ಕಲಬುರಗಿ: ಬಸ್ ವ್ಯವಸ್ಥೆ ಮಾಡಿ ಅತಂತ್ರ ವಲಸಿಗರಿಗೆ ನೆರವಾದ ಸಂಸದ ಉಮೇಶ್ ಜಾಧವ್

ಸೋಮವಾರ ಮುಂಬೈನ ಥಾಣೆಯಿಂದ ಕಲಬುರಗಿಗೆ ಹೊರಟ "ಶ್ರಮಿಕ್" ವಿಶೇಷ ರೈಲು ಭರ್ತಿಯಾಗಿದ್ದರಿಂದ ಇನ್ನೂ ಒಂದು ಸಾವಿರಕ್ಕೂ ಹೆಚ್ಚು ವಲಸಿಗರು ಅತಂತ್ರರಾಗಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್ ಅವರು ಬಸ್ಸು ಗಳ ವ್ಯವಸ್ಥೆ ಮಾಡಿ,ಈ ವಲಸಿಗರನ್ನು ಅವರವರ ಊರು ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಸಂಸದ ಡಾ.ಉಮೇಶ್ ಜಾಧವ್
ಸಂಸದ ಡಾ.ಉಮೇಶ್ ಜಾಧವ್
Updated on

ಕಲಬುರಗಿ: ಸೋಮವಾರ ಮುಂಬೈನ ಥಾಣೆಯಿಂದ ಕಲಬುರಗಿಗೆ ಹೊರಟ "ಶ್ರಮಿಕ್" ವಿಶೇಷ ರೈಲು ಭರ್ತಿಯಾಗಿದ್ದರಿಂದ ಇನ್ನೂ ಒಂದು ಸಾವಿರಕ್ಕೂ ಹೆಚ್ಚು ವಲಸಿಗರು ಅತಂತ್ರರಾಗಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್ ಅವರು ಬಸ್ಸು ಗಳ ವ್ಯವಸ್ಥೆ ಮಾಡಿ,ಈ ವಲಸಿಗರನ್ನು ಅವರವರ ಊರು ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

1,230 ಜನ ಥಾಣೆಗೆ ಬಂದು ರೈಲು ಏರಿದರು. ಆದರೆ, ರೈಲು ಭರ್ತಿಯಾಗಿ ಸೀಟು ಸಿಗದೆ ಅತಂತ್ರರಾದ ಜನ ಕರೆಮಾಡಿದರು.ತಕ್ಷಣ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಇಕೆಆರ್ ಸಿ)ಯ ಬಸ್ಸು ಗಳು ಸೇರಿ 10 ವಾಹನಗಳ ವ್ಯವಸ್ಥೆ ಮಾಡಲಾಯಿತು. ಇದರಿಂದಾಗಿ ಸಾವಿರಾರು ವಲಸಿಗರು ತಮ್ಮ ಊರು ಸೇರುವಂತಾಯಿತು ಎಂದು ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ.

ಲಾರಿ ಸೇರಿದಂತೆ ಖಾಸಗಿ ವಾಹನಗಳ ಮೂಲಕವೂ ನೂರಾರು ಜನರು ಮುಂಬೈನಿಂದ ತವರು ಜಿಲ್ಲೆಗೆ ಬಂದಿದ್ದಾರೆ.
ಲಾರಿ (ದೊಡ್ಡ ಗೂಡ್ಸ್)ಯಲ್ಲಿ ಸುಮಾರು 50 ವಲಸಿಗರು ಇಂದು ಮಧ್ಯಾಹ್ನ ಅಫಜಲಪುರ ತಾಲ್ಲೂಕಿನ ಚೌಡಾಪುರ ಕ್ರಾಸ್ ಗೆ ಬಂದಿಳಿದರು.

ಇವರು ಲಾರಿ ಚಾಲಕನಿಗೆ ಕೇವಲ 20 ಸಾವಿರ ರೂಪಾಯಿ ಮುಂಗಡ ಹಣವನ್ನಷ್ಟೆ ಪಾವತಿಸಲು ಶಕ್ತರಾಗಿದ್ದರು. ಈ ವಿಷಯ ತಿಳಿದು ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್ ಕೂಡಿ ಚೌಡಾಪುರ ಕ್ರಾಸ್ ತಲುಪಿದೆವು. ಚೌಡಾಪುರಕ್ಕೆ ಬಂದ ಮೇಲೆ ಸಂಕಷ್ಟದಲ್ಲಿದ್ದ ವಲಸಿಗರ ಕಂಡು ಮರುಗಿದ ನಿತೀನ್ ಗುತ್ತೇದಾರ್ ಅವರು ಉಳಿದ ಬಾಕಿ ಹಣ 40ಸಾವಿರ ರೂಪಾಯಿ ಯನ್ನು ಲಾರಿ ಚಾಲಕನಿಗೆ ಕೊಟ್ಟು ವಾಪಸ್ ಕಳುಹಿಸಿದರು. ಈ ಮೂಲಕ ನಿತೀನ್ ಅವರು ಕಷ್ಟದಲ್ಲಿದ್ದ ಶ್ರಮಿಕ ಜೀವಿಗಳ ಕೈಹಿಡಿದಿದ್ದಾರೆ.

 ಮುಂಬೈನಿಂದ ಚೌಡಾಪುರಕ್ಕೆ ಬಂದ ಎಲ್ಲಾ ವಲಸಿಗರಿಗೂ ಕೊರೊನಾ ವೈರಸ್ ಸೋಂಕು ಪತ್ತೆಯ ಆರೋಗ್ಯ ತಪಾಸಣೆ ನಡೆಸಲಾಗಿದೆ.ಇನ್ನು, ಚೌಡಾಪುರದಿಂದ ಯಾದಗಿರಿ ಜಿಲ್ಲೆಯ ಗುರುಮಠಕಲ್ ಗೆ ಬಸ್ಸು ವ್ಯವಸ್ಥೆ ಮಾಡಿ, ಈ ವಲಸಿಗರನ್ನು ಕಳುಹಿಸಿಕೊಡಲಾಗಿದೆ ಎಂದು ಜಾಧವ್ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಹಾಗೂ ಅಫಜಲಪುರ ತಹಸೀಲ್ದಾರ್ ಅವರೊಂದಿಗೆ ಮಾತನಾಡಿ, ಬಸ್ ನಲ್ಲಿ ಎಲ್ಲಾ ಸುರಕ್ಷತಾ ಕ್ರಮಕೈಗೊಂಡು ಈ ಶ್ರಮಿಕ ವರ್ಗದವರನ್ನು ಗುರುಮಠಕಲ್ ಗೆ ಕಳುಹಿಸಿ ಕೊಡಲಾಗಿದೆ ಎಂದು ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com