• Tag results for wife

ಅನೈತಿಕ ಸಂಬಂಧ ಪ್ರಶ್ನಿಸಿದ್ದ ಪತಿ ಕೊಲೆ: 15 ವರ್ಷ ಹಿಂದಿನ ಮರ್ಡರ್ ಮಿಸ್ಟ್ರಿ - ಐವರು ಆರೋಪಿಗಳ ಬಂಧನ

ಪತಿಯನ್ನು ಸ್ವತಃ ಪತ್ನಿಯೇ ಕೊಲೆ ಮಾಡಿ ಮನೆಯ ಹಿತ್ತಲಲ್ಲಿ ಹೂತ್ತಿಟ್ಟಿದ್ದ ಸುಮಾರು ಒಂದುವರೆ ದಶಕದ ಪ್ರಕರಣವನ್ನು, ಸ್ವತಃ ಕೊಲೆಗಾತಿಯ ಮಗಳು ನೀಡಿದ ದೂರಿನ ಹಿನ್ನೆಲೆ ಬೇಧಿಸಿದ ಪೊಲೀಸರು, ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

published on : 2nd June 2020

ಗದಗ: ಪತಿಯ ಅಂತ್ಯಸಂಸ್ಕಾರಕ್ಕಾಗಿ ಮಂಗಳಸೂತ್ರ ಒತ್ತೆಯಿಟ್ಟ ಆ್ಯಂಬುಲೆನ್ಸ್ ಚಾಲಕನ ಪತ್ನಿ!

ಆ್ಯಂಬುಲೆನ್ಸ್ ಚಾಲಕನ ಪತ್ನಿ ಹಣವಿಲ್ಲದ ಕಾರಣ ತನ್ನ ಮಂಗಳಸೂತ್ರವನ್ನು ಅಡವಿಟ್ಟು ಪತಿಯ ಅಂತ್ಯ ಸಂಸ್ಕಾರ ನೆರವೇರಿಸಿದ ಹೃದಯ ವಿದ್ರಾವಕ ಘಟನೆ ಗದಗದಲ್ಲಿ ನಡೆದಿದೆ.ಈ ಸಂಬಂಧ ದೂರವಾಣಿ ಕರೆ ಮಾಡಿ ಮಾತನಾಡಿರುವ ಸಿಎಂ ಯಡಿಯೂರಪ್ಪ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

published on : 2nd June 2020

ಉತ್ತರ್ ಖಂಡ್: ಸಚಿವ ಸತ್ಪಾಲ್ ಮಹಾರಾಜ್ ಪತ್ನಿಗೆ ಕೋವಿಡ್-19 ಪಾಸಿಟಿವ್!

ಉತ್ತರ್ ಖಂಡ್ ಕ್ಯಾಬಿನೆಟ್ ಸಚಿವ ಸತ್ಪಲ್ ಮಹಾರಾಜ್ ಪತ್ನಿ ಅಮೃತಾ ರಾವತ್ ಗೆ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

published on : 31st May 2020

ಸ್ಮಾರ್ಟ್'ಫೋನ್ ಖರೀದಿಸಲು ಒಲ್ಲೆ ಎಂದ ಪತಿ: ಆತ್ಮಹತ್ಯೆಗೆ ಶರಣಾದ ಪತ್ನಿ!

ಸ್ಮಾರ್ಟ್'ಫೋನ್ ಖರೀದಿಸಲು ಪತಿ ನಿರಾಕರಿಸಿದ ಹಿನ್ನೆಲೆಯಲ್ಲಿ ನೊಂದ ಪತ್ನಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಮೈದಾನ್ ಗರ್ಹಿ ಪ್ರದೇಶದಲ್ಲಿ ನಡೆದಿದೆ. 

published on : 29th May 2020

ಹೆಂಡತಿಯನ್ನು ಕೊಲ್ಲಲು ಹಾವುಗಳನ್ನು ಖರೀದಿಸಿದ ಪತಿ, ಪೋಲೀಸ್ ತನಿಖೆಯಿಂದ ಬಯಲಾಯ್ತು ಭಯಾನಕ ಸತ್ಯ!

ಪತ್ನಿಯನ್ನು ಕೊಂದು ಹಾವು ಕಚ್ಚಿ ಸತ್ತಳೆಂದು ಕಥೆ ಹೆಣೆದಿದ್ದ ಪತಿರಾಯನನ್ನು ಪೋಲೀಸರು ಜೈಲಿಗಟ್ಟಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. 

published on : 26th May 2020

ಕೇರಳ: ನಾಗರಹಾವು ಕಚ್ಚಿಸಿ ಪತ್ನಿ ಹತ್ಯೆ ಮಾಡಿದ ಭೂಪ!

ವ್ಯಕ್ತಿಯೊಬ್ಬ ತನ್ನ ಪತ್ನಿ ಮಲಗಿದ್ದಾಗ ನಾಗರಹಾವು ಬಿಟ್ಟು ಹತ್ಯೆ ಮಾಡಿದ ಹತ್ಯೆ ಮಾಡಿದ ಭಯಾನಕ ಪ್ರಕರಣವನ್ನು ಕೇರಳ ಪೊಲೀಸರು ಭೇದಿಸಿದ್ದು, ಇದೊಂದು ಪೂರ್ವನಿಯೋಜಿತ ಕೃತ್ಯ ಎಂದು ಪೊಲೀಸರು ಹೇಳಿದ್ದಾರೆ.

published on : 25th May 2020

ಹುಟ್ಟುಹಬ್ಬದಂದೇ ನವಾಜುದ್ದೀನ್ ಸಿದ್ಧಿಕಿಗೆ ಶಾಕ್: ಡೈವೋರ್ಸ್ ನೊಟೀಸ್ ಕಳುಹಿಸಿದ ಪತ್ನಿ

ಈ ವಿವಾಹಕ್ಕೆ ನಾನು ಅಂತ್ಯ ಹಾಡುತ್ತಿದ್ದೇನೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಪತ್ನಿ ಅಲಿಯಾ ಸಿದ್ದಿಕಿ ವಾಟ್ಸಾಪ್ ಮತ್ತು ಇಮೇಲ್ ಮೂಲಕ ನೊಟೀಸ್ ಕಳುಹಿಸಿದ್ದಾರೆ.

published on : 19th May 2020

ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯನ್ನು ಕೊಂದು ಶವದೊಡನೆ ಎರಡು ದಿನ ಕಳೆದ ಪತಿ ಆತ್ಮಹತ್ಯೆ!

ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಂದು ಎರಡು ದಿನಗಳ ಬಳಿಕ ಸಂಬಂಧಿಗಳಿಗೆ ಸುದ್ದಿ ತಿಳಿಯುತ್ತಿದ್ದಂತೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿ ನಡೆದಿದೆ.  

published on : 16th May 2020

ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತು ಪತ್ನಿಯ ಹತ್ಯೆ; ಸ್ವತಃ ಪೊಲೀಸ್ ಠಾಣೆಗೆ ಶರಣಾದ ಆರೋಪಿ ಪತಿ

ಪತಿಯಿಂದಲೇ ಪತ್ನಿ ಹತ್ಯೆಯಾಗಿರುವ ಘಟನೆ ಕೃಷ್ಣರಾಜಪೇಟೆ ತಾಲ್ಲೂಕಿನ ಮೂಡನಹಳ್ಳಿ ಗ್ರಾಮದ ಬಳಿ ನಡೆದಿದೆ. ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮ ಪತ್ನಿ ಮುನಿಯಮ್ಮ (30)ಎಂಬಾಕೆಯೇ ತನ್ನ ಪತಿ ಸ್ವಾಮಿ(40)ಯಿಂದ ಹತ್ಯೆಯಾಗಿದ್ದಾಳೆ.

published on : 12th May 2020

ಹೊಸಪೇಟೆ: ಪತ್ನಿಯ ಶೀಲ ಶಂಕಿಸಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಪತಿ

ಪತ್ನಿಯ ಶೀಲ ಶಂಕಿಸಿದ ಕಿರಾತಕ ಪತಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಿನ್ನೆ ರಾತ್ರಿ  ನಡೆದಿದೆ. ರುಂಡ ಮುಂಡ ಬೇರ್ಪಡಿಸಿ ವಿಕೃತವಾಗಿ ಆರೋಪಿ ಕೊಲೆ ಮಾಡಿದ್ದಾನೆ. 

published on : 8th May 2020

ಎರಡನೇ ಪತ್ನಿ ಮರಿನಾಗೆ ವಿಚ್ಛೇದನ ನೀಡಿದ ಬ್ರಿಟನ್ ಪ್ರಧಾನಿ ಬೋರಿಸ್

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಅವರು ಕೊನೆಗೂ ತಮ್ಮ ಎರಡನೇ ಪತ್ನಿ ಮರಿನಾ ವೀಲರ್ ಅವರಿಗೆ ಅಧಿಕೃತವಾಗಿ ವಿಚ್ಛೇದನ ನೀಡಿದ್ದಾರೆ. 

published on : 7th May 2020

ಬೆಂಗಳೂರು: ಕುಡಿದ ಮತ್ತಿನಲ್ಲಿ ಪತ್ನಿ ಕತ್ತು ಸೀಳಿ ಕೊಂದು ಕಾರು ಚಾಲಕ ಪರಾರಿ

ನಶೆಯಲ್ಲಿದ್ದ ಕಾರು ಚಾಲಕ ತನ್ನ ಪತ್ನಿಯನ್ನು ಚಾಕುವಿನಿಂದ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಮಾದನಾಯ್ಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

published on : 7th May 2020

ದಿನಸಿ ಸಾಮಾಗ್ರಿ ತರಲು ಕಳುಹಿಸಿದ್ರೆ, ಹೆಂಡತಿ ಕರೆತಂದ ಭೂಪ: ತಾಯಿಗೆ ಆಘಾತ!

ದಿನಸಿ ಸಾಮಾಗ್ರಿ ತರುವಂತೆ ಅಂಗಡಿಗೆ ಕಳುಹಿಸಿದರೆ, ಹೆಂಡತಿ ಕರೆತಂದು ನಿಲ್ಲಿಸಿದ ಪುತ್ರನನ್ನು ಕಂಡು ತಾಯಿಯೊಬ್ಬರೂ ಆಘಾತಕ್ಕೊಳಗಾದ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ. 

published on : 30th April 2020

ಮಂಗಳೂರು: ಜಮೀನು ವಿವಾದ-ನೆರೆಮನೆಯಾತನಿಂದ ದಂಪತಿಯ ಬರ್ಬರ ಹತ್ಯೆ

ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ಹಾಡಹಗಲೇ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಗಳೂರು ಹೊರವಲಯ ಕಿನ್ನಿಗೋಳಿ ಏಳಿಂಜೆ ಎಂಬಲ್ಲಿ ನಡೆದಿದೆ.

published on : 29th April 2020

ತಮಿಳು ನಟ ಸೂರ್ಯ ಸಿನಿಮಾಗಳಿಗೆ ನಿಷೇಧದ ಎಚ್ಚರಿಕೆ! 

ತಮಿಳುನಾಡಿನ ನಟ ಸೂರ್ಯ ಸಿನಿಮಾಗಳಿಗೆ ನಿಷೇಧ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. 

published on : 25th April 2020
1 2 3 4 5 6 >