ರಾಯಬಾಗ: ಈಜಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಬಾಲಕ

ಗೆಳೆಯರೊಂದಿಗೆ ಘಟಪ್ರಭಾ ಎಡದಂಡೆ ಕಾಲುವೆಗೆ ಈಜಲು ಹೋಗಿದ್ದ ಯುವಕ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ರಾಯಬಾಗ ತಾಲೂಕಿನ ಮುಘಳಖೋಡ ಪಟ್ಟಣದಲ್ಲಿ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ರಾಯಬಾಗ: ಗೆಳೆಯರೊಂದಿಗೆ ಘಟಪ್ರಭಾ ಎಡದಂಡೆ ಕಾಲುವೆಗೆ ಈಜಲು ಹೋಗಿದ್ದ ಯುವಕ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ರಾಯಬಾಗ ತಾಲೂಕಿನ ಮುಘಳಖೋಡ ಪಟ್ಟಣದಲ್ಲಿ ನಡೆದಿದೆ. 

ಬಸವರಾಜ ಗೌಲೆತ್ತಿನವರ(೭) ಕೊಚ್ಚಿಕೊಂಡು ಹೋದ ಬಾಲಕ. ಬೀಕರ ಬಿಸಿಲಿನಿಂದ ಮೈ ತಂಪು ಮಾಡಿಕೊಳ್ಳಬೇಕೆಂದು ಈಜಲು ಘಟಪ್ರಭಾ ಯಡದಂಡೆ ಕಾಲುವೆಗೆ ಹೋಗಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಇದನ್ನರಿತ ಆತನ ಗೆಳೆಯರು ಊರಲ್ಲಿ ತಿಳಿಸಿದ್ದ ಹಿನ್ನೆಲೆಯಲ್ಲಿ ಸ್ಥಳೀಯರ ಸಹಾಯದಿಂದ ಆತನ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಘಟನೆ ತಿಳಿದ ತಕ್ಷಣ ಸ್ಥಳೀಯರು ನಿರಂತರವಾಗಿ ಹುಡುಕಾಟದಲ್ಲಿ ತೊಡಗಿದ್ದರೂ ಬಾಲಕ ಪತ್ತೆಯಾಗಿಲ್ಲ. ಇದರಿಂದ ಬಾಲಕನ ತಂದೆ ತಾಯಿ ಕುಟುಂಬಸ್ಥರ ಅಕ್ರಂಧನ ಮುಗಿಲು ಮುಟ್ಟಿದೆ.

ಈ ಘಟನೆ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com