ಭಯೋತ್ಪಾದಕರೊಂದಿಗೆ ನಂಟು: ಆಗಸ್ಟ್ ನಿಂದೀಚೆಗೆ ಎನ್ ಐ ಎ ಯಿಂದ ಕರ್ನಾಟಕದಲ್ಲಿ 7 ಮಂದಿ ಬಂಧನ

ಭಯೋತ್ಪಾದನೆ ಪ್ರಕರಣಗಳ ಸಂಬಂಧ ಆಗಸ್ಟ್ ನಿಂದ ಇಲ್ಲಿಯವರೆಗೆ ರಾಷ್ಟ್ರೀಯ ತನಿಖಾ ತಂಡ 7 ಮಂದಿಯನ್ನು ಬಂಧಿಸಿದೆ. 
ಎನ್ ಐಎ ತಂಡ
ಎನ್ ಐಎ ತಂಡ
Updated on

ಬೆಂಗಳೂರು: ಭಯೋತ್ಪಾದನೆ ಪ್ರಕರಣಗಳ ಸಂಬಂಧ ಆಗಸ್ಟ್ ನಿಂದ ಇಲ್ಲಿಯವರೆಗೆ ರಾಷ್ಟ್ರೀಯ ತನಿಖಾ ತಂಡ 7 ಮಂದಿಯನ್ನು ಬಂಧಿಸಿದೆ. 7 ಮಂದಿಯಲ್ಲಿ ಐವರು ಕರ್ನಾಟಕದವರಾಗಿದ್ದು, ಒಬ್ಬ ತಮಿಳುನಾಡಿನವರಾಗಿದ್ದಾನೆ.

ಒಬ್ಬ ಬೆಂಗಳೂರಿನವನು ಮತ್ತೊಬ್ಬ ಉತ್ತರ ಕನ್ನಡವನಾಗಿದ್ದರೇ ಇಬ್ಬರು ವೈದ್ಯರಾದ ಡಾ.ಸಬೀಲ್ ಅಹ್ಮದ್ ಮತ್ತು ಡಾ. ಅಬ್ದುಲ್ ರೆಹಮಾನ್ ಹಾಗೂ  ಮೂರನೇಯವನು  ಅಬ್ದುಲ್ ಅಹಮದ್ ಖಾದರ್ ತಮಿಳುನಾಡಿನ ರಾಮನಾಥಪುರಂ ನವನಾಗಿದ್ದಾನೆ.

ಬೆಂಗಳೂರು ನಗರದಲ್ಲಿ 2012 ರ ಲಷ್ಕರ್-ಎ-ತೈಬಾ (ಎಲ್‌ಇಟಿ) ಉಗ್ರರ ನೇಮಕಾತಿ ಪ್ರಕರಣದಲ್ಲಿ ಆಗಸ್ಟ್ 30 ರಂದು ಸೌದಿ ಅರೇಬಿಯಾದಿಂದ ಗಡೀಪಾರು ಮಾಡಿದ ನಂತರ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಬೀಲ್‌ನನ್ನು ಬಂಧಿಸಲಾಯಿತು.

ನೇತ್ರಶಾಸ್ತ್ರಜ್ಞ ರೆಹಮಾನ್ ನನ್ನು ಆಗಸ್ಟ್ 17 ರಂದು ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯದಲ್ಲಿ ಬಂಧಿಸಲಾಯಿತು. ಅಹ್ಮದ್ ಮತ್ತು ರೆಹಮಾನ್ ಇಬ್ಬರೂ ವೈದ್ಯರ ಕುಟುಂಬಗಳಿಗೆ ಸೇರಿದವರು. ಕಫೀಲ್ ಅಹ್ಮದ್ ಜೂನ್ 29, 2007 ರಂದು ಗ್ಲ್ಯಾಸ್ಗೋ ವಿಮಾನ ನಿಲ್ದಾಣದಲ್ಲಿ ದಾಳಿ ನಡೆಸಿದ್ದ. ನಂತರ ಸುಟ್ಟ ಗಾಯಗಳಿಂದ ಆತ ಸಾವನ್ನಪ್ಪಿದ್ದ.

ಸೆಪ್ಟೆಂಬರ್‌ನಲ್ಲಿ, ಡಿಜೆ ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಬ್ಯಾಂಕ್ ರಿಕವರಿ ಏಜೆಂಟ್ ಸೈಯದ್ ಸಾದಿಕ್ ಅಲಿಯನ್ನು ಎನ್ ಐ ಎ ಬಂಧಿಸಿತ್ತು ಮತ್ತು ಅಕ್ಟೋಬರ್‌ನಲ್ಲಿ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಆಟೋ ಚಾಲಕ ಸೈಯದ್ ಸೇತುನನ್ನು ಬಂಧಿಸಿತ್ತು.

ಮಂಗಳವಾರ, ಎನ್ಐಎ ಕಾನೂನುಬಾಹಿರ ಲಷ್ಕರ್-ಎ-ತೈಬಾ ನೇಮಕಾತಿ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ 28 ವರ್ಷದ ಸಯ್ಯದ್ ಎಂ ಇಡ್ರಿಸ್ ಎಂಬಾತನನ್ನು ಬಂಧಿಸಿದೆ.  ಅದೇ ತಿಂಗಳಲ್ಲಿ ಇರ್ಫಾನ್ ನಾಸಿರ್ ಮತ್ತು ಕಾದರ್ ನನ್ನು ಐಎಸ್ ಮತ್ತು ಎಸಿಸ್ ಸಂಘಟನೆಗೆ ಸಂಬಂಧಿಸಿದ ಬೆಂಗಳೂರು ಮೂಲದ ಇಬ್ಬರನ್ನು ಬಂಧಿಸಿತ್ತು.

ಜುಲೈನಲ್ಲಿ ರಾಷ್ಟ್ರೀಯ ತನಿಖಾ ತಂಡ ಐಸಿಸ್ ಸಂಪರ್ಕ ಹೊಂದಿದ್ದ 17 ಮಂದಿ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿತ್ತು. ಬೆಂಗಳೂರಿನ ಮೆಹಬೂಬ್ ಪಾಶಾ, ಕೋಲಾರದ ಇಬ್ಬರು ಮತ್ತು ಉಳಿದವರು ತಮಿಳುನಾಡಿನವರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com