ಯಾದಗಿರಿ: ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಎಎಸ್ಐ) ಮೇಲೆ ಹಲ್ಲೆ ನಡೆಸಿದ ಪ್ರಕರಣ ಹುಣಸಗಿ ತಾಲೂಕಿನ ಪಿ.ಕೆ.ನಾಯಕ ತಾಂಡಾದಲ್ಲಿ ನಡೆದಿದೆ.
ಕ್ವಾರಂಟೈನ್ ಕೇಂದ್ರ ದ ಬೀಗ ಮುರಿದು ಹೊರ ಬಂದು ಎಲ್ಲೆಂದರಲ್ಲಿ ತಿರುಗುತ್ತಿದ್ದ ವ್ಯಕ್ತಿಗೆ ಬುದ್ಧಿವಾದ ಹೇಳಿದ ಕೊಡೆಕಲ್ ಠಾಣೆಯ ಎಎಸ್‍ಐ ಭೀಮಾಶಂಕರ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಮಹಾರಾಷ್ಟ್ರದಿಂದ ಬಂದ ಕಾರ್ಮಿಕ ವೆಂಕಟೇಶ್ ರಾಥೋಡ್ ಮತ್ತು ಆತನ ಕುಟುಂಬಸ್ಥರು ಎಎಸ್‍ಐ ಮೇಲೆ ಹಲ್ಲೆ ಮಾಡಿದ್ದಾರೆ.
ಪಿಕೆ ತಾಂಡದ ಪ್ರೌಢಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲಾಗಿದ್ದು, ಮಹಾರಾಷ್ಟ್ರದಿಂದ ಬಂದ ಕಾರ್ಮಿಕರನ್ನು ಇಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ ವೆಂಕಟೇಶ್ ಶಾಲೆಯ ಬೀಗ ಮುರಿದು ಹೊರಗಡೆ ಸುತ್ತಾಡುತ್ತಿದ್ದ. ಈ ವಿಷಯವನ್ನು ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಸ್ಥಳಕ್ಕೆ ತೆರಳಿ ವೆಂಕಟೇಶ್ ನಿಗೆ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ. ಈ ವೇಳೆ ವೆಂಕಟೇಶನ ಕುಟುಂಬಸ್ಥರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಸಮಯದಲ್ಲಿ ಕಲ್ಲು, ಕಟ್ಟಿಗೆಯಿಂದ ವೆಂಕಟೇಶ್ ಮತ್ತು ಕುಟುಂಬಸ್ಥರು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಕೊಡೆಕಲ್ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
Advertisement