ಬೆಂಗಳೂರು: ನಮ್ಮನ್ನು ನಮ್ಮ ರಾಜ್ಯಕ್ಕೆ ಕಳುಹಿಸಿ ಕೊಡಿ ಎಂದು ಬಿಹಾರಿ ಕಾರ್ಮಿಕರು ಗಲಾಟೆ ಮಾಡುತ್ತಿರುವುದನ್ನು ನಿಯಂತ್ರಿಸಲು ಮಾದನಾಯಕನಹಳ್ಳಿ ಸರ್ಕಲ್ ಇನ್ಸ್ ಪೆಕ್ಟರ್ ಸತ್ಯನಾರಾಯಣ ರಾಷ್ಟ್ರಗೀತೆ ಹಾಡಿ ಅವರನ್ನು ಸಮಾಧಾನ ಪಡಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಲಾಟೆ ಕಡಿಮೆ ಮಾಡಲು ಇನ್ಸ್ ಪೆಕ್ಟರ್ ಸತ್ಯನಾರಾಯಣ ಅವರು ಜನಗಣಮನ ಹಾಡಿದ್ದು ಗಲಾಟೆಗೆ ಮುಂದಾಗಿದ್ದ ಬಿಹಾರಿ ವಲಸೆ ಕಾರ್ಮಿಕರು ಸಹ ರಾಷ್ಟ್ರಗೀತೆ ಗೆ ಧ್ವನಿ ಗೂಡಿಸಿ ಮೌನಕ್ಕೆ ಶರಣಾಗಿದ್ದಾರೆ. ವಲಸೆ ಕಾರ್ಮಿಕರ ಗಲಾಟೆ ನಿಯಂತ್ರಿಸಿದ ಇನ್ಸ್ ಪೆಕ್ಟರ್ ಪರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೂರು ದಿನಗಳ ಹಿಂದೆ ನೆಲಮಂಗಲ ಸಮೀಪದ ಮಾದಾವಾರದ ಬಿಐಇಸಿ ಬಳಿ ಬಿಹಾರಿ ವಲಸೆ ಕಾರ್ಮಿಕರ ಗಲಾಟೆ ನಡೆದಿತ್ತು. ನಮ್ಮ ರಾಜ್ಯಕ್ಕೆ ಕಳುಹಿಸಿ ಕೊಡಿ ಎಂದು ಐದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಈ ಸಮಯದಲ್ಲಿ ಪೀಣ್ಯ ಇನ್ಸ್ ಪೆಕ್ಟರ್ ಮುದ್ದುರಾಜ್ ಮೇಲೆ ಬಿಹಾರಿಗಳು ಹಲ್ಲೆ ಮಾಡಿದ್ದರು. ನಂತರ ಗಲಾಟೆ ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
Advertisement