ಅಪಾಯದಲ್ಲಿದ್ದ ಮೈಸೂರು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಕೊರೋನಾ ಯುದ್ದ ಗೆದ್ದಿದ್ದು ಹೇಗೆ? 

ಮಹಾಮಾರಿ ಕೊರೊನಾ ವೈರಸ್ ಸೋಂಕು ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಶೇ.3ರಷ್ಟಿದ್ದ ಸೋಂಕಿತರು ಕಡಿಮೆಯಾಗುತ್ತಿದ್ದಾರೆ. ಕೇಂದ್ರ ಸರಕಾರದ ಸೂಚನೆಯಂತೆ   ಯಾವುದೇ ಒಂದು ಕೊರೊನಾ ಪಾಸಿಟಿವ್ ಕೇಸ್ ಬಾರದಿದ್ದರೆ ಮೈಸೂರು ಹಸಿರು ವಲಯವಾಗುವ ಸಾಧ್ಯತೆಯಿದೆ.
ಮೈಸೂರು
ಮೈಸೂರು

ಮೈಸೂರು: ಮಹಾಮಾರಿ ಕೊರೊನಾ ವೈರಸ್ ಸೋಂಕು ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಶೇ.3ರಷ್ಟಿದ್ದ ಸೋಂಕಿತರು ಕಡಿಮೆಯಾಗುತ್ತಿದ್ದಾರೆ. ಕೇಂದ್ರ ಸರಕಾರದ ಸೂಚನೆಯಂತೆ   ಯಾವುದೇ ಒಂದು ಕೊರೊನಾ ಪಾಸಿಟಿವ್ ಕೇಸ್ ಬಾರದಿದ್ದರೆ ಮೈಸೂರು ಹಸಿರು ವಲಯವಾಗುವ ಸಾಧ್ಯತೆಯಿದೆ.

ಮೈಸೂರಿನಲ್ಲಿ ಕೊರೋನಾ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದಾಗ ಅಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸರಿಯಾದ ವ್ಯವಸ್ಥೆ ಇರಲಿಲ್ಲ, ಕೈತುಂಬಾ ಪಿಪಿಇ ಕಿಟ್ ಗಳು ಇರಲಿಲ್ಲ. ಹೀಗಿದ್ದರೂ ಕೊರೋನಾ ವಿರುದ್ಧ ಗೆದ್ದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ. ಅಲ್ಲಿನ ವೈದ್ಯರ ಹಾಗೂ ಆಶಾ ಕಾರ್ಯಕರ್ತೆಯರ ನಿರಂತರ ಪರಿಶ್ರಮದಿಂದಾಗಿ ಸದ್ಯ ಮೈಸೂರು ಜಿಲ್ಲೆ ಸೇಫ್ ಜೋನ್ ಗೆ ಬಂದು ನಿಂತಿದೆ.

ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅಪಾಯ ಮಟ್ಟ ತಲುಪಿತ್ತು. ಒಂದೇ ಬಾರಿಗೆ 90 ಕೊರೋನಾ ಕೇಸ್ ಗಳು ಪತ್ತೆಯಾಗಿ ಎಲ್ಲರಲ್ಲೂ ಆತಂಕ ಮೂಡಿಸಿತ್ತು. ಆದರೆ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು 21 ಪ್ರಕರಣಗಳಿವೆ.

ಕೊರೋನಾ ಈ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದು ದೇಶದಲ್ಲೇ ಇದೇ ಮೊದಲು ಮತ್ತು ಅಪರೂಪ. ಆದರೆ ಇದು  ಆರೋಗ್ಯ ಕಾರ್ಯಕರ್ತರಿಗೆ ದೀರ್ಘ ಹೋರಾಟವಾಗಿತ್ತು.

ಆರಂಭದಲ್ಲಿ ಹೊಸ ಜಿಲ್ಲಾ ಆಸ್ಪತ್ರೆಯನ್ನು ಕೋವಿದ್ ಆಸ್ಪತ್ರೆಯಾಗಿ ಮಾರ್ಪಡಿಸಲು ನಿರ್ಧರಿಸಿದಾಗ ತುಂಬಾ ಕಷ್ಟವಾಗಿತ್ತು. ಹಾಸಿಗೆ ಮತ್ತು ಮಂಚಗಳಿರಲಿಲ್ಲ, ಕರೆಂಟ್ ಗೆ ಪಾಯಿಂಟ್ ಇರಲಿಲ್ಲ ಎಂದು ಕೆಆರ್ ಆಸ್ಪತ್ರೆ ವೈದ್ಯಕೀಯ ಅಧಿಕಾರಿ ಡಾ.ಎಂ.ಎಸ್.ರಾಜೇಶ್ ಕುಮಾರ್ ಹೇಳಿದ್ದಾರೆ.

ನಾವು ಚಿಕಿತ್ಸೆ ಆರಂಭಿಸಿದಾಗ ಕೇವಲ 40 ಪಿಪಿಇ ಕಿಟ್ ಗಳಿದ್ದವು, ಒಂದೇ ಒಂದು ಎಕ್ಸ್ ರೇ ಯಂತ್ರವಿತ್ತು ಎಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಮೈಸೂರಿಗೆ ಪೋಸ್ಟ್ ಆಗಿದ್ದ ವೈದ್ಯೆ ಡಾ. ರಾಜೇಶ್ವರಿ ತಿಳಿಸಿದ್ದಾರೆ.

ಕೊರೋನಾಗೆ ಚಿಕಿತ್ಸೆ ನೀಡಲು ನಾವು ಐಸಿಯು ಸೇರಿದಂತೆ ಆಸ್ಪತ್ರೆಯ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಅಳವಡಿಸಬೇಕಾಗಿತ್ತು.  ಅಧೆಲ್ಲಾವನ್ನು ತುಂಬಾ ತ್ರಾಸದಾಯಕವಾಗಿ ಮಾಡಿವೆು. ಅಂತಿಮವಾಗಿ ಬಂದ ಉಲಿತಾಂಶ ನೆಮ್ಮದಿ ನೀಡಿದೆ ಎಂದು ಹೇಳಿದ್ದಾರೆ.

ಜ್ಯುಬಿಲಿಯೆಂಟ್ ಔಷಧಿ ಕಾರ್ಖಾನೆ ಸಿಬ್ಬಂದಿಗೆ ಸೋಂಕು ತಗುಲಿದ್ದು ಆತ ನಮ್ಮಲ್ಲಿ ದಾಖಲಾದ, ಮಾನಸಿಕವಾಗಿ ಕುಗ್ಗಿ ಹೋಗಿದ್ದ ಆತನ ಮನಸ್ಥಿತಿಯನ್ನು ಹತೋಟಿಗೆ ತಂದು ಚಿಕಿತ್ಸೆ ನೀಡುವುದು ಕಷ್ಟವಾಗಿತ್ತು, ಅವರು ಬದುಕುಳಿದರು ಎಂದು ರಾಜೇಶ್ವರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com