ಕೊರೋನಾ ವೈರಸ್
ರಾಜ್ಯ
ರಾಜ್ಯಕ್ಕೆ ಕೊರೋನಾಘಾತ: ಇಂದು 115 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 2,533ಕ್ಕೆ ಏರಿಕೆ!
ಕರ್ನಾಟಕದಲ್ಲಿ ಹೊಸದಾಗಿ 115 ಕೊರೋನಾ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 2,533ಕ್ಕೆ ಏರಿಕೆಯಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಹೊಸದಾಗಿ 115 ಕೊರೋನಾ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 2,533ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಸಚಿವಾಲಯ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಮಧ್ಯಾಹ್ನದವರೆಗೂ 115 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,533ಕ್ಕೆ ಏರಿಕೆಯಾಗಿದೆ. ಈವರೆಗೂ 834 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂದು ಉಡುಪಿ 29, ದಕ್ಷಿಣ ಕನ್ನಡ 24, ಹಾಸನ 13, ಬೀದರ್ 12, ಬೆಂಗಳೂರು ನಗರ 9, ಯಾದಗಿರಿ 7, ಚಿತ್ರದುರ್ಗ 6, ಕಲಬುರಗಿ 5, ಹಾವೇರಿ 4, ಚಿಕ್ಕಮಗಳೂರು 3, ವಿಜಯಪುರ 2, ಚಿಕ್ಕಮಗಳೂರು 3, ರಾಯಚೂರು 1 ಪ್ರಕರಣ ದಾಖಲಾಗಿದೆ.
2,533 ಪ್ರಕರಣಗಳ ಪೈಕಿ 1650 ಕೇಸ್ ಗಳು ಸಕ್ರೀಯವಾಗಿದೆ. ಇನ್ನು ರಾಜ್ಯದಲ್ಲಿ ಸೋಂಕಿಗೆ 47 ಮಂದಿ ಬಲಿಯಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ