ಕರ್ನಾಟಕ ಇಸ್ಲಾಮಿಕ್ ರಿಪಬ್ಲಿಕ್‌ ಆಗುತ್ತಿದೆಯಾ: 'ಅರೆಸ್ಟ್ ಶೋಭಾ' ಅಭಿಯಾನಕ್ಕೆ ಕರಂದ್ಲಾಜೆ ತಿರುಗೇಟು!

ತಬ್ಲಿಘಿಗಳಿಂದ ಶಿವಮೊಗ್ಗದಲ್ಲಿ ಕೊರೊನಾ ವೈರಸ್‌ ಸೋಂಕು ಹರಡಿತು ಎಂದು ವಿವಾದಾತ್ಮಕ ಟ್ವೀಟ್‌ ಮಾಡಿ ‘ಅರೆಸ್ಟ್‌ ಶೋಭಾ’ ಎಂಬ ಟ್ವಿಟ್ಟರ್ ಅಭಿಯಾನಕ್ಕೆ ಕಾರಣವಾಗಿದ್ದ ಸಂಸದೆ ಶೋಭಾ ಕರಂದ್ಲಾಜೆ, ಭಾನುವಾರ ಮತ್ತೊಂದು ಟ್ವೀಟ್‌ ಮಾಡಿ ಗಮನ ಸೆಳೆದಿದ್ದಾರೆ.
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
Updated on: 

ಬೆಂಗಳೂರು: ತಬ್ಲಿಘಿಗಳಿಂದ ಶಿವಮೊಗ್ಗದಲ್ಲಿ ಕೊರೊನಾ ವೈರಸ್‌ ಸೋಂಕು ಹರಡಿತು ಎಂದು ವಿವಾದಾತ್ಮಕ ಟ್ವೀಟ್‌ ಮಾಡಿ ‘ಅರೆಸ್ಟ್‌ ಶೋಭಾ’ ಎಂಬ ಟ್ವಿಟ್ಟರ್ ಅಭಿಯಾನಕ್ಕೆ ಕಾರಣವಾಗಿದ್ದ ಸಂಸದೆ ಶೋಭಾ ಕರಂದ್ಲಾಜೆ, ಭಾನುವಾರ ಮತ್ತೊಂದು ಟ್ವೀಟ್‌ ಮಾಡಿ ಗಮನ ಸೆಳೆದಿದ್ದಾರೆ.

ದಾವಣಗೆರೆಯಲ್ಲಿ ಮತಾಂಧರು ಹಿಂದೂಗಳ ಜವಳಿ ಅಂಗಡಿಯಲ್ಲಿ ಬಟ್ಟೆಬರೆ ಖರೀದಿ ಮಾಡದಂತೆ ಮುಸ್ಲಿಂ ಮಹಿಳೆಯರಿಗೆ ಒತ್ತಡ ಹೇರುತ್ತಿದ್ದಾರೆ ಎಂದು ವಿಡಿಯೋ ಸಮೇತ ಟ್ವೀಟ್‌ ಮಾಡಿದ್ದಾರೆ. 

ಕರ್ನಾಟಕ ಇಸ್ಲಾಮಿಕ್ ರಿಪಬ್ಲಿಕ್‌ ಆಗುತ್ತಿದೆಯಾ ಎಂದು ಪ್ರಶ್ನೆ ಮಾಡಿರುವ ಸಂಸದೆ ಶೋಭಾ, ಧಾರ್ಮಿಕ ಮೂಲಭೂತವಾದಿಗಳು ಹೇರುತ್ತಿರುವ ಷರಿಯಾ ಕಾನೂನಿಗೆ ಪ್ರತಿಯಾಗಿ ಪ್ರಜಾಪ್ರಭುತ್ವ ಭಾರತದ ಕಾನೂನಿನ ರುಚಿ ತೋರಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್‌ ಮಾಡಿದ್ದಾರೆ

ಇದಾದ ಬಳಿಕ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರನ್ನು ಟ್ಯಾಗ್‌ ಮಾಡಿ ಮತ್ತೊಂದು ಟ್ವೀಟ್‌ ಮಾಡಿರುವ ಶೋಭಾ, ಧರ್ಮಗಳ ನಡುವೆ ದ್ವೇಷ ಬಿತ್ತುತ್ತಿರುವ ಈ ಮತಾಂಧರನ್ನು ಕೂಡಲೇ ಬಂಧಿಸಿ ಎಂದು ಆಗ್ರಹಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com