

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ಸೊನ್ನಾಪುರ ಬಳಿಯಿರುವ ಗೋಪಾಲಕೃಷ್ಣ ಅಮ್ಮಣ್ಣಿ ಕೆರೆಗೆ, ಜಿಲ್ಲೆಯ ಅಂತರ್ಜಲ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಬ್ಬಾಳ ಮತ್ತು ನಾಗವಾರ ಕೆರೆಯ ಎರಡನೇ ಬಾರಿ ಸಂಸ್ಕರಿಸಿದ ನೀರನ್ನು ಬಿಡಲಾಗುತ್ತಿದೆ,
ನಂದಿ ಬೆಟ್ಟಗಳಿಗೆ ಹೋಗುವ ಮಾರ್ಗದಲ್ಲಿ ಹೈದರಾಬಾದ್‌ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಕೆರೆಯಿದ್ದು ಪಕ್ಷಿಗಳ ವಾಸದಿಂದ ಪ್ರಸಿದ್ಧಿಯಾಗಿದೆ, ಕಳೆದ ತಿಂಗಳವರೆಗೂ ಸುಮಾರು 125 ಜಾತಿಯ ಪಕ್ಷಿಗಳನ್ನು ಸುಲಭವಾಗಿ ಎಣಿಸಬಹುದಿತ್ತು ಎಂದು ಪಕ್ಷಿ ವಿಜ್ಞಾನಿಗಳು ತಿಳಿಸಿದ್ದಾರೆ. ಇವುಗಳಲ್ಲಿ ವಲಸೆ ಹಕ್ಕಿಗಳು ಕೂಡ ಸೇರಿವೆ, ಆದರೆ ಸದ್ಯ ನಾಗರಿಕ ಕೆಲಸಗಳು ನಡೆಯುತ್ತಿರುವ ಕಾರಣ ಕೆರೆಯಲ್ಲಿನ ನೀರು ಖಾಲಿಯಾಗಿ ಅಪಾಯದಲ್ಲಿದೆ, ಸಂಸ್ಕರಿಸಿದ ನೀರನ್ನು ಸಣ್ಣ ನೀರಾವರಿ ಇಲಾಖೆಯಿಂದ ಕೆರೆಗೆ ಪಂಪ್ ಮಾಡಲಾಗುತ್ತಿದೆ. 5 ವರ್ಷಗಳ ಕೆಳಗೆ ತೋಟಗಾರಿಕಾ ಇಲಾಖೆ ಸಣ್ಣ ಗ್ಲಾಸ್ ಹೌಸ್ ಅನ್ನು ನಿರ್ಮಿಸಿದೆ.
ಇಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಜೀವ ವೈವಿಧ್ಯತೆಗೆ ಹಾನಿಉಂಟಾಗುವ ಆತಂಕ ಎದುರಾಗಿದೆ.ಇದು ಸಣ್ಣ ನೀರಾವರಿ ಮತ್ತು ತೋಟಗಾರಿಕೆ ಇಲಾಖೆಯ ನಡುವಿನ ಜಗಳವನ್ನು ಬಹಿರಂಗಪಡಿಸಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಮಗಾರಿ ಆರಂಭಿಸುವ ಮುನ್ನ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
600 ಎಕರೆ ಪ್ರದೇಶದಲ್ಲಿ ಜಲಮೂಲ ಹರಡಿದ್ದು, ಅದರಲ್ಲಿ 70 ಎಕರೆ ತೋಟಗಾರಿಕೆ ಇಲಾಖೆಯಡಿ ಇದೆ ಎಂದು ಹಿರಿಯ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ. ಸರ್ಕಾರದ ಆದೇಶದಂತೆ ಸಂಸ್ಕರಿಸಿದ ನೀರನ್ನು ಕೆರೆಗೆ ಬಿಡಲಾಗುತ್ತಿದೆ, ನಾವು ಜೀವ ವೈವಿಧ್ಯತೆಗೆ ಹಾನಿ ಉಂಟು ಮಾಡುತ್ತಿಲ್ಲ, ಅಂತರ್ಜಲ ಮಟ್ಟ ಸುಧಾರಿಸಲು ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.