ಬೆಂಗಳೂರು: ನಾಗವಾರ, ಜ್ಞಾನ ಭಾರತಿ ವಾರ್ಡ್ ಸೀಲ್ ಡೌನ್

ಎರಡು ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ನಾಗವಾರ ಮತ್ತು ಜ್ಞಾನ ಭಾರತಿ ವಾರ್ಡ್ ಗಳನ್ನು ಸೀಲ್ ಡೌನ್ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಎರಡು ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ನಾಗವಾರ ಮತ್ತು ಜ್ಞಾನ ಭಾರತಿ ವಾರ್ಡ್ ಗಳನ್ನು ಸೀಲ್ ಡೌನ್ ಮಾಡಿದ್ದಾರೆ.

ಈ ಸೋಂಕಿತರರು ಯಾರ್ಯಾರ ಜೊತೆ ಸಂಪರ್ಕ ಹೊಂದಿದ್ದರು ಎಂಬ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ,  ಜ್ಞಾನ ಭಾರತಿ ವಾರ್ಡ್ ನ ರೋಗಿ ಸಾವನ್ನಪ್ಪಿದ್ದು, ರೋಗಿ ಸತ್ತ ನಂತರ ಕೊರೋನಾ ಇದ್ಧದ್ದು ಧೃಡಪಟ್ಟಿದೆ.  ನಾಗವಾರದ ರೋಗಿ  ಕಳೆದ ಮೂರು ತಿಂಗಳಿಂದ ಹಾಸಿಗೆ ಹಿಡಿದಿದ್ದಾರೆ.

ವಾರ್ಡ್ ಗೆ ಭೇಟಿ ನೀಡಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ತಕ್ಷಣವೇ ಎರಡು ವಾರ್ಡ್ ಗಳನ್ನು ಸೀಲ್ ಡೌನ್ ಮಾಡಿದ್ದಾರೆ. ಜ್ಞಾನಭಾರತಿ ನಗರದ ರೋಗಿಗೆ ಯಾವುದೇ ಲಕ್ಷಣಗಳಿರಲಿಲ್ಲ, ಆತ ತನ್ನ ಸ್ನೇಹಿತನನ್ನು ನೋಡುವ ಸಲುವಾಗಿ ಖಾಸಗಿ ಆಸ್ಪತ್ರೆಗೆ ತೆರಳಿದ್ದ ಈ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದ, ಮರಣೋತ್ತರ ಪರೀಕ್ಷೆಯಲ್ಲಿ ಆತನಿಗೆ ಕೊರೋನಾ ಇರುವುದು ದೃಢವಾಯಿತು, ಹೀಗಾಗ್ 129ನೇ ವಾರ್ಡ್ ಸೀಲ್ ಡೌನ್ ಮಾಡಲಾಗಿದೆ.

ನಾಗವಾರದಲ್ಲಿ 30 ರೋಗಿ ಬೌರಿಂಗ್ ವರ್ಷದ ವ್ಯಕ್ತಿ ಕ್ಷಯರೋಗದಿಂದ ಬಳಲುತ್ತಿದ್ದು, ಆತ ಮದ್ಯವ್ಯಸನಿಯಾಗಿದ್ದ, ಆತನಿಗೂ ಸೋಂಕು ಖಾತರಿಯಾಗಿದ್ದು,  ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಎಲ್ಲಾ 53 ವ್ಯಕ್ತಿಗಳನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಕೆ.ಜಿ.ಹಳ್ಳಿಯ ಮುತ್ತಪ್ಪ ಕೊಳೆಗೇರಿ ಜನನಿಬಿಡವಾಗಿದ್ದು, ಅಧಿಕಾರಿಗಳು ಸೂಕ್ಷ್ಮ ನಿಗಾ ಇಡುತ್ತಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com