ಅನ್ ಲಾಕ್ 6.0: ನಾಳೆಯಿಂದ ಕಾಲೇಜು ತರಗತಿಗಳ ಆರಂಭಕ್ಕೆ ಸಿದ್ಧತೆ

ಪದವಿ, ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಕಾಲೇಜುಗಳ ತರಗತಿಗಳು ನಾಳೆಯಿಂದ ಆರಂಭಗೊಳ್ಳಲಿದ್ದು, ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ನೇರ ತರಗತಿಗಳು ನಡೆಯಲಿವೆ.
ಸೆಂಟ್ರಲ್ ಕಾಲೇಜು
ಸೆಂಟ್ರಲ್ ಕಾಲೇಜು

ಬೆಂಗಳೂರು: ಪದವಿ, ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಕಾಲೇಜುಗಳ ತರಗತಿಗಳು ನಾಳೆಯಿಂದ ಆರಂಭಗೊಳ್ಳಲಿದ್ದು, ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ನೇರ ತರಗತಿಗಳು ನಡೆಯಲಿವೆ.

ತರಗತಿಗಳು ಮತ್ತೆ ಆರಂಭಿಸಲು ತಯಾರಾಗುತ್ತಿರುವುದರಿಂದ ಬೆಂಗಳೂರಿನ ಕಾಲೇಜುಗಳು ಕ್ಯಾಂಪಸ್‌ಗಳನ್ನು ಸುರಕ್ಷಿತವಾಗಿ ಮತ್ತು ಕಡಿಮೆ ಸಂಖ್ಯೆಯಲ್ಲಿ ಜನರನ್ನು ಇಡಲು ಕ್ರಮ ಕೈಗೊಳ್ಳಲಾಗುತ್ತಿದೆ. 

ಕಾಲೇಜುಗಳನ್ನು ತೆರೆಯಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮಾರ್ಗಸೂಚಿ ಹೊರಡಿಸಿದ್ದು, ಅದರಂತೆ ಕಾಲೇಜುಗಳನ್ನು ಪುನರಾರಂಭಿಸಲು ಉನ್ನತ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಉಳಿದ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುತ್ತದೆ.
 
ನೇರ ತರಗತಿಗೆ ಅಂದರೆ, ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರ ನೀಡಬೇಕು. ಬೋಧಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಮೂರು ದಿನ ಮೊದಲು ಕೋವಿಡ್ ಪರೀಕ್ಷೆ ಮಾಡಿಕೊಂಡು, ನೆಗೆಟಿವ್‌ ಇದ್ದಲ್ಲಿ ಮಾತ್ರ ಹಾಜರಾಗಲು ಅವಕಾಶ ನೀಡಬೇಕು ಎಂದು ಸಂಬಂಧಪಟ್ಟ ಪ್ರಾಚಾರ್ಯರಿಗೆ ಸೂಚನೆ ನೀಡಲಾಗಿದೆ.

ಒಂದು ವೇಳೆ ಉಪನ್ಯಾಸಕರಿಗೆ ಕೊರೋನಾ ಪಾಸಿಟಿವ್ ಕಂಡು ಬಂದರೆ ಅವರು ಮನೆಯಿಂದ ಕಲಿಸುವುದನ್ನು ಮುಂದುವರೆಸುತ್ತಾರೆ, ಆದರೆ ಕೋಣೆಯನ್ನು ಸ್ವಚ್ಛಗೊಳಿಸುವವರೆಗೂ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಅದರ ಅಂಗಸಂಸ್ಥೆ ಕಾಲೇಜುಗಳು ತಮ್ಮ ಪ್ರಾಯೋಗಿಕ ತರಗತಿಗಳನ್ನು 20 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಲು ಸಜ್ಜಾಗಿದೆ.ಕಾಲೇಜುಗಳು ಆನ್‌ಲೈನ್ ತರಗತಿಗಳಿಗೆ ಮರಳಿದರೆ, ವಿದ್ಯಾರ್ಥಿಗಳು ತಮ್ಮ ಪ್ರಾಕ್ಟಿಕಲ್ಸ್ ಗಳನ್ನು ಆಫ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದಿತ್ತು ಮತ್ತು ಆಫ್‌ಲೈನ್‌ನಲ್ಲಿ ನಡೆಯುವ ಆಂತರಿಕ ಪರೀಕ್ಷೆಗಳು ಹೆಚ್ಚಿನ ವೈಟೇಜ್ ಹೊಂದಿರುತ್ತವೆ.

ಎರಡು ವಾರಗಳ ಕಾಲ ಪರಿಸ್ಥಿತಿಯನ್ನು ಪರಿಶೀಲಿಸಿ ಮುಂದಿನ ಹಂತಗಳಲ್ಲಿ ಕಾಲೇಜು ತೆರೆಯಲು ಕ್ರಮ ಕೈಗೊಳ್ಳಲಾಗುತ್ತದೆ, ಎಂಜಿನಿಯರಿಂಗ್ ಕಾಲೇಜುಗಳು ತಮ್ಮ ತರಗತಿ ಆರಂಭಿಸಲು ಇನ್ನೂ ಸ್ವಲ್ಪ ಸಮಯವನ್ನು ಹೊಂದಿದೆ, ಮೊದಲ ವರ್ಷದ ಪ್ರವೇಶ ಇನ್ನೂ ನಡೆಯುತ್ತಿದೆ.  ಹೀಗಾಗಿ ಮೊದಲ ವರ್ಷ ತರಗತಿಗಳು ಜನವರಿಯಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ವಿಟಿಯು ಉಪಕುಲಪತಿ ಕೆ, ಕರಿಸಿದ್ದಪ್ಪ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com