ಹಲ್ಲೆಗೊಳಗಾದ ಪತ್ರಕರ್ತ
ರಾಜ್ಯ
ಗಂಗಾವತಿ: ಅಕ್ರಮ ಮರಳು ಬಗ್ಗೆ ವರದಿ: ಪತ್ರಕರ್ತನ ಮೇಲೆ ಹಲ್ಲೆ
ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ವರದಿ ಬರೆದ ಕಾರಣಕ್ಕೆ ಪತ್ರಕರ್ತ ಒಬ್ಬರ ಮೇಲೆ ಕೆಲವರು ಹಲ್ಲೆಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಗರದಲ್ಲಿ ತಡರಾತ್ರಿ ನಡೆದಿದೆ.
ಗಂಗಾವತಿ: ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ವರದಿ ಬರೆದ ಕಾರಣಕ್ಕೆ ಪತ್ರಕರ್ತ ಒಬ್ಬರ ಮೇಲೆ ಕೆಲವರು ಹಲ್ಲೆಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಗರದಲ್ಲಿ ತಡರಾತ್ರಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಮಾಸಪತ್ರಿಕೆಯೊಂದರ ಸಂಪಾದಕ ಹಾಗೂ ಕನ್ನಡಸೇನೆ ಸಂಘಟನೆಯ ಮುಖಂಡ ಚನ್ನಬಸವ ಜೆಕೀನ್ ಎಂದು ಗುರುತಿಸಲಾಗಿದೆ.
ಗಾಯಾಳು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಗರಠಾಣೆಯಲ್ಲಿ ಬಸವನಗೌಡ ಕಕ್ಕರಗೋಳ, ಹೈಯತ್ ಪೀರಾ ಹೆಬ್ಬಾಳ ಹಾಗೂ ಗಂಗಾವತಿಯ ಸ್ವಾಮಿ, ಉಮೇಶ, ನಾಗರಾಜ್ ಇತರೆ 15ಜನರ ಮೇಲೆ ದೂರು ದಾಖಲಾಗಿದೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಆಶ್ರಯದಲ್ಲಿ ಗಂಗಾವತಿಯಲ್ಲಿ ಮರಳು ದಂಧೆ ನಡೆಸಲಾಗುತ್ತಿದೆ ಎಂದು ಉಲ್ಲೇಖಿಸಿ ಚನ್ನಬಸವ ಜೇಕಿನ್ ವರದಿ ಬರೆದಿದ್ದನ್ನು ಆರೋಪಿಗಳು ಆಕ್ಷೇಪಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ವರದಿ: ಎಂ ಜೆ ಶ್ರೀನಿವಾಸ್
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ