ಹಿರಿಯ ಸಾಹಿತಿ ಗೀತಾ ನಾಗಭೂಷಣ ಅವರಿಗೆ ಅಂತಿಮ ವಿದಾಯ; ಕಲಬುರಗಿಯಲ್ಲಿ ಅಂತ್ಯಕ್ರಿಯೆ

 ಹಿರಿಯ ಸಾಹಿತಿ ನಾಡೋಜ ಗೀತಾ ನಾಗಭೂಷಣ ಅವರ ಅಂತ್ಯಸಂಸ್ಕಾರ ಇಂದು ನೇರವೇರಿತು.
ಗೀತಾ ನಾಗಭೂಷಣ
ಗೀತಾ ನಾಗಭೂಷಣ
Updated on

ಕಲಬುರಗಿ: ಹಿರಿಯ ಸಾಹಿತಿ ನಾಡೋಜ ಗೀತಾ ನಾಗಭೂಷಣ ಅವರ ಅಂತ್ಯಸಂಸ್ಕಾರ ಇಂದು ನೇರವೇರಿತು.

ಕಲಬುರಗಿ ಹೊರವಲಯದ ಸಾವಳಗಿ - ಪಟ್ಟಣ ಕ್ರಾಸ್‌ ಬಳಿ ಇರುವ ಅವರ ಸ್ವಂತ ಜಮೀನಿನಲ್ಲಿ ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ನೆರವೇರಿತು.‌

ಹಿಂದೂ ಧರ್ಮದ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕುಟುಂಬದ ಸದಸ್ಯರು, ಹಲವು ಸಾಹಿತಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಹಂಪಿ ವಿ.ವಿ.ಯ ನಾಡೋಜ ಸೇರಿದಂತೆ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದ ಗೀತಾ ನಾಗಭೂಷಣ, ವಯೋ ಸಹಜ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆರಾತ್ರಿ ನಿಧನರಾಗಿದ್ದರು. 

ಕಲಬುರಗಿಯ  ಸ್ವಸ್ತಿಕ್ ನಗರದ ಅವರ ಸ್ವಗೃಹದ ಬಳಿ ಪಾರ್ಥೀವ ಶರೀರದ ಅಂತಿಮ ದರ್ಶನ ವ್ಯವಸ್ಥೆ  ಮಾಡಲಾಗಿತ್ತು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com