ಜ್ಯುಬಿಲಿಯೆಂಟ್‌ನಲ್ಲಿ ಸೋಂಕಿನ ಮೂಲ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ನಂಜನಗೂಡು ಕಾರ್ಖಾನೆಯಿಂದ ಸೋಂಕು ಹೆಚ್ಚಳವಾಗಿದೆ. ಗೃಹ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಇನ್ನೂ ಮೂಲ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆ ಫ್ಯಾಕ್ಟರಿಯಿಂದ ಯಾವುದೇ ಹೊಸ ಕೇಸ್ ಪತ್ತೆಯಾಗಿಲ್ಲ. ಸಂಪೂರ್ಣ ತನಿಖೆ ನಡೆಸಿದಾಗ ಎಲ್ಲವೂ ಹೊರಬೀಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಹಾರಾಷ್ಟ್ರಗಡಿ ಭಾಗದಲ್ಲಿ ತೀವ್ರ ತಪಾಸಣೆಗೆ ಸೂಚನೆ ನೀಡಲಾಗಿದೆ. ಕದ್ದು ಮುಚ್ಚಿ ರಾಜ್ಯಕ್ಕೆ ಬರುವವರು ಹೆಚ್ಚಿದ್ದಾರೆ. ಖಾಸಗಿ‌ ಟ್ಯಾಕ್ಸಿ,ಇನ್ನಿತರ ವಾಹನಗಳಲ್ಲಿ ಜನರು ಬರುತ್ತಿದ್ದಾರೆ. ಹೀಗಾಗಿ ಗಡಿಯಲ್ಲಿ ತೀವ್ರ ತಪಾಸಣೆಗೆ ಸೂಚಿಸಿದ್ದೇವೆ. ಕೆಲವರನ್ನು ಅಲ್ಲೇ ಕ್ವಾರಂಟೈನ್ ಮಾಡಲು ಸೂಚಿಸಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಅಂತರ ಕಾಯ್ದು ಕೆಲಸ ಮಾಡಿದ್ದರೂ, ಪತ್ರಕರ್ತರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ನಾವೆಲ್ಲ ಕೋವಿಡ್ 19 ಪರೀಕ್ಷೆ ಮಾಡಿಸಿಕೊಂಡಿದ್ದೆವು. ಆಗ ನೆಗೆಟಿವ್ ವರದಿ ಬಂದಿತ್ತು. ಆದರೂ ಮುಂಜಾಗ್ರತಾ ಕ್ರಮವಾಗಿ ಸ್ವಯಂ ಕ್ವಾರೆಂಟೈನ್ ನಲ್ಲಿದ್ದೆವು. ಈಗ ನಾವು ಕ್ವಾರೆಂಟೈನ್ ನಿಂದ ಮುಕ್ತರಾಗಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕ್ವಾರೆಂಟೈನ್ ನಲ್ಲಿ ಇದ್ದೇ ನಮ್ಮ ಇಲಾಖೆಗಳಿಗೆ ಸಂಬಂಧಿಸಿದಂತೆ ಕೆಲಸ ಕಾರ್ಯ ಮಾಡಿದ್ದೇವೆ. ಕೊರೊನಾ ವೈರಸ್ ಬೆಳವಣಿಗೆ ಕೂಡ ಗಮನಿಸಿ, ಜಿಲ್ಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೆವು. ಇನ್ನಷ್ಟು ಗಟ್ಟಿ ಸಂಕಲ್ಪದಿಂದ ಕೊರೊನಾ ವಿರುದ್ಧ ಹೋರಾಟ ಮಾಡುತ್ತೇವೆ. ರಾಜ್ಯದ ಜನರು ಕ್ವಾರೆಂಟೈನ್ ಬಗ್ಗೆ ಚಿಂತೆ ಮಾಡುವ ಅಗತ್ಯ ಇಲ್ಲ ಎಂದರು

3ನೇ ಹಂತದ ಲಾಕ್‌ಡೌನ್ ಸದ್ಯ ಚಾಲ್ತಿಯಲ್ಲಿದೆ. ಈ ಸಂಬಂಧ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೆಲಸ‌ ಮಾಡುತ್ತಿದ್ದಾರೆ. ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿವೆ. ಇದರ ಜೊತೆ ಜೊತೆಗೆ ಕೊರೊನಾ ನಿಯಂತ್ರಣ ಮಾಡುವ ಅಗತ್ಯವೂ ಇದೆ. ಇದರ ಯಶಸ್ಸು ಜನರ ಕೈಯ್ಯಲ್ಲಿದೆ. ಲಾಕ್ ಡೌನ್ ನಿರೀಕ್ಷಿತ ಯಶಸ್ಸು ಆಗಿಲ್ಲವಾದರೆ ಮತ್ತೆ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ ಎಂದು ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ನವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ವಾಸ್ತವ ಇದ್ದರೆ ಆರೋಪ ಮಾಡಲಿ. ಆರೋಪ ಮಾಡಬೇಕು ಎಂದು ಆರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. 

ನಂಜನಗೂಡು ಕಾರ್ಖಾನೆಯಿಂದ ಸೋಂಕು ಹೆಚ್ಚಳವಾಗಿದೆ. ಗೃಹ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಇನ್ನೂ ಮೂಲ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆ ಫ್ಯಾಕ್ಟರಿಯಿಂದ ಯಾವುದೇ ಹೊಸ ಕೇಸ್ ಪತ್ತೆಯಾಗಿಲ್ಲ. ಸಂಪೂರ್ಣ ತನಿಖೆ ನಡೆಸಿದಾಗ ಎಲ್ಲವೂ ಹೊರಬೀಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com