ದಾವಣಗೆರೆ: ಕೊರೋನಾ ಲಸಿಕೆ ಕಾರ್ಯಕ್ರಮ ನಿಲ್ಲಿಸಿದ ಪೋಲೀಸರು!

ನಗರದ ಈಶ್ವರಮ್ಮ ಸ್ಕೂಲ್ ಆಫ್ ಪಿಜೆ ಎಕ್ಸ್ಟೆನ್ಷನ್ ನಲ್ಲಿ ಮಾರಕ ಕೊರೋನಾವೈರಸ್ ಗಾಗಿ ಲಸಿಕೆ ಕಾರ್ಯಕ್ರಮದ ಹೆಸರಲ್ಲಿ ಸಾರ್ವಜನಿಕರರಿಗೆ ಲಸಿಕೆ ವಿತರಣೆ ನಡೆಸುವುದನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು  ತಡೆಹಿಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ದಾವಣಗೆರೆ: ನಗರದ ಈಶ್ವರಮ್ಮ ಸ್ಕೂಲ್ ಆಫ್ ಪಿಜೆ ಎಕ್ಸ್ಟೆನ್ಷನ್ ನಲ್ಲಿ ಮಾರಕ ಕೊರೋನಾವೈರಸ್ ಗಾಗಿ ಲಸಿಕೆ ಕಾರ್ಯಕ್ರಮದ ಹೆಸರಲ್ಲಿ ಸಾರ್ವಜನಿಕರರಿಗೆ ಲಸಿಕೆ ವಿತರಣೆ ನಡೆಸುವುದನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು  ತಡೆಹಿಡಿದ್ದಾರೆ.

ಶನಿವಾರ ದಾವಣಗೆರೆ ಪಿಜೆ ಎಕ್ಸ್ಟೆನ್ಷನ್  ರಾಘವೇಂದ್ರ ಸ್ವಾಮಿ ಮಠದ ಬಳಿ ಇರುವ ಶಾಲೆಯಲ್ಲಿ ಕೊರೋನಾವೈರಸ್ ತಡೆಗಾಗಿ ಹೋಮಿಯೋಪತಿ ಹನಿಗಳನ್ನು ಸಾರ್ವಜನಿಕರಿಗೆ ಲಸಿಕೆ  ರೂಪದಲ್ಲಿ ವಿತರಿಸುವ ಕಾರ್ಯಕ್ರಮವಿತ್ತು. ಈ ಕುರಿತು ಮಾಹಿತಿ ಪಡೆದ  ಡಿಎಚ್‌ಒ ಡಾ.ರಾಘವೇಂದ್ರ ಸ್ವಾಮಿ.ತಕ್ಷಣ ಸ್ಥಳಕ್ಕೆ ತೆರಳಿ ಅದನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. 

ಆದರೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸುವ ಹೊತ್ತಿಗಾಗಲೇ ಅನೇಕರು ಈ ಹೋಮಿಯೋಪತಿ ಔಷದಿ ಸೇವನೆ ಮಾಡಿದ್ದರು.

'ಈ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ನಿಲ್ಲಿಸುವಲ್ಲಿ ನಾವು ತೊಂದರೆಗಅನುಭವಿಸಿದ್ದೆವು. ಆದರೆ ಅಂತಿಮವಾಗಿ  ವ್ಯಾಕ್ಸಿನೇಷನ್  ಕಾರ್ಯಕ್ರಮ ನಿಲ್ಲಿಸಿದ್ದಾರೆ. ನಾವು ಕಾರ್ಯಕ್ರಮಕ್ಕಾಗಿ ಕೊಠಡಿ ನೀಡಿರುವ ಶಾಲಾ ಮುಖ್ಯೋಪಾದ್ಯಾಯರ ವಿರುದ್ಧ ಕ್ರಮ ಜರುಗಿಸುವುದಾಗಿ ಬೆದರಿಸಿದಾಗ ಅವರು ಸ್ಥಳದಿಂದ ಹೊರನಡೆದರು." ಡಾ.ರಾಘವೇಂದ್ರಸ್ವಾಮಿ ಹೇಳಿದ್ದಾರೆ.

'ಲಸಿಕೆ ಹಾಕಿದ ವ್ಯಕ್ತಿಗಳು ಮತ್ತು ಕಾರ್ಯಕ್ರಮಕ್ಕಾಗಿ ಕಟ್ಟಡವನ್ನು ನೀಡಿದ ದ ಶಾಲಾ ಅಧಿಕಾರಿಗಳ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ, ಜನರು ಕೊರೋನಾ ಲಸಿಕೆ ಬಗೆಗೆ ಸುಳ್ಳು ವದಂತಿಗಳನ್ನು ನಂಬಬಾರದು" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com