ಕೋವಿಡ್-19: ಆತಂಕದಲ್ಲಿ ಮೈಸೂರು, ನಂಜನಗೂಡನ್ನ 'ಅತಿ ಸೂಕ್ಷ್ಮ ಪ್ರದೇಶ' ಎಂದು ಘೋಷಣೆ

ಮೈಸೂರಿನ ನಂಜನಗೂಡಿನಲ್ಲಿ ಅತಿ ಹೆಚ್ಚು ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿರುವುದರಿಂದ ಆ ಪ್ರದೇಶವನ್ನು 'ಅತಿ ಸೂಕ್ಷ್ಮ ಪ್ರದೇಶ' ಎಂದು ಜಿಲ್ಲಾಡಳಿತ ಘೋಷಿಸಿದೆ.
ಶ್ರೀರಾಮುಲು
ಶ್ರೀರಾಮುಲು
Updated on

ಮೈಸೂರು: ಮೈಸೂರಿನ ನಂಜನಗೂಡಿನಲ್ಲಿ ಅತಿ ಹೆಚ್ಚು ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿರುವುದರಿಂದ ಆ ಪ್ರದೇಶವನ್ನು 'ಅತಿ ಸೂಕ್ಷ್ಮ ಪ್ರದೇಶ' ಎಂದು ಜಿಲ್ಲಾಡಳಿತ ಘೋಷಿಸಿದೆ.

ಇಲ್ಲಿನ ಔಷಧ ಕಂಪನಿಯಲ್ಲಿ ವಿದೇಶಿಗರೊಂದಿಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಕಂಡುಬಂದಿದ್ದು, ಅದೇ ಕಂಪನಿಯ ಐವರಲ್ಲಿ ಕೂಡ ಸೋಂಕು ದೃಢಪಟ್ಟಿತ್ತು. ಆದ್ದರಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲರನ್ನು ಪ್ರತ್ಯೇಕವಾಗಿರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಈ ಕುಇರುತ ಎಸ್ ಪಿ ಸಿ.ಬಿ.ರಿಷ್ಯಂತ್ ವಿಡಿಯೋ ಸಂದೇಶ ಬಿಡುಗಡೆಗೊಳಿಸಿದ್ದು, ಕಂಪನಿಯಲ್ಲಿದ್ಉದ ಎಲ್ಲಾ 1,372 ಉದ್ಯೋಗಿಗಳ ಪೈಕಿ ಈಗಾಗಲೇ 900 ಜನರನ್ನು ಪ್ರತ್ಯೇಕವಾಗಿರಿಸಲಾಗಿದ್ದು, ಉಳಿದವರನ್ನು ಇಂದು ಪ್ರತ್ಯೇಕವಾಗಿರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಸದ್ಯ ನಂಜನಗೂಡನ್ನು ಒಂದು ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಪ್ರತ್ಯೇಕವಾಗಿರಿಸಿದವರ ಮೇಲೆ ನಿಗಾ ವಹಿಸಲಾಗುವುದು. ಅವರು ಮನೆಯಿಂದ ಹೊರಬರದಂತೆ ಗಮನಹರಿಸಲು ಗಸ್ತು ಪೊಲೀಸರನ್ನು ನಿಯೋಜಿಸಲಲಾಗುವುದು. ಇಲ್ಲಿನ ಎಪಿಎಂಸಿಗೆ ಕೂಡ ಹೋಲ್ ಸೇಲ್ ಮಾರಾಟಗಾರರನ್ನು ಹೊರತುಪಡಿಸಿ ಉಳಿದವರಿಗೆ ಅವಕಾಶ ನೀಡಲಾಗುತ್ತಿಲ್ಲ.

ಇಲ್ಲಿಯವರೆಗೆ ಮೈಸೂರು ಜಿಲ್ಲೆಯಲ್ಲಿ 776 ಜನರು 14 ದಿನಗಳ ಪ್ರತ್ಯೇಕವಾಸ ಪೂರ್ಣಗೊಳಿಸಿದ್ದಾರೆ 1,702 ಮಂದಿ ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ. ತಪಾಸಣೆಗೊಳಪಡಿಸಿರುವ 90 ಮಾದರಿಗಳ ಪೈಕಿ 82 ನಕಾರಾತ್ಮಕ ವರದಿ ಬಂದಿದ್ದು, ಭಾನುವಾರ 8 ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com