ಕೊರೋನಾ ತಡೆಗಟ್ಟುವಿಕೆಗೆ ಕ್ರಮ: ರೆಸ್ಟೊರೆಂಟ್ ಗಳಲ್ಲಿ ಸಿಬ್ಬಂದಿಗಳ ತಪಾಸಣೆಗೆ ಮುಂದಾದ ಬಿಬಿಎಂಪಿ 

ಹೊಟೇಲ್ ಮತ್ತು ರೆಸ್ಟೋರೆಂಟ್ ಗಳಿಗೆ ಭೇಟಿ ನೀಡುವ ಗ್ರಾಹಕರು ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ರೆಸ್ಟೋರೆಂಟ್ ಗಳ ಮಾಲೀಕರು ಮತ್ತು ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೊಟೇಲ್ ಮತ್ತು ರೆಸ್ಟೋರೆಂಟ್ ಗಳಿಗೆ ಭೇಟಿ ನೀಡುವ ಗ್ರಾಹಕರು ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ರೆಸ್ಟೋರೆಂಟ್ ಗಳ ಮಾಲೀಕರು ಮತ್ತು ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಿದೆ.

ಕಳೆದ ಜೂನ್ ನಲ್ಲಿ ಜನರು ಹೆಚ್ಚು ಸೇರುವ ಪ್ರದೇಶಗಳಾದ ಮಾರುಕಟ್ಟೆ ಪ್ರದೇಶಗಳು, ಸೂಪರ್ ಮಾರ್ಕೆಟ್ ಗಳು, ವೈದ್ಯಕೀಯ ಕೇಂದ್ರಗಳು ಮತ್ತು ರೆಸ್ಟೋರೆಂಟ್ ಗಳಲ್ಲಿ ಪರೀಕ್ಷೆ ನಡೆಸಲು ಯೋಜನೆ ರೂಪಿಸಿತ್ತು. ಆಗಸ್ಟ್ ನಲ್ಲಿ ಪರೀಕ್ಷಾ ಕ್ಯಾಂಪ್ ಗಳನ್ನು ಸ್ಥಾಪಿಸಲಾಯಿತು. ನಂತರ ಇದನ್ನು ರೆಸ್ಟೋರೆಂಟ್ ಗಳಿಗೆ ಸಹ ವಿಸ್ತರಿಸಲಾಯಿತು.

ಮೂರು ದಿನಗಳ ಹಿಂದೆ ಅಂದರೆ ಕಳೆದ ಬುಧವಾರ ರೆಸ್ಟೊರೆಂಟ್ ಗಳಿಗೆ ಬಂದ ಬಿಬಿಎಂಪಿ ಸಿಬ್ಬಂದಿ ನಾವು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ಇದೊಂದು ಉತ್ತಮ ಅಭಿಯಾನ. ರೆಸ್ಟೊರೆಂಟ್ ಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುವುದರಿಂದ ನಮಗೆ ಸೋಂಕು ತಗಲದೆ ಸುರಕ್ಷಿತವಾಗಿರಬೇಕು ಎನ್ನುತ್ತಾರೆ ಮ್ಯೂಸಿಯಂ ರಸ್ತೆಯಲ್ಲಿರುವ ದಿ ಒನ್ಲಿ ಪ್ಲೇಸ್ ನ ಮಾಲೀಕ ರುಫ್ಖಾ ಹಸನ್.

ಕೋರಮಂಗಲದಲ್ಲಿ ಬಿಬಿಎಂಪಿ ಕಾರ್ಯಕರ್ತರು 15 ರೆಸ್ಟೊರೆಂಟ್ ಗಳ ಸಿಬ್ಬಂದಿ ಮೇಲೆ ಪರೀಕ್ಷೆ ನಡೆಸಿದ್ದಾರೆ. ಸಿಬ್ಬಂದಿ ಕೊರೋನಾ ಸೋಂಕಿನ ಲಕ್ಷಣ ಹೊಂದಿಲ್ಲದಿದ್ದರೂ ಕೂಡ ಹಲವರಲ್ಲಿ ಪಾಸಿಟಿವ್ ಕಂಡುಬಂದು ಐಸೊಲೇಟ್ ಆಗಿದ್ದಾರೆ. ಒಂದು ಬಾರಿ ಸಿಬ್ಬಂದಿಗೆ ಸೋಂಕು ತಗುಲಿದರೆ ನಂತರ ಅವರನ್ನು ಪ್ರತ್ಯೇಕಿಸಿ ಇಡೀ ಕಚೇರಿಯನ್ನು ಸ್ಯಾನಿಟೈಸ್ ಮಾಡಿ ಪಾಸಿಟಿವ್ ಬಂದವರನ್ನು ಯಾರೆಲ್ಲಾ ಸಂಪರ್ಕಿಸಿದ್ದಾರೆ ಎಂದು ಪತ್ತೆ ಹಚ್ಚುತ್ತೇವೆ. ದೊಡ್ಡ ದೊಡ್ಡ ರೆಸ್ಟೊರೆಂಟ್ ಗಳಲ್ಲಿ ಗ್ರಾಹಕರು ಬುಕ್ಕಿಂಗ್ ಮಾಡಿ ಬರುವುದರಿಂದ ಅವರ ಸಂಪರ್ಕವನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎನ್ನುತ್ತಾರೆ ಬಿಬಿಎಂಪಿಯ ಮೊಬೈಲ್ ಟೆಸ್ಟಿಂಗ್ ತಂಡದ ಕಾರ್ಯಕರ್ತ ಮತ್ತು ಸಮನ್ವಯಾಧಿಕಾರಿ ರಾಹುಲ್ ಫ್ರಾನ್ಸಿಸ್. 

ಹೊಟೇಲ್ ಸಿಬ್ಬಂದಿ ಪ್ರತಿ ತಿಂಗಳು ತಪಾಸಣೆಗೆ ಒಳಗಾಗಬೇಕೆಂದು ಸರಕಾರ ಸುತ್ತೋಲೆ ಹೊರಡಿಸಬೇಕು.ಯಾರಾದರೂ ಸೌಖ್ಯವಿಲ್ಲವೆಂದು 3 ದಿನ ರಜೆ ಹಾಕಿ ಕಚೇರಿಗೆ ಬರದೆ ನಂತರ ಬರುವಾಗ ಕೊರೋನಾ ನೆಗೆಟಿವ್ ವರದಿ ತರಬೇಕು. ಹೊಸ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗುವುದಕ್ಕೆ 72 ಗಂಟೆಗಳ ಮೊದಲು ಕೊರೋನಾ ನೆಗೆಟಿವ್ ವರದಿ ತಂದಿರಬೇಕು ಎನ್ನುತ್ತಾರೆ ಬಿಬಿಎಂಪಿ ಪೂರ್ವ ವಲಯದ ನೋಡಲ್ ಅಧಿಕಾರಿ ಡಾ ಭಾಸ್ಕರ್ ರಾಜ್ ಕುಮಾರ್. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com