ಚಾಮರಾಜನಗರ: ಅಂಬ್ಯುಲೆನ್ಸ್ ಸಿಬ್ಬಂದಿಯ ನಿರ್ಲಕ್ಷ್ಯ, ಅರಣ್ಯ ಇಲಾಖೆ ಜೀಪಿನಲ್ಲಿ ಜನಿಸಿದ್ದ ಶಿಶು ಆಸ್ಪತ್ರೆಯಲ್ಲಿ ಸಾವು

ಆಸ್ಪತ್ರೆಯ ಆ್ಯಂಬುಲೆನ್ಸ್​ ಸಿಬ್ಬಂದಿ ಸರಿಯಾಗಿ ಸ್ಪಂದಿಸದೆ ಚೆಲ್ಲಾಟವಾಡಿದ ಪರಿಣಾಮ ಆಗತಾನೆ ಜನಿಸಿದ್ದ ಶಿಶು ಅಸುನೀಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಚಾಮರಾಜನಗರ: ಅಂಬ್ಯುಲೆನ್ಸ್ ಸಿಬ್ಬಂದಿಯ ನಿರ್ಲಕ್ಷ್ಯ, ಅರಣ್ಯ ಇಲಾಖೆ ಜೀಪಿನಲ್ಲಿ ಜನಿಸಿದ್ದ ಶಿಶು ಆಸ್ಪತ್ರೆಯಲ್ಲಿ ಸಾವು
ಚಾಮರಾಜನಗರ: ಅಂಬ್ಯುಲೆನ್ಸ್ ಸಿಬ್ಬಂದಿಯ ನಿರ್ಲಕ್ಷ್ಯ, ಅರಣ್ಯ ಇಲಾಖೆ ಜೀಪಿನಲ್ಲಿ ಜನಿಸಿದ್ದ ಶಿಶು ಆಸ್ಪತ್ರೆಯಲ್ಲಿ ಸಾವು

ಚಾಮರಾಜನಗರ: ಆಸ್ಪತ್ರೆಯ ಆ್ಯಂಬುಲೆನ್ಸ್​ ಸಿಬ್ಬಂದಿ ಸರಿಯಾಗಿ ಸ್ಪಂದಿಸದೆ ಚೆಲ್ಲಾಟವಾಡಿದ ಪರಿಣಾಮ ಆಗತಾನೆ ಜನಿಸಿದ್ದ ಶಿಶು ಅಸುನೀಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಆ್ಯಂಬುಲೆನ್ಸ್​ ಸಿಬ್ಬಂದಿಗೆ ಎಷ್ಟು ಬಾರಿ ಕರೆ ಮಾಡಿದರೂ ಸ್ಪಂದಿಸಿರಲಿಲ್ಲ. ಅರಣ್ಯ ಇಲಾಖೆಯ ಜೀಪಿನಲ್ಲೇ ಸೋಲಿಗ ಜನಾಂಗದ ಗರ್ಭಿಣಿ ಮಾದಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ಕರೆ ತರಲಾಯಿತು. 

ಆದರೆ, ಆಸ್ಪತ್ರೆ ಆವರಣದಲ್ಲೇ ಆಕೆಗೆ ಹೆರಿಗೆಯಾಗಿತ್ತು. ಕೂಡಲೇ ಶಿಶು ಮತ್ತು ತಾಯಿಗೆ ತುರ್ತ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು.ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ. 

ಆ್ಯಂಬುಲೆನ್ಸ್​ ಸಿಬ್ಬಂದಿ ಚೆಲ್ಲಾಟದಿಂದ ಈಗ ನವಜಾತ ಶಿಶು ಜೀವ ಕಳೆದುಕೊಂಡಿದೆ ಎಂದು ತಾಯಿ ಕಣ್ಣೀರು ಹಾಕುತ್ತಿದ್ದಾಳೆ. 

ಬಿಳಿಗಿರಿರಂಗನ ಬೆಟ್ಟದ ಭೂತಾಣಿ ಪೋಡಿನ ಮಾದಮ್ಮ ಎಂಬಾಕೆ ಜೀಪಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದರು.ಅರಣ್ಯ ಇಲಾಖೆ ಜೀಪಿನಲ್ಲಿ ಜನಿಸಿದ್ದ ಶಿಶು ಆಸ್ಪತ್ರೆಯಲ್ಲಿ ಸಾವುಮಾದಮ್ಮನಿಗೆ ಇದು ಎರಡನೇ ಹೆರಿಗೆಯಾಗಿದೆ. 

ಆ್ಯಂಬುಲೆನ್ಸ್​ಗೆ ಹಲವು ಬಾರಿ ಕರೆ ಮಾಡಿದರೂ ಸ್ಪಂದಿಸಲಿಲ್ಲ. ಕೊನೆಗೆ ಆ್ಯಂಬುಲೆನ್ಸ್ ಇಲ್ಲ, ಮೈಸೂರಿಗೆ ತೆರಳಿರುವುದಾಗಿ ಉತ್ತರಿಸಿದರು ಎಂದು ಮಾದಮ್ಮನ ಸಹೋದರಿ ಮಲ್ಲಮ್ಮ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com