ಜಿಲ್ಲಾಡಳಿತ ಕಣ್ತಪ್ಪಿಸಿ ಕ್ವಾರಂಟೈನಲ್ಲಿರುವ ವ್ಯಕ್ತಿಯನ್ನು ಭೇಟಿ ಮಾಡಿದ ಭೂಪನ ವಿರುದ್ಧ ದೂರು ದಾಖಲು

ಅಜ್ಮೀರದಿಂದ ಬೆಳಗಾವಿಗೆ ಆಗಮಿಸುತ್ತಿದ್ದ ವೇಳೆ ಕ್ವಾರಂಟೈನ್ ಆಗಿರುವ ಕೊರೋನಾ ಶಂಕಿತರನ್ನು ಜಿಲ್ಲಾಡಳಿತದ ಕಣ್ತಪ್ಪಿಸಿ ಭೇಟಿ ಮಾಡಿರುವ ಭೂಪನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಾಗಲಕೋಟೆ: ಅಜ್ಮೀರದಿಂದ ಬೆಳಗಾವಿಗೆ ಆಗಮಿಸುತ್ತಿದ್ದ ವೇಳೆ ಕ್ವಾರಂಟೈನ್ ಆಗಿರುವ ಕೊರೋನಾ ಶಂಕಿತರನ್ನು ಜಿಲ್ಲಾಡಳಿತದ ಕಣ್ತಪ್ಪಿಸಿ ಭೇಟಿ ಮಾಡಿರುವ ಭೂಪನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬಾಗಲಕೋಟೆ ಕೆಲವರು ಅಜ್ಮೀರದಿಂದ ಬಾಗಲಕೋಟೆಗೆ ವಾಪಸ್ಸಾಗುತ್ತಿದ್ದ ವೇಳೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿಯೇ ಕೊರೋನಾ ಶಂಕಿತರೆಂದು ಕ್ವಾರಂಟೈನ್ ಆಗಿದ್ದಾರೆ. ಹೀಗೆ ಕ್ವಾರಂಟೈನ್ ಆಗಿದ್ದವರನ್ನು ಬಾಗಲಕೋಟೆ ನವನಗರ ಸೆಕ್ಟರ್ ನಿವಾಸಿ ಜಿಲ್ಲಾಡಳಿತದ ಕಣ್ತಪ್ಪಿಸಿ ಭೇಟಿ ಆಗಿ ಬಂದಿದ್ದಾನೆ.

ಮೇ 07 ರಂದು ದೂರು ದಾಖಲಿಸಲಾಗಿರುವ ಆರೋಪಿ ನಿಪ್ಪಾಣಿಯಲ್ಲಿ ಕ್ವಾರಂಟೈನ್ ಆಗಿರುವ ತನ್ನ ಕುಟುಂಬಸ್ಥರನ್ನು ಭೇಟಿ ಮಾಡಿದ್ದು, ಕುಟುಂಬಸ್ಥರ ಭೇಟಿಗಾಗಿ ಜಿಲ್ಲಾಡಳಿತದಿಂದ ಯಾವುದೇ ಅನುಮತಿ ಪಡೆದಿಲ್ಲ. ಚೆಕ್‌ಪೋಸ್ಟ್ಗಳಲ್ಲೂ ಹೇಗೋ ತಪ್ಪಿಸಿಕೊಂಡು ನಗರಕ್ಕೆ ವಾಪಸ್ಸಾಗಿದ್ದ. ಹೀಗೆ ಕಣ್ತಪ್ಪಿಸಿ ಕ್ವಾರಂಟೈನ್‌ಲ್ಲಿರುವ ಕುಟುಂಬಸ್ಥರನ್ನು ಭೇಟಿ ಮಾಡಿದ ಆರೋಪಿ ವಿರುದ್ಧ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.

ದೂರು ದಾಖಲಾಗಿರುವ ವ್ಯಕ್ತಿ ಕ್ವಾರಂಟೈನ್‌ಲ್ಲಿ ತನ್ನ ತಾಯಿಯೊಂದಿಗೆ ಒಂದು ಕಳೆದಿದ್ದಾನೆ. ವಿಚಾರಣೆ ವೇಳೆ ಒಂದೇ ತಾಸು ಅಲ್ಲಿರುವುದಾಗಿ ಹೇಳಿಕೆ ನೀಡಿದ್ದಾನೆ. ಜತೆಗೆ ವೈದ್ಯರು ಸೇರಿದಂತೆ ಕ್ವಾರಂಟೈನ್ ಸಿಬ್ಬಂದಿಯೊಂದಿಗೂ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಎಸ್ಪಿ ಲೋಕೇಶ ಜಗಲಾಸರ ಸ್ಪಷ್ಟ ಪಡಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ. ಬಳಿಕ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com