ಗಂಡ-ಹೆಂಡತಿ ನಡುವಿನ ಜಗಳ ಬಿಡಿಸಲು ಹೋದ ಪೊಲೀಸ್ ಪೇದೆಗೆ ಕೊಡಲಿಯೇಟು.! 

ಗಂಡ-ಹೆಂಡತಿ ಜಗಳ ಬಿಡಿಸಲು ಹೋದ ಪೊಲೀಸ್ ಮುಖ್ಯ ಪೇದೆ ತಲೆಗೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮದ್ದೂರು ತಾಲೂಕಿನ ಹರೆಕಲ್ಲದೊಡ್ಡಿಯಲ್ಲಿ ಶನಿವಾರ ನಡೆದಿದೆ.
ಗಂಡ-ಹೆಂಡತಿ ನಡುವಿನ ಜಗಳ ಬಿಡಿಸಲು ಹೋದ ಪೊಲೀಸ್ ಪೇದೆಗೆ ಕೊಡಲಿಯೇಟು.!
ಗಂಡ-ಹೆಂಡತಿ ನಡುವಿನ ಜಗಳ ಬಿಡಿಸಲು ಹೋದ ಪೊಲೀಸ್ ಪೇದೆಗೆ ಕೊಡಲಿಯೇಟು.!
Updated on: 

ಮಂಡ್ಯ: ಗಂಡ-ಹೆಂಡತಿ ಜಗಳ ಬಿಡಿಸಲು ಹೋದ ಪೊಲೀಸ್ ಮುಖ್ಯ ಪೇದೆ ತಲೆಗೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮದ್ದೂರು ತಾಲೂಕಿನ ಹರೆಕಲ್ಲದೊಡ್ಡಿಯಲ್ಲಿ ಶನಿವಾರ ನಡೆದಿದೆ.

ಮದ್ದೂರು ಠಾಣೆಯ ಮುಖ್ಯಪೇದೆ ಗುರುಶಾಂತಪ್ಪ ಎಂಬುವವರ ಮೇಲೆಯೇ ಹರೆಕಲ್ಲದೊಡ್ಡಿ ಗ್ರಾಮದ ವೆಂಕಟರಾಮು ಎಂಬಾತ ಹಲ್ಲೆನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. 

ಘಟನೆಯ ಹಿನ್ನೆಲೆ: ಮದ್ದೂರು ತಾಲೂಕಿನ ಹರೆಕಲ್ಲ ದೊಡ್ಡಿಯಲಿ ವೆಂಕಟರಾಮು-ಆಶಾ ದಂಪತಿಗಳು ಕೌಟುಂಬಿಕ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದರು.ಈ ಸಂಬಂಧ ದೂರು ಬಂದ ಹಿನ್ನಲೆಯಲ್ಲಿ ಮುಖ್ಯಪೇದೆ ಗುರುಶಾಂತಪ್ಪ ಸ್ಥಳಕ್ಕೆ ತೆರಳಿದ್ದು ಜಗಳ ಬಿಡಿಸಲು ಹೋಗಿದ್ದಾರೆ. ಈ ವೇಳೆ ಪಾನಮತ್ತನಾಗಿದ್ದ ಪತಿ ವೆಂಕಟರಾಮು ಪೇದೆ ಗುರುಶಾಂತಪ್ಪ ಅವರಿಗೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡ ಪೇದೆಯನ್ನು ಸ್ಥಳೀಯರ ನೆರವಿನಿಂದ ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರು ತಲೆಗೆ 14 ಸ್ಟೀಚ್ ಹಾಕಲಾಗಿದೆ. ಸದ್ಯಕ್ಕೆ ಪೇದೆ ಗುರುಶಾಂತಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ದಂಪತಿಗಳಿಬ್ಬರನ್ನು ಬಂಧಿಸಿರುವ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

-ನಾಗಯ್ಯ 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com