ರಾಜಧಾನಿಯ ಜನರಲ್ಲಿ ಮೂಡಿದ ನೈರ್ಮಲ್ಯ ಜಾಗೃತಿ, ನೀರಿನ ಬೇಡಿಕೆ ಹೆಚ್ಚಳ

ನಗರದಲ್ಲಿ ನೀರಿನ ಬೇಡಿಕೆ ಹೆಚ್ಚಾಗಿದೆ ಇದಕ್ಕೆ ಬೇಸಿಗೆ ಮಾತ್ರವೇ ಕಾರಣವಲ್ಲ ಬದಲಾಗಿ ಕೊರೋನಾವೈರಸ್ ಭಯದಿಂದ ಜನರು ಆಗಾಗ ಕೈತೊಳೆಯುವ ಹೆಚ್ಚು ನೈರ್ಮಲ್ಯ ಜಾಗೃತಿಯನ್ನು ಅಳವಡಿಸಿಕೊಂಡಿರುವುದೂ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದಲ್ಲಿ ನೀರಿನ ಬೇಡಿಕೆ ಹೆಚ್ಚಾಗಿದೆ ಇದಕ್ಕೆ ಬೇಸಿಗೆ ಮಾತ್ರವೇ ಕಾರಣವಲ್ಲ ಬದಲಾಗಿ ಕೊರೋನಾವೈರಸ್ ಭಯದಿಂದ ಜನರು ಆಗಾಗ ಕೈತೊಳೆಯುವ ಹೆಚ್ಚು ನೈರ್ಮಲ್ಯ ಜಾಗೃತಿಯನ್ನು ಅಳವಡಿಸಿಕೊಂಡಿರುವುದೂ ಕಾರಣವಾಗಿದೆ.

ಈ ನಡುವೆ ವಾಟರ್ ಟ್ಯಾಂಕರ್ ಸರಬರಾಜುದಾರರು ಹೆಚ್ಚಿನ ದರವನ್ನು ವಿಧಿಸುವ ಮೂಲಕ ತಾವು ಲಾಭ ಮಾಡಿಕೊಳ್ಳುತ್ತಿದ್ದಾರೆ.ಕೆಲವು ಸ್ಥಳಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅವರಿಗೆ ಕಷ್ಟವಾಗುತ್ತಿದೆ. "ಕೆಲವು ಪ್ರದೇಶಗಳಲ್ಲಿ, ನಾವು ಬೇಡಿಕೆಯನ್ನು ಪೂರೈಸಲು ಸಮರ್ಥರಾಗಿದ್ದೇವೆ ಆದರೆ ಇನ್ನೂ ಕೆಲವೆಡೆ ಇದು ಕಠಿಣವಾಗಿದೆ. ಆದ್ದರಿಂದ ನಾವು ದಿನಕ್ಕೆ 2-3 ಟ್ಯಾಂಕರ್ ನೀರಿನಿಂದ ಅಪಾರ್ಟ್ಮೆಂಟ್ ಸಂಕೀರ್ಣಕ್ಕೆ ಸರಬರಾಜನ್ನು ಕಡಿಮೆ ಮಾಡುತ್ತಿದ್ದೇವೆ" ಎಂದು ಜಗದಿಶ್ ವಾಟರ್ ಟ್ಯಾಂಕರ್ ಸರಬರಾಜುದಾರರು ಹೇಳಿದರು.

ಪೂರ್ವ ಬೆಂಗಳೂರು ನ ವಾಟರ್ ಟ್ಯಾಂಕರ್‌ಗಳ ಸಂಘದ ಅಧ್ಯಕ್ಷ ಬಿಎಚ್ ಹರೀಶ್ ಮಾತನಾಡಿ  ಪ್ರದೇಶದಲ್ಲಿ ಕಾವೇರಿ ನೀರು ಲಭ್ಯವಿಲ್ಲ, ಆದ್ದರಿಂದ ಜನರು ಬೋರ್‌ವೆಲ್ ನೀರನ್ನೇ ಬಳಸುವುದು ಅನಿವಾರ್ಯವಿದೆ. " ಎಂದರು.

ಜಲಮಂಡಳಿ ಅಧಿಕಾರಿಗಳು ಹೇಳಿದಂತೆ “ಬಳಕೆ ಹೆಚ್ಚಾಗಿದ್ದರೂ, ನಗರಕ್ಕೆ ಕೇವಲ 1,450 ಎಂಎಲ್‌ಡಿ ಮಾತ್ರ ಸರಬರಾಜು ಮಾಡಲಾಗುತ್ತಿದೆ, ಇದರಲ್ಲಿ 50 ಎಂಎಲ್‌ಡಿ ನೀರನ್ನು  110 ಹಳ್ಳಿಗಳಿಗೆ ಸರಬರಾಜು ಮಾಡಲಾಗುತ್ತದೆ. 20-40% ಸೋರಿಕೆ  ಸೋರಿಕೆ ಆಗುತ್ತದೆ. ಹಾಗಾಗಿ ನೀರಿನ ಪೂರೈಕೆ ಮತ್ತಷ್ಟು ಕಡಿಮೆಯಾಗುತ್ತದೆ. ನಾವು ಪ್ರತಿದಿನ ನೀರನ್ನು ಪೂರೈಸುವುದಿಲ್ಲ, ಆದ್ದರಿಂದ ಎಷ್ಟು ಬೇಡಿಕೆ ಹೆಚ್ಚಾಗಿದೆ ಎಂದು ತಿಳಿದಿರುವುದಿಲ್ಲ. 2-3 ದಿನಗಳಿಗೊಮ್ಮೆ ನೀರನ್ನು ಸರಬರಾಜು ಮಾಡಲಾಗುತ್ತದೆ ಮತ್ತು ಅದನ್ನು ನೇರವಾಗಿ ಜನರೇ ಸಂಗ್ರಹಿಸುತ್ತಾರೆ.ಹಾಗಾಗಿ ನೀರಿನ ಬೇಡಿಕೆ ಹೆಚ್ಚಳದ ಬಗೆಗೆ ನಮಗೆ ಮಾಹಿತಿ ಸಿಗುತ್ತಿಲ್ಲ"

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com