ಕೊರೋನಾ ವೈರಸ್:ಸರ್ಕಾರದ ನಿಯಮ ಪಾಲಿಸಿ, ಶುಚಿತ್ವ ಕಾಪಾಡಿ, ಸೋಂಕಿನಿಂದ ಬಚಾವಾಗಿ

ಕೊರೋನಾ ವೈರಸ್ ಗೆ ಜನರು ಆತಂಕಪಡುವ ಅಗತ್ಯವಿಲ್ಲ. ಕೋವಿಡ್-19 ಒಂದು ಸೋಂಕು ಆಗಿದ್ದು ಸಾರ್ಸ್-ಕೊವ್-2 ಎಂಬ ವೈರಸ್ ನಿಂದ ಹರಡುತ್ತದೆ. ಕೊರೋನಾ ವೈರಸ್ ಸೋಂಕಿಗೆ ತುತ್ತಾದವರಲ್ಲಿ ಬಹುತೇಕರು ಗುಣಮುಖರಾಗುತ್ತಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊರೋನಾ ವೈರಸ್ ಗೆ ಜನರು ಆತಂಕಪಡುವ ಅಗತ್ಯವಿಲ್ಲ. ಕೋವಿಡ್-19 ಒಂದು ಸೋಂಕು ಆಗಿದ್ದು ಸಾರ್ಸ್-ಕೊವ್-2 ಎಂಬ ವೈರಸ್ ನಿಂದ ಹರಡುತ್ತದೆ. ಕೊರೋನಾ ವೈರಸ್ ಸೋಂಕಿಗೆ ತುತ್ತಾದವರಲ್ಲಿ ಬಹುತೇಕರು ಗುಣಮುಖರಾಗುತ್ತಾರೆ.

ರೋಗಕ್ಕೆ ಸರಿಯಾದ ಚಿಕಿತ್ಸೆ, ಆರೋಗ್ಯ ವಿಧಾನಗಳನ್ನು ಪಾಲಿಸಿದರೆ ಅದನ್ನು ತಡೆಗಟ್ಟಬಹುದು. ರೋಗದ ಬಗ್ಗೆ ಸರಿಯಾಗಿ ಮಾಹಿತಿ ತಿಳಿದುಕೊಂಡು ಅದು ಇನ್ನೊಬ್ಬರ ಮೇಲೆ ಹರಡದಂತೆ ತಡೆಗಟ್ಟಿ ಅದು ಪಸರಿಸುವುದನ್ನು ತಡೆಗಟ್ಟಬೇಕಾಗುತ್ತದೆ. ಸರ್ಕಾರ ಜನರ ರಕ್ಷಣೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮೂರು ವಾರಗಳ ಲಾಕ್ ಡೌನ್ ಮಾಡಿರುವುದು ಕೂಡ ಸೋಂಕು ಹರಡದಂತೆ ತಡೆಗಟ್ಟಲು. ಕೋವಿಡ್-19 ರೋಗದ ಸಾಮಾನ್ಯ ಲಕ್ಷಣಗಳು ಜ್ವರ, ಕಫ, ಸುಸ್ತು, ಉಸಿರಾಟದ ತೊಂದರೆ, ಮೂಳೆಗಳಲ್ಲಿ ನೋವು ಇತ್ಯಾದಿ.

ಜವಾಬ್ದಾರಿಯುತ ಪ್ರಜೆಗಳಾಗೋಣ: ಕೊರೋನಾ ಮಹಾಮಾರಿ ಸೋಂಕು ಹರಡದಂತೆ ತಡೆಗಟ್ಟಲು ನಮ್ಮನ್ನು ನಾವು ಸುರಕ್ಷಿತವಾಗಿ ನೋಡಿಕೊಳ್ಳುವುದು ಮುಖ್ಯವಾಗಿದೆ. ಸದ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವ ನಿರ್ಬಂಧ ಹೇರಿ ಮನೆಯಲ್ಲಿರುವುದು ಮುಖ್ಯವಾಗಿದೆ. ಸಾಮಾಜಿಕವಾಗಿ ಬೇರೆಯವರ ಜೊತೆ ಬೆರೆಯುವುದು, ಇನ್ನೊಬ್ಬರ ಕೈ ಕುಲುಕುವುದು, ಶಾರೀರಿಕ ಸಂಪರ್ಕವನ್ನು ತಡೆಯಬೇಕು. ಇನ್ನೊಬ್ಬರ ಜೊತೆ ಮಾತನಾಡುವಾಗ ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಳ್ಳಿ. ಮನೆಯಿಂದ ಆಗಾಗ ಹೊರಗೆ ಹೋಗುತ್ತಿರುವುದು ಬೇಡ. ಅಂಗಡಿಗಳಿಂದ ಏನೇ ಖರೀದಿಸಬೇಕೆಂದರೂ ಒಂದು ಬಾರಿ ಹೋಗಿ ಖರೀದಿಸಿ. ಮನೆಗೆ ಹಿಂತಿರುಗಿದ ನಂತರ ಸೋಪು ಹಾಕಿ ನೀರಿನಿಂದ ಶುಚಿಯಾಗಿ ಕೈ ತೊಳೆಯಿರಿ. ಹೊರಗಿನವರನ್ನು ಮನೆಗೆ ಆಗಾಗ ಬರಲು ಬಿಡಬೇಡಿ.

ವಿದೇಶಗಳಿಂದ ಬಂದಿದ್ದರೆ 14 ದಿನಗಳ ಕಾಲ ಪ್ರತ್ಯೇಕವಾಗಿರಿ. ಕೊರೋನಾದ ಏನಾದರೂ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ. ಈ ಸಂದರ್ಭದಲ್ಲಿ ಮನೆಯಲ್ಲಿ ಬೇರೆ ಸದಸ್ಯರಿಂದ ದೂರವಿರಿ. ಜ್ವರ, ಶೀತ, ತಲೆನೋವು, ಕೆಮ್ಮು, ಕಫ ಇದ್ದರೆ ಬೇರೆಯವರಿಂದ ದೂರವಿರಿ. ಮಾಸ್ಕ್ ಗಳನ್ನು ಧರಿಸಿ. 65 ವರ್ಷಕ್ಕಿಂತ ಮೇಲಿನವರಿಗೆ ಅಪಾಯಗಳು ಹೆಚ್ಚು. ಸಕ್ಕರೆ ಕಾಯಿಲೆ, ಅತಿ ರಕ್ತದೊತ್ತಡ, ಹೃದ್ರೋಗ ಸಮಸ್ಯೆ ಮತ್ತು ಅಸ್ತಮಾ ಇತ್ಯಾದಿ ಉಸಿರಾಟದ ಸಮಸ್ಯೆಯಿರುವವರ ಮೇಲೆ ಹೆಚ್ಚು ಕಾಳಜಿ ವಹಿಸುವುದು ಸೂಕ್ತ.

ಕೋವಿಡ್-19 ತಡೆಗಟ್ಟುವುದು ಹೇಗೆ?:ಇದು ಮೂಲಭೂತವಾಗಿ ಉಸಿರಾಟಕ್ಕೆ ತೊಂದರೆಯಾಗುವುದರಿಂದ ಕೊರೋನಾ ಸೋಂಕಿತ ವ್ಯಕ್ತಿ ಕೆಮ್ಮಿದರೆ ಅಥವಾ ಸೀನಿದರೆ ಅದು ಇನ್ನೊಬ್ಬರಿಗೆ ಹರಡುತ್ತದೆ. ಹೀಗಾಗಿ ಕೆಮ್ಮುವಾಗ, ಸೀನುವಾಗ ಟಿಶ್ಯೂ ಪೇಪರ್ ಅಥವಾ ಬಟ್ಟೆ, ಕೈಗಳನ್ನು ಬಾಯಿಗೆ ಅಡ್ಡಲಾಗಿ ಇಡಿ. ಬಳಕೆ ಮಾಡಿದ ಟಿಶ್ಯೂ ಪೇಪರ್ ನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಅನಾರೋಗ್ಯ ಕಾಣಿಸಿದ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಮಾಸ್ಕ್ ಧರಿಸಿ ಗುಣಮುಖರಾಗುವವರೆಗೆ ಪ್ರತ್ಯೇಕವಾಗಿರಿ. ನಿಮ್ಮ ಕೈಗಳನ್ನು ಆಗಾಗ ಸೋಪು, ನೀರು ಹಾಕಿ ತೊಳೆಯುತ್ತಿರಿ. ವೈರಸ್ ನ ಮೇಲ್ಪದರ ಅಥವಾ ವೈರಸ್ ತಾಕಿದ ಯಾವುದೇ ವಸ್ತುಗಳನ್ನು ಮುಟ್ಟಿದರೆ ಅದು ಇನ್ನೊಬ್ಬರಿಗೆ ಹರಡುವ ಸಾಧ್ಯತೆಗಳು ಅತಿಹೆಚ್ಚು. ಹೀಗಾಗಿ ವಸ್ತುಗಳನ್ನು ಮುಟ್ಟಿದ ನಂತರ ನಿಮ್ಮ ಮೂಗು, ಬಾಯಿ, ಕಣ್ಣುಗಳನ್ನು ಮುಟ್ಟಬೇಡಿ.

ಬೇರೆ ಕ್ರಮಗಳೇನು?: ಬಾಗಿಲುಗಳ ಚಿಲಕ, ಕೈ, ಸಂದಿಗಳನ್ನು ಆಗಾಗ ಸ್ವಚ್ಛ ಮಾಡುತ್ತಿರಿ. ಇನ್ನೊಂದು ವಿಷಯ ಇಲ್ಲಿ ಗಮನಿಸಬೇಕಾಗಿದ್ದು ಎಲ್ಲಾ ಸೋಂಕಿತ ವ್ಯಕ್ತಿಗಳಲ್ಲಿ ಕೊರೋನಾ ರೋಗ ಲಕ್ಷಣ ಕಂಡುಬರುವುದಿಲ್ಲ. ಹೀಗಾಗಿ ಇಂತವರಿಂದ ಬೇರೆಯವರಿಗೆ ಹರಡಬಹುದು. ಅಸೌಖ್ಯದಲ್ಲಿರುವ ವ್ಯಕ್ತಿಗಳ ಜೊತೆ ಸಂಪರ್ಕ ಬೇಡ ಎಂದು ಹೇಳುತ್ತಾರೆ ವೈದ್ಯ ಡಾ ಮುರಳಿ ಶ್ರೀನಿವಾಸ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com