ಮಂಗಳೂರು: ಆಶಾ ಕಾರ್ಯಕರ್ತೆ ಮೇಲೆ ಮಂತ್ರವಾದಿಯಿಂದ ಪೊರಕೆಯಿಂದ ಹಲ್ಲೆ
ಮಂಗಳೂರು: ಮನೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸೇರುತ್ತಿದ್ದ ಜನರ ಬಗ್ಗೆ ವಿಚಾರಿಸಿದ್ದಕ್ಕೆ ಆಶಾ ಕಾರ್ಯಕರ್ತೆ ಮೇಲೆ ಪೊರಕೆಯಲ್ಲಿ ಹಲ್ಲೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಎಂಬಲ್ಲಿ ಸಂಭವಿಸಿದೆ.
ಶ್ರೀಮತಿ ಎಂಬ ಮಹಿಳೆಯಿಂದ ಆಶಾ ಕಾರ್ಯಕರ್ತೆಗೆ ಹಲ್ಲೆ ಯತ್ನ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶ್ರೀಮತಿಯ ಪತಿ ವಿಶ್ವನಾಥ ಎಂಬಾತನಿಂದ ಮನೆಯಲ್ಲಿ ಮಂತ್ರವಾದಿ ಕಾರ್ಯಗಳು ನಡಯುತ್ತಿದ್ದು, ಹೀಗಾಗಿ ಇವರ ಮನೆಗೆ ಹತ್ತಾರು ಜನ ಬರುತ್ತಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ಸೇರಿದ್ದನ್ನ ಆಶಾ ಕಾರ್ಯಕರ್ತೆ ಪುಷ್ಪಲತಾ ಅವರು ಪ್ರಶ್ನಿಸಿದ್ದಾರೆ.
ಬಳಿಕ ಸ್ಥಳೀಯ ಕುಕ್ಕಿಪಾಡಿ ಪಂಚಾಯತ್ ಸದಸ್ಯರಾದ ಯೋಗೀಶ್ ಆಚಾರ್ಯ ಎಂಬವರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಸದಸ್ಯನ ಮೇಲೂ ಹಲ್ಲೆ ಯತ್ನ ನಡೆದಿದೆ ಅಂತ ಹೇಳಲಾಗುತ್ತಿದೆ.
ಇದೀಗ ಆಶಾ ಕಾರ್ಯಕರ್ತೆಗೂ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಮುಂದಾದ ಮಹಿಳೆಯ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ