ಕರ್ಫ್ಯೂ ರೀತಿ ಇರಲಿದೆ ಮೂರನೇ ಲಾಕ್ ಡೌನ್: ಮೇ 17ರ ವರೆಗೆ ಕಟ್ಟುನಿಟ್ಟಿನ ನಿಯಮ ಪಾಲನೆ

ಹಲವು ಸಡಿಲಿಕೆಯೊಂದಿಗೆ ಮೇ 4ರಿಂದ ಮೂರನೇ ಲಾಕ್ ಡೌನ್ ಆರಂಭವಾಗಲಿದೆ. ಎರಡು ವಾರಗಳ ಈ ಲಾಕ್ ಡೌನ್ ನಲ್ಲಿ ಹಲವು ವಿನಾಯತಿ ನೀಡಿರುವುದರಿಂದ, ಜನಜೀವನ ಶೇ. 60ರಷ್ಟು ಮಾಮೂಲಿ ಸ್ಥಿತಿಗೆ ಬರುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಲವು ಸಡಿಲಿಕೆಯೊಂದಿಗೆ ಮೇ 4ರಿಂದ ಮೂರನೇ ಲಾಕ್ ಡೌನ್ ಆರಂಭವಾಗಲಿದೆ. ಎರಡು ವಾರಗಳ ಈ ಲಾಕ್ ಡೌನ್ ನಲ್ಲಿ ಹಲವು ವಿನಾಯತಿ ನೀಡಿರುವುದರಿಂದ, ಜನಜೀವನ ಶೇ. 60ರಷ್ಟು ಮಾಮೂಲಿ ಸ್ಥಿತಿಗೆ ಬರುವ ಸಾಧ್ಯತೆಯಿದೆ.

ಮೂರನೇ ಲಾಕ್ ಡೌನ್ ವೇಳೆ, ಸಾರ್ವಜನಿಕರು ಪಾಲಿಸಬೇಕಾದ ನಿಯಮಗಳ ಬಗ್ಗೆ ಬೆಂಗಳೂರು ಪೊಲೀಸರು ಸೂಚನೆಯನ್ನು ನೀಡಿದ್ದಾರೆ. ಮೂರನೇ ಲಾಕ್ ಡೌನ್ ಅವಧಿಯಲ್ಲಿ 22 ನಿರ್ಬಂಧಿತ ವಲಯಗಳನ್ನು ಹೊರತು ಪಡಿಸಿ, ಕೆಲವೊಂದು ವಿನಾಯತಿಗಳು ಬೆಂಗಳೂರು ನಗರದಾದ್ಯಂತ ಅನ್ವಯಿಸುತ್ತದೆ. 

ಎಲ್ಲಾ ರೀತಿಯ ಅಂಗಡಿ/ಮಳಿಗೆಗಳನ್ನು ಬೆಳಗ್ಗೆ ಏಳು ಗಂಟೆಯಿಂದ, ಸಂಜೆ ಏಳು ಗಂಟೆಯವರೆಗೆ ತೆರೆಯಬಹುದು. ಸಿಎಲ್ 2 (ವೈನ್ ಮತ್ತು ಎಂಆರ್ ಪಿ ಮಳಿಗೆ), ಸಿಎಲ್ - 11ಸಿ (ಎಂಎಸ್ಐಎಲ್) ತೆರೆದು ಮದ್ಯ ಮಾರಾಟ ಮಾಡಬಹುದಾಗಿದೆ. ಮಾರಾಟದ ಸಮಯದಲ್ಲಿ ಆರೋಗ್ಯ ಇಲಾಖೆ ಮಾರ್ಗದರ್ಶಿ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಬೆಳಗ್ಗೆ ಏಳು ಗಂಟೆಯಿಂದ ಸಂಜೆ 6.30ರೊಳಗೆ ಮುಗಿಸಿಕೊಳ್ಳತಕ್ಕದ್ದು 

ಕರ್ಪ್ಯೂ ರೀತಿ ವಾತಾವರಣ ಸೃಷ್ಟಿಸುವ ಕಾರಣ, ಅಗತ್ಯ ವಸ್ತುಗಳ ಖರೀದಿಯನ್ನು ಬೆಳಗ್ಗೆ ಏಳು ಗಂಟೆಯಿಂದ ಸಂಜೆ 6.30ರೊಳಗೆ ಮುಗಿಸಿಕೊಳ್ಳತಕ್ಕದ್ದು. ಆದರೆ, ವೈದ್ಯಕೀಯ ಕ್ಷೇತ್ರ ಮತ್ತು ಇತರ ಅತ್ಯಗತ್ಯ ಕ್ಷೇತ್ರಗಳಿಗೆ ವಿನಾಯತಿಯನ್ನು ಕೊಡಲಾಗುತ್ತದೆ. 

ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಅಥವಾ ಸಮೀಪದ ಸ್ಥಳಗಳಲ್ಲಿ ಉಳಿದುಕೊಂಡಿರುವ ಕಾರ್ಮಿಕರು ಎಲ್ಲಾ ರೀತಿಯ ಕಟ್ಟಡ ಮತ್ತು ಕೈಗಾರಿಕಾ ಕೆಲಸಗಳಲ್ಲಿ ತೊಡಗಬಹುದು. ಯಾವುದೇ ಪ್ರತಿಭಟನೆಗೆ ಲಾಕ್ ಡೌನ್ ವೇಳೆ ಅನುಮತಿ ಇರುವುದಿಲ್ಲ. ಟ್ರಾಫಿಕ್ ರೂಲ್ಸ್ ಅನ್ನು ಪಾಲಿಸತಕ್ಕದ್ದು .

ಬೆಂಗಳೂರು ನಗರ ರೆಡ್ ಝೋನ್ ನಲ್ಲಿರುತ್ತದೆ. ಹಾಗಾಗಿ, ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ತಡೆದು ಕೇಸ್ ಹಾಕಲಾಗುವುದು. ಚಾಲಕರು ಕಡ್ಡಾಯವಾಗಿ 30ಕಿ ಮೀ  ಗಿಂತ ಕಡಿಮೆ ವೇಗದಲ್ಲಿ ವಾಹನ ಚಲಾಯಿಸುವುದು ಮತ್ತು ಟ್ರಾಫಿಕ್ ರೂಲ್ಸ್ ಅನ್ನು ಪಾಲಿಸತಕ್ಕದ್ದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com