ಈ ದಂಪತಿಗೆ ಸುಧಾಮೂರ್ತಿಯವರೇ ಪ್ರೇರಣೆ: ಸರ್ಕಾರಿ ಶಾಲೆ ನಿರ್ಮಾಣಕ್ಕೆ 1.9 ಕೋಟಿ ರೂ. ಕೊಡುಗೆ

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿಯವರಿಂದ ಸ್ಪೂರ್ತಿ ಪಡೆದು ಕಂಪೆನಿಯ ಮಾಜಿ ಉದ್ಯೋಗಿಗಳಾದ ಹರ್ಷ ಮತ್ತು ಮಮತ ದಂಪತಿ ತುಮಕೂರು ಜಿಲ್ಲೆಯ ಕೋರಾ ಗ್ರಾಮದಲ್ಲಿ ಸುಸಜ್ಜಿತ ಸರ್ಕಾರಿ ಶಾಲೆಯನ್ನು ನಿರ್ಮಿಸಲು ಮುಂದಾಗಿದ್ದಾರೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತುಮಕೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿಯವರಿಂದ ಸ್ಪೂರ್ತಿ ಪಡೆದು ಕಂಪೆನಿಯ ಮಾಜಿ ಉದ್ಯೋಗಿಗಳಾದ ಹರ್ಷ ಮತ್ತು ಮಮತ ದಂಪತಿ ತುಮಕೂರು ಜಿಲ್ಲೆಯ ಕೋರಾ ಗ್ರಾಮದಲ್ಲಿ ಸುಸಜ್ಜಿತ ಸರ್ಕಾರಿ ಶಾಲೆಯನ್ನು ನಿರ್ಮಿಸಲು ಮುಂದಾಗಿದ್ದಾರೆ.

ಎಲ್ ಆಕಾರದ ಎರಡು ಮಹಡಿಯ ಕಟ್ಟಡದ ವೆಚ್ಚ ಸುಮಾರು 1.9 ಕೋಟಿ ರೂಪಾಯಿಗಳಾಗಲಿದ್ದು ಸಿದ್ದವಾಗಲು 15 ತಿಂಗಳು ಬೇಕಾಗಬಹುದು.

ಹರ್ಷ ಎಂಬುವವರು ಹಿರಿಯ ಪತ್ರಕರ್ತ ಹೀರೇಕುಂಬಲಗುಂಟೆ ಮಠ ನಾಗಯ್ಯ ಅವರ ಪುತ್ರ. ಕೋರಾ ಗ್ರಾಮದಲ್ಲಿ ಹುಟ್ಟಿ 3ನೇ ತರಗತಿಯವರೆಗೆ ಅಲ್ಲಿ ಕಲಿತ ತಮ್ಮ ತಾಯಿ ಸರ್ವಮಂಗಲ ನೆನಪಿಗಾಗಿ ಪುತ್ರ ಹರ್ಷ ಶಾಲೆ ಕಟ್ಟಿಸುತ್ತಿದ್ದಾರೆ.

ಅವರ ಕುಟುಂಬ ಬಳ್ಳಾರಿ ಜಿಲ್ಲೆಯ ಹಿರೆಕುಂಬಲಗುಂಟೆ ಎಂಬಲ್ಲಿ ಶಾಲೆ ನಿರ್ಮಾಣಕ್ಕೆ 3.20 ಕೋಟಿ ರೂಪಾಯಿಗಳನ್ನು ನೀಡಿತ್ತು. ''ಮೊದಲಿನ ಶಾಲೆಯನ್ನು ನಮ್ಮ ತಂದೆಯವರ ನೆನಪಿಗಾಗಿ ಕಟ್ಟಲಾಗಿತ್ತು. ಇದೀಗ ಈ ಶಾಲೆಯನ್ನು ನನ್ನ ತಾಯಿಯ ಸ್ಮರಣಾರ್ಥ ಕಟ್ಟಿಸುತ್ತಿದ್ದೇವೆ, ನನ್ನ ಈ ಕೆಲಸಕ್ಕೆ ಸುಧಾಮೂರ್ತಿಯವರೇ ಪ್ರೇರಣೆ. ಇನ್ಫೋಸಿಸ್ ನಲ್ಲಿ ನಾನು 20 ವರ್ಷ ಕೆಲಸ ಮಾಡಿದ್ದೆ'' ಎನ್ನುತ್ತಾರೆ. 

ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಹರ್ಷ ಅವರ ಪತ್ನಿ ಮಮತಾ ಕಂಪ್ಯೂಟರ್ ಸೈನ್ಸ್ ಪದವೀಧರೆ. ಇನ್ಫೋಸಿಸ್ ನಲ್ಲಿ ಕೆಲಸ ಮಾಡಿ ಸುಧಾಮೂರ್ತಿಯವರ ಸಮಾಜಸೇವೆಯಿಂದ ಪ್ರೇರಣೆಗೊಂಡು ಶಾಲೆ ನಿರ್ಮಿಸುವ ಮಾದರಿ ಕೆಲಸದಲ್ಲಿ ತೊಡಗಿದ್ದಾರೆ. 

ದಂಪತಿ ಈ ಸಂಬಂಧ ಗ್ರಾಮ ಪಂಚಾಯತ್ ಜೊತೆ ಒಪ್ಪಂದಕ್ಕೆ ಸಹಿ ಮಾಡಿದ್ದು ಸ್ಥಳೀಯ ಗುತ್ತಿಗೆದಾರರು ಮುಂದಿನ ಸೋಮವಾರದಿಂದ ಕೆಲಸ ಆರಂಭಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com