
ಬಾಗಲಕೋಟೆ: ಮಾಜಿ ಸಚಿವೆ, ನಟಿ ಉಮಾಶ್ರೀಯವರ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ಬಾಗಲಕೋಟೆಯ ರಬಕವಿಯ ವಿದ್ಯಾನಗರದಲ್ಲಿ ವರದಿಯಾಗಿದೆ.
ರಬಕವಿಯಲ್ಲಿನ ಮನೆ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಅಪಾರ ಹಣ ಹಾಗೂ ವಸ್ತುಗಳನ್ನು ದೋಚಿದ್ದಾರೆ ಎನ್ನಲಾಗಿದೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಇದೀಗ ಉಮಾಶ್ರೀ ಬೆಂಗಳೂರಿನಿಂದ ರಬಕವಿಗೆ ತೆರಳುತ್ತಿದ್ದಾರೆ ಅಲ್ಲಿ ಮುಟ್ಟಿದ ನಂತರವೇ ಕಳ್ಳತನವಾಗಿರುವ ಹಣ, ವಸ್ತುಗಳ ನಿಖರ ಪ್ರಮಾಣ ಲಭ್ಯವಾಗಲಿದೆ.
ಸ್ಥಳಕ್ಕೆ ಸಿಪಿಐ ಕರುಣೇಗೌಡ ಆಗಮಿಸಿ ಪರಿಶೀಲಿಸಿದ್ದು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement