ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಾಳಿನಿಂದ ಕೆಎಸ್‍ಆರ್‍ಟಿಸಿ,  ಬಿಎಂಟಿಸಿ ಬಸ್ ಸಂಚಾರ: ಚಾಲಕ, ನಿರ್ವಾಹಕರಿಗಾಗಿ 30 ಲಕ್ಷ ವಿಮೆ 

ನಾಳೆಯಿಂದ ಲಾಕ್ ಡೌನ್ ನಡುವೆಯೂ ಕೆಎಸ್‍ಆರ್‍ಟಿಸಿ ಬಸ್ಸುಗಳು ರಸ್ತೆಗಿಳಿಯಲಿದೆ. ಆದರೆ ಬೆಂಗಳುರಿನಿಂದ ಕೇವಲ ಐದು ಜಿಲ್ಲೆಗಳಿಗಷ್ಟೇ ಬಸ್ ಪ್ರಯಾಣ ಲಭ್ಯವಿರಲಿದೆ.

ಬೆಂಗಳೂರು: ನಾಳೆಯಿಂದ ಲಾಕ್ ಡೌನ್ ನಡುವೆಯೂ ಕೆಎಸ್‍ಆರ್‍ಟಿಸಿ ಬಸ್ಸುಗಳು ರಸ್ತೆಗಿಳಿಯಲಿದೆ. ಆದರೆ ಬೆಂಗಳುರಿನಿಂದ ಕೇವಲ ಐದು ಜಿಲ್ಲೆಗಳಿಗಷ್ಟೇ ಬಸ್ ಪ್ರಯಾಣ ಲಭ್ಯವಿರಲಿದೆ.

ಕೆಎಸ್‍ಆರ್‍ಟಿಸಿ  ತನ್ನ ಪ್ರಕಟಣೆಯಲ್ಲಿ ಈ ಸಂಬಂಧ ವಿವರ ಹೊರಹಾಕಿದ್ದು ಸುಮಾರು 1,500 ಬಸ್‍ಗಳ್ನು ಸಂಚಾರ ಪ್ರಾರಂಭಿಸಲಿದ್ದು   ಬಸ್‍ಗಳಲ್ಲಿ ನಿಗದಿತ ಸೀಟ್‍ಗಳ ಪ್ರಯಾಣಿಕರಿಗಷ್ಟೇ ಅವಕಾಶ ವಿರಲಿದೆ. ಅಲ್ಲದೆ ಪ್ರಯಾಣ ದರಗಳಲ್ಲಿ ಹೆಚ್ಚಳ ಇರುವುದಿಲ್ಲ.

ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಬಸ್ ಸಂಚಾರ ನಡೆಸಲಿದ್ದು ಈ ಹಿನ್ನೆಲೆ ಬೆಂಗಳೂರು ನಗರದಿಂದ ಮೈಸೂರು, ಮಂಗಳೂರು, ದಾವಣಗೆರೆ, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಿಗೆ ಮಾತ್ರ ಬಸ್ ಸಂಚಾರ ಇರಲಿದೆ.

ನಿಗದಿತ ಪಿಕ ಆಪ್ ಪಾಯಿಂಟ್ ಗಳಲ್ಲಿ ಮಾತ್ರ ಬಸ್ ಹತ್ತಬೇಕಿದ್ದು ಪ್ರಯಾಣದ ನಡುವೆ ಬೇರೆಡೆಗಳಲ್ಲಿ ಬಸ್ ನಿಲುಗಡೆ ಇರುವುದಿಲ್ಲ. ಅಲ್ಲದೆ ಭಾನುವಾರ  ಯಾವ ಬಸ್ಸುಗಳ ಕಾರ್ಯಾಚರಣೆ ಇಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಇತ್ತ ಬಿಎಂಟಿ ಸಹ ನಾಳಿನಿಂದ ಸಂಚಾರ ಪ್ರಾರಂಭಿಸುತ್ತಿದ್ದು ಪ್ರಯಾಣಿಕರಿಗೆ ಕೇವಲ ಪಾಸ್ ಬಳಸಿ ಸಂಚರೈಸಲು ಸೂಚಿಸಲಾಗಿದೆ. 

ಚಾಲಕ ನಿರ್ವಾಹಕರಿಗೆ 30 ಲಕ್ಷ ವಿಮೆ 

ಈ ನಡುವೆ ಕೊರೋನಾ ಕಾರಣದಿಂದ ಬಸ್ ಚಾಲಕರು ಅಥವಾ ಯಾವುದೇ ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ನಿರ್ವಾಹಕರು ಸಾವನ್ನಪ್ಪಿದರೆ ಅವರ ಕುಟುಂಬ ಸದಸ್ಯರಿಗೆ 30 ಲಕ್ಷ ರೂ. ವಿಮಾ ಸೌಲಭ್ಯ ಒದಗಿಸುವುದಾಗಿ ರ್ನಾಟಕ ಸಾರಿಗೆ ಸಚಿವ ಮತ್ತು ಉಪ ಮುಖ್ಯಮಂತ್ರಿ  ಲಕ್ಷ್ಮಣ ಸವದಿ ಹೇಳಿದ್ದಾರೆ.

ಈ ಸಂಬಂಧ ಸಿಎಂ ಲಕ್ಷ್ಮಣ ಸವದಿ ಪತ್ರಿಕಾ ಪ್ರಕಟಣೆ ಹೊರಡಿಸಿರ್ಕಾರದ ಮಾರ್ಗ ಸೂಚನೆಗಳನ್ನು ಕಟ್ಟುನಿಟ್ಟಾಗಿ ಸಾರಿಗೆ ಸಂಸ್ಥೆಗಳ ಎಲ್ಲಾ ಚಾಲಕ, ನಿರ್ವಾಹಕರು ಪಾಲಿಸಬೇಕು ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com