ಆರ್ ಸಿಬಿಯಿಂದ ರಾಜ್ಯೋತ್ಸವ ಶುಭಾಶಯ
ರಾಜ್ಯ
ಐಪಿಎಲ್ 2020: ಕರ್ನಾಟಕ ರಾಜ್ಯೋತ್ಸವಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಕನ್ನಡಿಗರಿಗೆ ಭರ್ಜರಿ ಗಿಫ್ಟ್!
ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವ ಕನ್ನಡಿಗರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡದಲ್ಲೇ ಕನ್ನಡಿಗರಿಗೆ ಶುಭ ಕೋರುವ ಮೂಲಕ ಭರ್ಜರಿ ಉಡುಗೊರೆ ನೀಡಿದೆ.
ದುಬೈ: ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವ ಕನ್ನಡಿಗರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡದಲ್ಲೇ ಕನ್ನಡಿಗರಿಗೆ ಶುಭ ಕೋರುವ ಮೂಲಕ ಭರ್ಜರಿ ಉಡುಗೊರೆ ನೀಡಿದೆ.
ಆರ್ ಸಿಬಿಯ ನಾಯಕ ವಿರಾಟ್ ಕೊಹ್ಲಿ, ಸೇರಿದಂತೆ ರಾಜ್ಯದ ಪ್ರತಿಭೆ ದೇವದತ್ ಪಡಿಕ್ಕಲ್, ಎಬಿಡಿ ವಿಲಿಯರ್ಸ್, ಡೆಲ್ ಸ್ಟೇಯ್ನ್, ಶಾಬಾಜ್ ಅಹ್ಮದ್, ಉಮೇಶ್ ಯಾದವ್, ಶಿವಂ ದುಬೆ, ಯಜುವೇಂದ್ರ ಚಹಲ್, ಮಹಮದ್ ಸಿರಾಜ್, ಪವನ್ ದೇಶಪಾಂಡೆ ಶುಭ ಕೋರಿದ್ದಾರೆ. ಆ ಮೂಲಕ ಆರ್ ಸಿಬಿ ಕನ್ನಡ ಭಾಷೆಯಲ್ಲೇ ಶುಭಕೋರುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.
ಈ ವಿಶೇಷ ವಿಡಿಯೋವನ್ನು ಆರ್ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾವಿರಾರು ಮಂದಿ ಕನ್ನಡಿಗರು ಮತ್ತು ಆರ್ ಸಿಬಿ ಅಭಿಮಾನಿಗಳು ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ. ಕನ್ನಡಿಗರ ಮನಗೆದ್ದ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ