ಆರ್‌ಆರ್ ನಗರ ಉಪಚುನಾವಣೆ: ಮತದಾನ ವೇಳೆ ಕೊಟ್ಟ ಗ್ಲೌಸ್'ಗಳನ್ನು ಎಲ್ಲೆಂದರಲ್ಲಿ ಎಸೆದ ಜನ

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಈ ನಡುವಲ್ಲೇ ಮತಗಟ್ಟೆಯಲ್ಲಿ ಮತದಾರರಿಗೆ ನೀಡಲಾಗಿರುವ ಗ್ಲೌಸ್ ಗಳನ್ನು ಮತದಾರರು ಎಲ್ಲೆಂದಲ್ಲಿ ಬಿಸಾಡಿ ಹೋಗಿರುವುದು ಕಂಡು ಬಂದಿದೆ. 
ಹ್ಯಾಂಡ್ ಗ್ಲೌಸ್ ಗಳನ್ನು ಎಲ್ಲೆಂದರಲ್ಲಿ ಎಸೆದಿರುವ ಮತದಾರರು
ಹ್ಯಾಂಡ್ ಗ್ಲೌಸ್ ಗಳನ್ನು ಎಲ್ಲೆಂದರಲ್ಲಿ ಎಸೆದಿರುವ ಮತದಾರರು

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಈ ನಡುವಲ್ಲೇ ಮತಗಟ್ಟೆಯಲ್ಲಿ ಮತದಾರರಿಗೆ ನೀಡಲಾಗಿರುವ ಗ್ಲೌಸ್ ಗಳನ್ನು ಮತದಾರರು ಎಲ್ಲೆಂದಲ್ಲಿ ಬಿಸಾಡಿ ಹೋಗಿರುವುದು ಕಂಡು ಬಂದಿದೆ. 

ಕೊರೋನಾ ಹಿನ್ನೆಲೆಯಲ್ಲಿ ಮತದಾರರಿಗೆ ಹ್ಯಾಂಡ್ ಗ್ಲೌಸ್ ನೀಡಲಾಗುತ್ತಿದೆ. ಆದರೆ, ಚುನಾವಣಾ ಆಯೋಗದ ಈ ನಿರ್ಧಾರ ಮತ್ತೊಂದು ಸಮಸ್ಯೆಯನ್ನು ಸೃಷ್ಟಿ ಮಾಡಿದೆ. 

ಬೂತ್ ನಂಬರ್ 137 ರಿಂದ 139ರ ಮುಂಭಾಗ ಚುನಾವಣಾ ಸಿಬ್ಬಂದಿ ನೀಡಿದ ಹ್ಯಾಂಡ್ ಗ್ಲೌಸ್​ಗಳು ಬೇಕಾಬಿಟ್ಟಿಯಾಗಿ ಬಿದ್ದಿರುವ ದೃಶ್ಯ ಕಂಡು ಬಂದಿದೆ. ರಸ್ತೆಯುದ್ದಕ್ಕೂ ಹಲವಾರು ಗ್ಲೌಸ್​ಗಳು ಬಿದ್ದಿವೆ.

ಕೆಲ ಮತಕ್ಷೇತ್ರಗಳಲ್ಲಿ ಹ್ಯಾಂಡ್ ಗ್ಲೌಸ್'ಗಳನ್ನು ಬಿಸಾಡಲು ವ್ಯವಸ್ಥೆಗಳನ್ನು ಮಾಡದಿರದ ಕಾರಣ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.  ಬೂತ್ 141, 141/A ನಲ್ಲಿ ಕಸದ ಬುಟ್ಟಿ ವ್ಯವಸ್ಥೆ ಇಲ್ಲ. ಆದರೆ 143, 153 ನಲ್ಲಿ ಕಸದ ಬುಟ್ಟಿಯ ವ್ಯವಸ್ಥೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com