ಅಕ್ರಮ ಸಂಬಂಧಕ್ಕೆ ಅಡ್ಡಿ: ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ, ಪ್ರಿಯಕರ ಸೇರಿ ಮೂವರ ಬಂಧನ

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಪತ್ನಿ ಕೊಲೆ ಮಾಡಿಸಿರುವ ಪ್ರಕರಣವನ್ನು ಬೇಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗಾತಿ ಪತ್ನಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಡ್ಯ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಪತ್ನಿ ಕೊಲೆ ಮಾಡಿಸಿರುವ ಪ್ರಕರಣವನ್ನು ಬೇಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗಾತಿ ಪತ್ನಿ, ಆಕೆಯ ಪ್ರಿಯಕರ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಕೆ.ಆರ್.ಪೇಟೆ ತಾಲ್ಲೂಕಿನ ಸೊಳ್ಳೇಪುರ ಗ್ರಾಮದ ಜವರೇಗೌಡ ಎಂಬಾತನನ್ನು ಕೊಲೆ ಮಾಡಲಾಗಿದ್ದು, ಕೊಲೆಗೆ ಕಾರಣರಾದ ಆತನ ಪತ್ನಿ ಶೈಲಜ, ಅದೇ ಗ್ರಾಮದ ಆಕೆಯ ಪ್ರಿಯಕರ ಹರೀಶ್, ಆನಂದ್ ಎಂಬುವವರನ್ನೇ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ
೨೦೧೯ರ ಸೆಪ್ಟಂಬರ್ ೨೫ರಂದು ಮಂಡ್ಯ ತಾಲ್ಲೂಕಿನ ಹುನುಗನಹಳ್ಳಿ ಗ್ರಾಮದ ಹೇಮಾವತಿ ವಿತರಣಾ ನಾಲಾ ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಇದರ ಬಗ್ಗೆ ಹೇಮಾವತಿ ನಾಲೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನೀಡಿದ ದೂರಿನ ಮೇರೆಗೆ ಬಸರಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಪರಿಚಿತ ಶವದ ಪತ್ತೆ ಪ್ರಕರಣದ ಬಗ್ಗೆ ಮಂಡ್ಯ ಎಸ್ಪಿ ಕೆ.ಪರಶುರಾಮ್, ಎಎಸ್ಪಿ ಶೋಭಾರಾಣಿ, ಡಿವೈಎಸ್ಪಿ ನವೀನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಂಡ್ಯ ಗ್ರಾಮಾಂತರ ಸಿಪಿಐ ಎನ್.ವಿ.ಮಹೇಶ್ ನೇತೃತ್ವದಲ್ಲಿ ಬಸರಾಳು ಠಾಣೆ ಎಸ್ಐ ಜಯಗೌರಿ, ಸಿಬ್ಬಂದಿಗಳಾದ ನಿಲ್ಕುಮಾರ್, ರಾಜು, ಶಿವರಾಮು, ಗಿರೀಶ್, ಕೃಷ್ಣಕುಮಾರ್, ಸುಮಲತಾ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಮೃತನ ಶವದ ಬಲಗೈ ಮೇಲೆ ಶೈಲಜ ಹಾಗೂ ರಂಗ ಎಂದು ಹಾಗೂ ಎಡಗೈ ಮೇಲೆ ರಘು ಎಂಬ ಹಚ್ಚೆ ಗುರುತು ಇತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿದಾಗ ಕೆ.ಆರ್.ಪೇಟೆ ತಾಲ್ಲೂಕಿನ ಸೊಳ್ಳೇಪುರ ಗ್ರಾಮದ ರಂಗಪ್ಪ ಎಂಬುವವರ ಪುತ್ರ ಎಂಬುದು ಗೊತ್ತಾಗಿತ್ತು. ವಿಚಾರಣಾ ವೇಳೆ ರಂಗಪ್ಪ ಅವರು, ``ನನ್ನ ಮಗ ಜವರೇಗೌಡ, ತನ್ನ ಸೊಸೆ ಶೈಲಜ ಹಾಗೂ ಆಕೆಯ ಗೆಳೆಯ ಹರೀಶನ ಜೊತೆ ಅಕ್ರಮ ಸಂಬಂಧದ ಬಗ್ಗೆ ಜಗಳವಾಡುತ್ತಿದ್ದ. ಈ ಇಬ್ಬರ ಮೇಲೆ ಅನುಮಾನವಿದೆ ಎಂದು ಅರ್ಜಿ ಸಲ್ಲಿಸಿದ್ದರು.

ಇದರ ಮೇರೆಗೆ ಮೃತ ಜವರೇಗೌಡನ ಪತ್ನಿ ಶೈಲಜ ಹಾಗೂ ಗೆಳೆಯ ಹರೀಶನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ೨೦೧೯ರ ಸೆಪ್ಟಂಬರ್ ೧೮ರಂದು ಕುಂದೂರು ಗ್ರಾಮದ ಹೇಮಾವತಿ ನಾಲೆಯ ಬಳಿ ಕತ್ತು ಹಿಸುಕಿ ಕೊಲೆ ಮಾಡಿ ನಾಲೆಗೆ ಎಸೆದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳೇ ನೀಡಿದ ಮಾಹಿತಿಯ ಮೇರೆಗೆ ಜವರೇಗೌಡನ ಕೊಲೆಯಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬ ಆರೋಪಿ ಆನಂದನನ್ನು ವಶಕ್ಕೆ ಪಡೆದಿದ್ದು, ಮೂವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಕರಣ ಪತ್ತೆ ಹಚ್ಚಿದ ಡಿವೈಎಸ್ಪಿ ನವೀನ್ಕುಮಾರ್, ಎಸ್ಐ ಮಹೇಶ್, ಪಿಎಸ್ಐ ಜಯಗೌರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅಭಿನಂದಿಸಿದ್ದಾರೆ.

-ನಾಗಯ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com