ಕೊನೆಗೂ ಈಡೇರಲಿಲ್ಲ ಮಾಜಿ ಸಿಎಂ ಎಚ್.ಡಿ ಕೆ ಕನಸು: ನಿಖಿಲ್ ಮದುವೆ ಪ್ಲಾನ್ ಚೇಂಜ್!

ಕೊರೋನಾ ವೈರಸ್  ಎಫೆಕ್ಟ್ ಕೇವಲ ಜನಸಾಮಾನ್ಯರಿಗೆ ಮಾತ್ರ ಆಗುತ್ತಿಲ್ಲ, ಮಾಜಿ ಸಿಎಂ ಎಚ್ .ಡಿ ಕುಮಾರಸ್ವಾಮಿ ಅವರ ಕುಟುಂಬಕ್ಕೆ ಕೊರೋನಾ ಭಾರೀ ತೊಂದರೆ ಉಂಟು ಮಾಡುತ್ತಿದೆ. ಕೊರೋನಾದಿಂದಾಗಿ ನಿಖಿಲ್ ವಿವಾಹ ಸರಳವಾಗಿ ನೆರವೇರಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ನಿಖಿಲ್ ಮತ್ತು ಕುಮಾರಸ್ವಾಮಿ
ನಿಖಿಲ್ ಮತ್ತು ಕುಮಾರಸ್ವಾಮಿ

ಮೈಸೂರು: ಕೊರೋನಾ ವೈರಸ್  ಎಫೆಕ್ಟ್ ಕೇವಲ ಜನಸಾಮಾನ್ಯರಿಗೆ ಮಾತ್ರ ಆಗುತ್ತಿಲ್ಲ, ಮಾಜಿ ಸಿಎಂ ಎಚ್ .ಡಿ ಕುಮಾರಸ್ವಾಮಿ ಅವರ ಕುಟುಂಬಕ್ಕೆ ಕೊರೋನಾ ಭಾರೀ ತೊಂದರೆ ಉಂಟು ಮಾಡುತ್ತಿದೆ. ಕೊರೋನಾದಿಂದಾಗಿ ನಿಖಿಲ್ ವಿವಾಹ ಸರಳವಾಗಿ ನೆರವೇರಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಕಲ್ಯಾಣ ಏಪ್ರಿಲ್‌ 17ರಂದು ನಿಶ್ಚಯವಾಗಿದೆ.  ಫೆಬ್ರವರಿ 11 ರಂದು ತಾಜ್ ವೆಸ್ಟೆಂಡ್ ನಲ್ಲಿ ರೇವತಿ ನಿಖಿಲ್ ಎಂಗೇಜ್ ಮೆಂಟ್ ನಡೆದಿತ್ತು.  ಏಪ್ರಿಲ್ 17 ರಂದು ರಾಮನಗರದಲ್ಲಿ ಅದ್ಧೂರಿ ವಿವಾಹ  ನಡೆಸಲು ಸಿದ್ಧತೆ ನಡೆಸಲಾಗಿತ್ತು. 

ರಾಮನಗರ ಮತ್ತು ಚನ್ನಪಟ್ಟಣ ಜನರು ಚುನಾವಣೆ ವಿಷಯದಲ್ಲಿ ದೇವೇಗೌಡರ ಕುಟುಂಬವನ್ನು ಕೈಬಿಟ್ಟಿಲ್ಲ. ಹೀಗಾಗಿ ಇಲ್ಲಿಯೇ ಮಗನ ಮದುವೆ ಮಾಡಿ ಆ ಜನರಿಗೆ ಹೊಟ್ಟ ತುಂಬ ಊಟ ಹಾಕುತ್ತೇನೆ ಎಂದು ಎಚ್‌ಡಿಕೆ ಹೇಳಿದ್ದರು.

ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಕೂಡ ಮದುವೆ ಮಾಡಬೇಕೆಂದಿದ್ದ ಜಾಗವನ್ನು ನೋಡಿ, ಪೂಜೆಯನ್ನು ಕೂಡ ಮಾಡಿದ್ದರು. ವಾಸ್ತುಪ್ರಕಾರ ಕಲ್ಯಾಣ ಮಂಟಪದ ಅದ್ದೂರಿ ಸೆಟ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿತ್ತು.

ಕಳೆದ 1 ತಿಂಗಳಿನಿಂದ ಮದುವೆ ಸ್ಥಳದ ಸಿದ್ಧತೆಯ ಕಾಮಗಾರಿ ನಡೆಯುತ್ತಿತ್ತು. ಏಪ್ರಿಲ್ 17 ರಂದು ಮದುವೆ ನಿಶ್ಚಿಯವಾಗಿ, 8 ಲಕ್ಷ ಮದುವೆಯ ಕರೆಯೋಲೆ ಕೂಡ ಸಿದ್ಧವಾಗಿತ್ತು. ಈಗಾಗಲೇ ಹಲವರಿಗೆ ನಿಖಿಲ್-ರೇವತಿ ಕಲ್ಯಾಣದ ಆಹ್ವಾನ ಪತ್ರಿಕೆ ಹೋಗಿದೆ. 

ಆದರೆ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮದುವೆ ಪ್ಲಾನ್ ಚೇಂಜ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಬಿಡದಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ  ಅಥವಾ ದೇವಾಲಯದಲ್ಲಿ ಕೇವಲ ತಮ್ಮ ಕುಟುಂಬ ವರ್ಗದ 50 ಮಂದಿ ಮಾತ್ರ ಸೇರಿ ವಿವಾಹ ಕಾರ್ಯ ನೆರವೇರಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಈ ಸಂಬಂಧ ಇನ್ನೂ ಮೂರು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.  ಸೋಂಕು ಕಡಿಮೆಯಾದರೇ ವಿವಾಹವಾದ ಒಂದೆರಡು ವಾರದಲ್ಲಿ ಆರತಕ್ಷತೆ ಹಮ್ಮಿಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com