ನಕಲಿ ಎಟಿಎಂ ಕಾರ್ಡ್‌ ಬಳಸಿ ಹಣ ಡ್ರಾ ಮಾಡುತ್ತಿದ್ದ ನೈಜೀರಿಯಾದ ಇಬ್ಬರು ಸೇರಿ ಮೂವರ ಬಂಧನ; 54 ಪ್ರಕರಣ ಬೆಳಕಿಗೆ

ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಕಲಿ ಕಾರ್ಡ್‌ಗಳ ಮೂಲಕ ಹಣ ಡ್ರಾ ಮಾಡುತ್ತಿದ್ದ ನೈಜೀರಿಯಾದ ಇಬ್ಬರು ಪ್ರಜೆಗಳು ಸೇರಿ ಮೂವರನ್ನು ಬಂಧಿಸುವಲ್ಲಿ ರಾಮನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಕಲಿ ಎಟಿಎಂ ಕಾರ್ಡ್‌ ಬಳಸಿ ಹಣ ಡ್ರಾ ಮಾಡುತ್ತಿದ್ದ ನೈಜೀರಿಯಾದ ಇಬ್ಬರು ಸೇರಿ ಮೂವರ ಬಂಧನ; 54 ಪ್ರಕರಣ ಬೆಳಕಿಗೆ
ನಕಲಿ ಎಟಿಎಂ ಕಾರ್ಡ್‌ ಬಳಸಿ ಹಣ ಡ್ರಾ ಮಾಡುತ್ತಿದ್ದ ನೈಜೀರಿಯಾದ ಇಬ್ಬರು ಸೇರಿ ಮೂವರ ಬಂಧನ; 54 ಪ್ರಕರಣ ಬೆಳಕಿಗೆ

ಬೆಂಗಳೂರು: ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಕಲಿ ಕಾರ್ಡ್‌ಗಳ ಮೂಲಕ ಹಣ ಡ್ರಾ ಮಾಡುತ್ತಿದ್ದ ನೈಜೀರಿಯಾದ ಇಬ್ಬರು ಪ್ರಜೆಗಳು ಸೇರಿ ಮೂವರನ್ನು ಬಂಧಿಸುವಲ್ಲಿ ರಾಮನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಇವರು ವೀಸಾ ಅವಧಿ ಮುಗಿದರೂ ತಮ್ಮ ದೇಶಗಳಿಗೆ ತೆರಳದರೆ ಇಲ್ಲೇ ಮೊಕ್ಕಾಂ ಹೂಡಿ ಇಂತಹ ಕೃತ್ಯವೆಸಗುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಬಂಧಿತ ನೈಜೀರಿಯಾದ ಅಲೂಕ ಸಾಂಡ್ರಾ ಒರೆಯಾ (25), ಹೆನ್ರಿ  ಅಕ್ಯುಟಿಮೆನ್ (25) ಹಾಗೂ ಮಹಾರಾಷ್ಟ್ರದ ಪುಣೆ ಮೂಲದ ವಿಜಯ್ ಥಾಮಸ್ ಬಿಂಗರ್  ಡೈವ್(28) ಬಂಧಿತ ಆರೋಪಿಗಳು. ಇವರ ಬಂಧನದಿಂದ ನಗರ ಸುತ್ತಮುತ್ತ ನಡೆದಿದ್ದ 54 ಪ್ರಕರಣಗಳು ಬೆಳಕಿಗೆ ಬಂದಿವೆ.

 ಗ್ರಾಹಕರ ಸೋಗಿನಲ್ಲಿ ಜನನಿಬಿಡ  ಎಟಿಎಂ ಕೇಂದ್ರಗಳಿಗೆ ತೆರಳಿ ಸ್ಕಿಮ್ಮಿಂಗ್ ಮಿಷಿನ್ ಅಳವಡಿಸಿ ಗ್ರಾಹಕರ ಎಟಿಎಂ ಮಾಹಿತಿ  ಕದಿಯುತ್ತಿದ್ದ ಆರೋಪಿಗಳು ನಕಲಿ ಎಟಿಎಂ ಕಾರ್ಡ್‌ಗೆ ಮಾಹಿತಿಯನ್ನು ತುಂಬಿ ಹಣ ಡ್ರಾ  ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ದಾಖಲಾದ ಹಲವು ದೂರುಗಳ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.

ಕಳೆದ  ನವೆಂಬರ್‌ನಲ್ಲಿ ನಕಲಿ ಎಟಿಎಂ ಮಾಹಿತಿ  ಕದ್ದು, ಹಣ ಡ್ರಾ ಮಾಡಿದ್ದ ನೈಜೀರಿಯಾ ದೇಶದ ಎರ್ಹಮಾನ್ ಸ್ಮಾರ್ಟ್ ಅಲಿಯಾಸ್ ಗೋಡ್ಸನ್, ಉಡೋ  ಕ್ರಿಸ್ಟಿಯನ್, ತಾಂಜೇನಿಯಾ ದೇಶದ ಮಥಿಯಾಸ್ ಅಲಿಯಾಸ್ ಕಾಕಾ ಎಂಬ ವಿದ್ಯಾರ್ಥಿಗಳು ಜೈಲು  ಸೇರಿದ್ದರು. ಅವರನ್ನು ಜಾಮೀನಿನ ಮೇಲೆ ಬಿಡಿಸಲು ಬಂಧಿತ ಆರೋಪಿಗಳು ಅಪರಾಧ ಕೃತ್ಯಕ್ಕೆ  ಇಳಿದಿರುವುದು ತನಿಖೆಯಲ್ಲಿ ಕಂಡುಬಂದಿದೆ. 

ಆರೋಪಿಗಳಲ್ಲಿ ನೈಜೀರಿಯನ್‌ಗಳಾದ ಸಾಂಡ್ರಾ  ಒರೆಯಾ ಹಾಗೂ ಹೆನ್ರಿ ಅಕ್ಯುಟಿಮೆನ್ ವಿದ್ಯಾಭ್ಯಾಸಕ್ಕೆ ಬಂದು ವೀಸಾ ಅವಧಿ ಮುಗಿದರೂ  ದೇಶಕ್ಕೆ ತೆರಳದೇ ಪುಣೆ ಇನ್ನಿತರ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳಿಂದ 60 ಸಾವಿರ ನಗದು, ಲ್ಯಾಪ್‌ಟಾಪ್, ಮೊಬೈಲ್, ಅಲ್ಲದೇ ನಾಲ್ಕು  ಪಾಸ್‌ಪೋರ್ಟ್ ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ಸ್ಕಿಮ್ಮಿಂಗ್ ಮಿಷಿನ್‌ಗಳನ್ನು  ವಶಪಡಿಸಿಕೊಳ್ಳಲಾಗಿದೆ ಎಂದು ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.

ಆರೋಪಿಗಳ ಬಂಧನದಿಂದ ರಾಮನಗರದಲ್ಲಿ 44 ಪ್ರಕರಣಗಳು, ಬೆಂಗಳೂರು ಸೈಬರ್ ಠಾಣೆಯಲ್ಲಿ 6 ಹಾಗೂ ಚಿತ್ರದುರ್ಗ ಸೈಬರ್ ಠಾಣಾ 4 ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com