ಹೊರರಾಜ್ಯದಿಂದ ಬಂದವರಿಗೆ ಕಡ್ಡಾಯ ಕ್ವಾರಂಟೈನ್, ಮಹಾನಗರ ವಾಸಿಗಳ ಆರೋಗ್ಯ ತಪಾಸಣೆ: ಬಿಬಿಎಂಪಿ ಮಹತ್ವದ ತೀರ್ಮಾನ 

ಕೊರೋನಾ ತಡೆಗಟ್ತುವ ಸಲುವಾಗಿ ಹೊರರಾಜ್ಯಗಳಿಂದ ಬೆಂಗಲೂರಿಗೆ ಆಗಮಿಸುವವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮತ್ತೊಮ್ಮೆ ಪುನರುಚ್ಚರಿಸಿದೆ. ಕೊರೋನಾ ತಡೆಗೆ ಗೊಳ್ಳಲಾಗುವ ಕ್ರಮಗಳ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಬಿಎಂಪಿ ಸರ್ಕಾರದ ಸೂಚನೆಯ ಮೇರೆಗೆ ಬಿಬಿಎಂಪಿ ವ್ಯಾಪ್ತಿಗೆ ಬರುವ ಎಲ್ಲಾ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲಾ
ಬಿಎಚ್ ಅನಿಲ್ ಕುಮಾರ್
ಬಿಎಚ್ ಅನಿಲ್ ಕುಮಾರ್
Updated on

ಬೆಂಗಳೂರು: ಕೊರೋನಾ ತಡೆಗಟ್ತುವ ಸಲುವಾಗಿ ಹೊರರಾಜ್ಯಗಳಿಂದ ಬೆಂಗಲೂರಿಗೆ ಆಗಮಿಸುವವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮತ್ತೊಮ್ಮೆ ಪುನರುಚ್ಚರಿಸಿದೆ. ಕೊರೋನಾ ತಡೆಗೆ ಗೊಳ್ಳಲಾಗುವ ಕ್ರಮಗಳ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಬಿಎಂಪಿ ಸರ್ಕಾರದ ಸೂಚನೆಯ ಮೇರೆಗೆ ಬಿಬಿಎಂಪಿ ವ್ಯಾಪ್ತಿಗೆ ಬರುವ ಎಲ್ಲಾ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದಿದೆ.

ಅಂತರಾಜ್ಯ ವಲಸಿಗರು, ಪ್ರವಾಸಿಗರು ಬೆಂಗಳೂರಿಗೆ ಬಂದಾಗ ಅವರನ್ನು ಅವರದೇ ವೆಚ್ಚದಲ್ಲಿ ಹೋಟೆಲ್ ಗಳಲ್ಲಿ ಅಥವಾ ಸರ್ಕಾರಿ ವೆಚ್ಚದಲ್ಲಿ ಹಾಸ್ಟೆಲ್​ಗಳಲ್ಲಿ 14 ದಿನಗಳ ಕಾಲ ಕ್ವಾರಂತೈನ್ ಮಾಡಲಾಗುವುದು. 10  ದಿನಗಳ ನಂತರ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗುತ್ತದೆ. ಈ ವೇಳೆ ವರದಿಯು ಪಾಸಿಟಿವ್ ಬಂದರೆ ಆಸ್ಪತ್ರೆಗೂ ನೆಗೆಟಿವ್ ಬಂದರೆ ಮನೆಗೂ ಕಳಿಸಲಾಗುವುದು.  

ಹೊರ ರಾಜ್ಯಗಳಿಂದ ಬಂದ  ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 60 ವರ್ಷ ಮೇಲ್ಪಟ್ಟ ವೃದ್ದರಿಗೆ ಎರಡು ದಿನಗಳಲ್ಲೇ ಪರೀಕ್ಷೆ ನಡೆಸಲಾಗುವುದು. ಒಂದೊಮ್ಮೆ ಅವರಿಗೆ ವರದಿ ನೆಗೆಟಿವ್ ಎಂದು ಬಂದರೆ ಹಲವು ಷರತ್ತುಗಳನ್ನು ವಿಧಿಸಿ ಮನೆಗೆ ಕಳಿಸಲಾಗುತ್ತದೆ. ಬಳಿಕ ಹದಿನಾಲ್ಕು ದಿನದ ನಂತರ ಮತ್ತೆ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಗುರಿಪಡಿಸಲಾಗುವುದು ಎಂದು ಬಿಬಿಎಂಪಿ ಪ್ರಕಟಣೆ ಹೇಳಿದೆ.

ಇದಲ್ಲದೆ ಸರ್ಕಾರದ ಸೂಚನೆಯ ಮೇರೆಗ #ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲು ನಿರ್ಧರಿಸಿದೆ. ಈಗಾಗಲೆ ಪಾಲಿಕೆಯು 3000ಕ್ಕೂ ಹೆಚ್ಚು ತಂಡಗಳನ್ನು ರಚನೆ‌ ಮಾಡಿದ್ದು ಆಯಾ ಬ್ಲಾಕ್ ಗಳಲ್ಲಿ ಆರೋಗ್ಯ ತಪಾಸಣೆ ಕೈಗೊಳ್ಳಲಾಗುವುದು. ‌‌ಇದೇ ವೇಳೆ ದೀರ್ಘ ಕಾಯಿಲೆಗಳಿಂದ ಭಾಧಿತರಾಗಿರುವವರ ಮಾಹಿತಿ ಸಂಗ್ರಹಿಸಲಾಗುವುದು. ಎಂದು ಬಿಎಚ್ ಅನಿಲ್ ಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com