ಅಜಿತ್ ಜಯರಾಜ್
ರಾಜ್ಯ
ಮುತ್ತಪ್ಪ ರೈ ಸಾವಿನ ಬೆನ್ನಲ್ಲೇ ಜಯರಾಜ್ ಪುತ್ರನ ಪೋಸ್ಟ್ ವೈರಲ್
ಮುತ್ತಪ್ಪ ರೈ ಸಾವಿನ ಬೆನ್ನಿಗೆ ಜಯರಾಜ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಮುತ್ತಪ್ಪ ರೈ ಸಾವನ್ನು ಸಂಭ್ರಮಿಸುತ್ತಿದ್ದರೆ, ಜಯರಾಜ್ ಮಗ ಅಜಿತ್ ಜಯರಾಜ್ ಫೇಸ್‌ಬುಕ್‌ನಲ್ಲಿ ರೈ ಸಾವಿನ ಕುರಿತು ವ್ಯಂಗ್ಯ ಭರಿತ ಪೋಸ್ಟ್ ಹಾಕುವ ಮೂಲಕ ತನ್ನ ತಂದೆಯನ್ನು ನೆನೆದಿದ್ದಾರೆ.
ಬೆಂಗಳೂರು: ಮುತ್ತಪ್ಪ ರೈ ಸಾವಿನ ಬೆನ್ನಿಗೆ ಜಯರಾಜ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಮುತ್ತಪ್ಪ ರೈ ಸಾವನ್ನು ಸಂಭ್ರಮಿಸುತ್ತಿದ್ದರೆ, ಜಯರಾಜ್ ಮಗ ಅಜಿತ್ ಜಯರಾಜ್ ಫೇಸ್‌ಬುಕ್‌ನಲ್ಲಿ ರೈ ಸಾವಿನ ಕುರಿತು ವ್ಯಂಗ್ಯ ಭರಿತ ಪೋಸ್ಟ್ ಹಾಕುವ ಮೂಲಕ ತನ್ನ ತಂದೆಯನ್ನು ನೆನೆದಿದ್ದಾರೆ.
ಮುತ್ತಪ್ಪ ರೈ ನಿಧನದ ಬಳಿಕ ಆತನ ಆಜನ್ಮ ವೈರಿಯಾಗಿದ್ದ ಜಯರಾಜ್ ಅವರ ಪುತ್ರ ಹಾಕಿರುವ ಈ ಪೋಸ್ಟ್ ಭಾರಿ ವೈರಲ್ ಆಗಿದೆ. ಮಾರ್ಚ್ 14 ರ ಮಧ್ಯರಾತ್ರಿ ಈ ಪೋಸ್ಟ್ ಅನ್ನು ಜಯರಾಜ್ ಪುತ್ರ ಹಾಕಿದ್ದಾರೆ.
ಡಾನ್ ಜಯರಾಜ್ ಪುತ್ರರಾಗಿರುವ ಅಜಿತ್, ಕೆಲ ಸಮಯ ಮೂರ್ಖರಿಗೆ ರಾಜ ತಾನು ರಾಜ ಯಾಕೆ ಎಂಬುದನ್ನು ನೆನಪಿಸಬೇಕಾಗುತ್ತೆ ಎಂಬ ಅರ್ಥ ಬರುವ ವಾಕ್ಯವನ್ನು ಪೋಸ್ಟ್ ಮಾಡಿದ್ದು ಜೊತೆಗೆ ಲವ್ ಯೂ ಅಪ್ಪ ಎಂದು ಬರೆದುಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ಗೆ ನಾನಾ ರೀತಿಯ ಕಮೆಂಟ್‌ಗಳನ್ನು ಹಾಕಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ