ಭದ್ರಾವತಿಯಲ್ಲಿ ಶಿಲಾಯುಗದ ಸ್ಮಾರಕಕಗಳ ಕುರುಹು ಪತ್ತೆ

ಶಿವಮೊಗ್ಗ ಜಿಲ್ಲೆಯ ವಿವಿಧ ತಾಣಗಳಲ್ಲಿ ಕ್ರಿ.ಪೂ 1,200-1,000ರ ನಡುವೆ  ಶ್ರೀಮಂತ ಶಿಲಾಯುಗ ಇಲ್ಲಿತ್ತು ಎನ್ನುವುದನ್ನು ಇತ್ತೀಚಿನ ಉತ್ಖನನಗಳು ಬಹಿರಂಗವಾಗಿಸಿದೆ.  ತೀರ್ಥಹಳ್ಳಿ ಮತ್ತು ಹೊಸನಗರ ತಾಲ್ಲೂಕುಗಳ ಹೊರತಾಗಿ, ಭದ್ರಾವತಿ ತಾಲ್ಲೂಕಿನ ಅರಣ್ಯ ಭೂಮಿಯಲ್ಲಿ ಸಹ ಇದರ ಕುರುಹುಗಳು ಇತ್ತೀಚೆಗೆ ಸಿಕ್ಕಿದ್ದು ಆ ಶ್ರೀಮಂತ ಇತಿಹಾಸವನ್ನು ಹಾಗೂ ಹೆಮ್ಮೆಯ ಸಂಸ್ಕೃತಿಯನ್ನ
ಶಿಲಾಯುಗಕ್ಕೆ ಸೇರಿದ ಕಲ್ಲು
ಶಿಲಾಯುಗಕ್ಕೆ ಸೇರಿದ ಕಲ್ಲು

ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ವಿವಿಧ ತಾಣಗಳಲ್ಲಿ ಕ್ರಿ.ಪೂ 1,200-1,000ರ ನಡುವೆ  ಶ್ರೀಮಂತ ಶಿಲಾಯುಗ ಇಲ್ಲಿತ್ತು ಎನ್ನುವುದನ್ನು ಇತ್ತೀಚಿನ ಉತ್ಖನನಗಳು ಬಹಿರಂಗವಾಗಿಸಿದೆ.  ತೀರ್ಥಹಳ್ಳಿ ಮತ್ತು ಹೊಸನಗರ ತಾಲ್ಲೂಕುಗಳ ಹೊರತಾಗಿ, ಭದ್ರಾವತಿ ತಾಲ್ಲೂಕಿನ ಅರಣ್ಯ ಭೂಮಿಯಲ್ಲಿ ಸಹ ಇದರ ಕುರುಹುಗಳು ಇತ್ತೀಚೆಗೆ ಸಿಕ್ಕಿದ್ದು ಆ ಶ್ರೀಮಂತ ಇತಿಹಾಸವನ್ನು ಹಾಗೂ ಹೆಮ್ಮೆಯ ಸಂಸ್ಕೃತಿಯನ್ನು ಸಾಕ್ಷಿಕರಿಸಿದೆ. 

ಭಾದ್ರಾವತಿ ತಾಲ್ಲೂಕಿನಲ್ಲಿ ಅರಣ್ಯ ಭೂಮಿಯ ಗಡಿಯ ಬೇಲಿಯೊಂದರಲ್ಲಿ ಇಂತಹ ಪುರಾತನ ಶಿಲೆಯು ಕಂಡುಬಂದಿದೆ. ಸ್ಥಳೀಯ ಜನರಿಗೆ ತಮ್ಮ ಸುತ್ತಮುತ್ತಲಿನ ಅಂತಹ ಮಹತ್ವದ ಐತಿಹಾಸಿಕ ಸ್ಥಳದ ಬಗೆಗೆ ಅರಿವಿಲ್ಲ. 7.5 ಅಡಿ ಎತ್ತರದ ಕಲ್ಲು ಬದಲಾಗುತ್ತಿರುವ ಭೂ ಮಾದರಿಗಳು ಮತ್ತು ನಗರೀಕರಣದ ಮಧ್ಯೆ  ಕಳೆದ ಸಮಯದ ಸಾಕ್ಷಿಯಾಗಿ ನಿಂತಿದೆ. ಇನ್ನೂ ರೇಡಿಯೊ-ಕಾರ್ಬನ್ ಡೇಟ್ ಹೊಂದಿಲ್ಲವಾದರೂ  ಇದು 3,000 ವರ್ಷಗಳಿಗಿಂತಲೂ ಹಳೆಯದು ಎಂದು ಅಂದಾಜಿಸಲಾಗಿದೆ. ಈ  ಕಲ್ಲಿನ ಸುತ್ತಲೂ ಒಂದು ದೊಡ್ಡ ನೈಸರ್ಗಿಕ ಬಂಡೆಯನ್ನು ಸಹ ನೋಡಬಹುದು ಅಂದರೆ ಇದರ ಮೇಲೆ ಅದನ್ನು ಕೆತ್ತಿರಬೇಕು.

ಶಿವಮೊಗ್ಗದ ಪುರಾತತ್ವ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ವಿಭಾಗದ ಸಹಾಯಕ ನಿರ್ದೇಶಕ ಶೇಜೇಶ್ವರ್  ಆರ್ ಅವರ ಪ್ರಕಾರ, ಮಲೆನಾಡು ಪ್ರದೇಶದಲ್ಲಿ  ಮೆಗಾಲಿಥಿಕ್ ತಾಣಗಳ ಆವಿಷ್ಕಾರಗಳು ನಡೆದಿವೆ ಮತ್ತು ಈ ನಿರ್ದಿಷ್ಟ ಶಿಲೆ ಭದ್ರಾವತಿಯ ಹೊಸಾನಂಜಪುರ ಗ್ರಾಮದ ವಿಐಎಸ್ಎಲ್ ಜಮೀನಿನ ಪಕ್ಕದಲ್ಲಿರುವ ಅರಣ್ಯ ಭೂಮಿಯಲ್ಲಿ ಪತ್ತೆಯಾಗಿದೆ.

"ಗ್ರಾಮಸ್ಥರು ಮತ್ತು ಹಿಂದಿನ ವಸಾಹತುಗಳ ಮಧ್ಯೆ ಶಿಲೆ  ಬಹಳ ಕಾಲದಿಂದಲೂ ಅಸ್ತಿತ್ವದಲ್ಲಿದೆ ಮತ್ತು ವಾಸ್ತವವಾಗಿ ಇದು ಸಮಾಧಿ ಕಲ್ಲು. ಮೆನ್‌ಹಿರ್‌ಗಳು ಸಾಮಾನ್ಯವಾಗಿ ಬಲಭಾಗದ ಕಡೆಗೆ ಓರೆಯಾಗುತ್ತಾರೆ. ಅದೇ ಸ್ಥಳದಲ್ಲಿ ಒಂದು ದೊಡ್ಡ ನೈಸರ್ಗಿಕ ಕಲ್ಲು ಕೂಡ ಇದೆ ಮತ್ತು ನಾವು ಈ ತಾಣವನ್ನು ವಿವರವಾಗಿ ಅಧ್ಯಯನ ಮಾಡಬೇಕಾಗಿದೆ ” ಅವರು ಹೇಳೀದ್ದಾರೆ.

ಶಿಲಾಯುಗ ರಚನೆಗಳು ಸಾಮಾನ್ಯವಾಗಿ ಸಮಾಧಿ ಉದ್ದೇಶಕ್ಕಾಗಿಅಥವಾ ಸ್ಮರಣೆಗಾಗಿ ಅಥವಾ ಕೆಲ ಸಂಪ್ರದಾಯ ಆಚರಣೆಗಳ ನಡೆಯುವ  ‘ದೊಡ್ಡ ಕಲ್ಲುಗಳಿಂದ’ ನಿರ್ಮಿಸಲಾದ ಸ್ಮಾರಕಗಳಾಗಿವೆ.ಆದಾಗ್ಯೂ, ಪ್ರಾಚೀನ ಜನರು ಇಂತಹಾ ಶಿಲೆ ಬಳಸುವುದರ ಹಿಂದಿನ ಉದ್ದೇಶದ ಕುರಿತು ಅನೇಕ ಪ್ರಶ್ನೆಗಳಿದೆ.  ಆ ದಿನಗಳಲ್ಲಿ ಜನರು ಒಂದೇ ಸ್ಥಳಕ್ಕೆ ಸೇರಿದ್ದರು,  ಕೆಲವು ರೀತಿಯ ಧಾರ್ಮಿಕ ಅಥವಾ ವಿಧ್ಯುಕ್ತ ಜೀವನಶೈಲಿಯನ್ನು ಅನುಸರಿಸುತ್ತಿದ್ದರು ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ.ಈ ಕಲ್ಲಿನ ರಚನೆಗಳನ್ನು ಯಾವುದೇ ರೀತಿಯ ಬಂಧಿಸುವ ವಸ್ತುಗಳನ್ನು ಬಳಸದೆ ಒಟ್ಟಿಗೆ ಸೇರಿಸಲಾಯಿತು. ಅವು ಸಾಮಾನ್ಯವಾಗಿ ಮಾನವ ವಾಸಸ್ಥಳಗಳಿಂದ ದೂರವಿರುತ್ತವೆ ಮತ್ತು ಆದ್ದರಿಂದ ಸಾಮಾನ್ಯವಾಗಿ ಕಾಡುಗಳಲ್ಲಿ ಕಂಡುಬರುತ್ತವೆ. ಹೊಸನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ  26-30 ಸಂಖ್ಯೆಯ ಇಂತಹಾ ಶಿಲೆಗಳು ಇದೆ. ಇವುಗಳನ್ನು ಚೆನ್ನಾಗಿ ಸಂಶೋಧಿಸಿ ಅಧ್ಯಯನ ಮಾಡಲಾಗಿದೆ. ಕಲ್ಲಿನ ಜೋಡಣೆಗಳಲ್ಲಿ ಇದು ಪ್ರಾಚೀನ ಖಗೋಳ ವೀಕ್ಷಣಾಲಯವಾಗಿರಬಹುದು ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ.

ಮತ್ತೊಂದು ಪ್ರಮುಖ ಶೋಧವೆಂದರೆ ಅರಣ್ಯ ಪ್ರದೇಶದ ತೀರ್ಥಳ್ಳಿ ತಾಲ್ಲೂಕಿನ ಅರೆಹಳ್ಳಿಯದ್ದಾಗಿದೆ. ವಾಸ್ತವವಾಗಿ, ದಕ್ಷಿಣದಲ್ಲಿ ಶಿಲಾಯುಗ ಸಂಸ್ಕೃತಿಯ ಸಂಕೀರ್ಣತೆಯನ್ನು ಬಹಿರಂಗಪಡಿಸುವ ಕಾರಣ ಮಾಲೆನಾಡು ಪ್ರದೇಶದಲ್ಲಿನ ಮೆಗಾಲಿಥಿಕ್ ತಾಣಗಳ ಆವಿಷ್ಕಾರವು ಮಹತ್ವದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com