿದರ್ಶನ!

ಇನ್ನು ಬದುಕಿಸಲು ಸಾಧ್ಯವಾಗುವುದಿಲ್ಲ ಎಂದು ಕಂಡುಬರುತ್ತಿದ್ದಂತೆ ಕೊರೋನಾ ಸೋಂಕಿತ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಉಲ್ಲೇಖಿಸುತ್ತಾರೆಯೇ? 

published on : 23rd May 2020

ಕುಡಿಯುವ ನೀರಿನ ಘಟಕದಲ್ಲಿ ಅವ್ಯವಸ್ಥೆ: ಸಚಿವ ಬಿ.ಸಿ.ಪಾಟೀಲ್ ಗರಂ

ಕುಡಿಯುವ ನೀರಿನ ಘಟಕದ ಅವ್ಯವಸ್ಥೆ ಹಾಗೂ ಸ್ವಚ್ಛತೆ ಇಲ್ಲದ್ದನ್ನು ಕಂಡ ಕೃಷಿ ಸಚಿವ ಬಿ.ಸಿ.ಪಾಟೀಲ್  ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಹಾವೇರಿಯ ಸ್ವ ಕ್ಷೇತ್ರ ಹಿರೇಕೆರೂರಿನಲ್ಲಿ ನಡೆದಿದೆ.

published on : 16th May 2020

ಸಿಗರೇಟ್  ಲಂಚ ಪ್ರಕರಣ: ಸಿಸಿಬಿ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲು

ಸಿಗರೇಟ್ ವ್ಯಾಪಾರಿಗಳಿಂದ ಲಂಚ ಪಡೆದ ಆರೋಪದ ಹಿನ್ನೆಲೆ ಮೂವರು ಸಿಸಿಬಿ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. 

published on : 13th May 2020

ತೆರಿಗೆ ಸೋರಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಿ: ಮುಖ್ಯಮಂತ್ರಿ ಯಡಿಯೂರಪ್ಪ

ರಾಜ್ಯದಲ್ಲಿ ಈಗ ಮತ್ತೆ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ತೆರಿಗೆ ಸೋರಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

published on : 7th May 2020

ಲಾಕ್'ಡೌನ್: ಪಾಸ್ ಕೇಳಿ ಕರ್ತವ್ಯ ನಿಭಾಯಿಸಿದ ಪೊಲೀಸ್'ಗೆ ಬಸ್ಕಿ ಹೊಡೆಸಿ ಶಿಕ್ಷೆ ನೀಡಿದ ಅಧಿಕಾರಿ!

ಕೊರೋನಾ ಲಾಕ್'ಡೌನ್ ಹಿನ್ನೆಲೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ವಾಹನ ಚಲಾಯಿಸಲು ಅಗತ್ಯವಿದ್ದ ಪಾಸ್ ತೋರಿಸುವಂತೆ ಅಧಿಕಾರಿಯನ್ನು ಕೇಳಿದ ಕಾರಣಕ್ಕೆ 50 ಬಸ್ಕಿ ಹೊಡೆಸಿ ಶಿಕ್ಷೆ ನೀಡಿರುವ ವಿಚಿತ್ರ ಘಟನೆಯೊಂದು ನಡೆದಿದೆ. 

published on : 22nd April 2020

ಗಂಗಾವತಿ: ಅಕ್ರಮ ನುಸುಳುಕೋರರ ತಡೆಗೆ ನದಿಯಲ್ಲಿ ದೊಡ್ಡ ಹೊಂಡ, ಕಂದಕ ಸೃಷ್ಟಿಸಿದ ಅಧಿಕಾರಿಗಳು!

ಈಗಾಗಲೆ ಕೊರೋನಾ ಪೀಡಿತರ ಹಾಟ್ ಲೀಸ್ಟ್ನಲ್ಲಿರುವ ನೆರೆಯ ಬಳ್ಳಾರಿ ಜಿಲ್ಲೆಯಿಂದ ಅಕ್ರಮವಾಗಿ ಜನ ಯಾವುದೇ ತಪಾಸಣೆಗೆ ಒಳಗಾಗದೇ ಕೊಪ್ಪಳ ಜಿಲ್ಲೆಯ ಗಡಿಯನ್ನು ಪ್ರವೇಶಿಸುತ್ತಿದ್ದಾರೆ. ಸಾಕಷ್ಟು ಚೆಕ್ ಪೋಸ್ಟ್ ಗಳಿದ್ದರೂ ಜನ ಕಣ್ತಪ್ಪಿಸಿ ಜಿಲ್ಲೆಗೆ ಪ್ರವೇಶಿಸುತ್ತಿದ್ದಾರೆ. 

published on : 20th April 2020
1 2 3 4 5 >