ಬೆಂಗಳೂರಿನಲ್ಲಿ 844 ಸೇರಿ ರಾಜ್ಯಾದ್ಯಂತ ಇಂದು 1505 ಕೊರೋನಾ ಪ್ರಕರಣಗಳು ವರದಿ
ರಾಜ್ಯ
ಬೆಂಗಳೂರಿನಲ್ಲಿ 844 ಸೇರಿ ರಾಜ್ಯಾದ್ಯಂತ ಇಂದು 1505 ಕೊರೋನಾ ಪ್ರಕರಣಗಳು ವರದಿ
ಬೆಂಗಳೂರು ನಗರದಲ್ಲಿ 844 ಸೇರಿದಂತೆ ನ.26 ರಂದು ರಾಜ್ಯಾದ್ಯಂತ ಒಟ್ಟಾರೆ 1505 ಕೊರೋನಾ ಸೋಂಕು ದೃಢಪಟ್ಟಿದೆ.
ಬೆಂಗಳೂರು: ಬೆಂಗಳೂರು ನಗರದಲ್ಲಿ 844 ಸೇರಿದಂತೆ ನ.26 ರಂದು ರಾಜ್ಯಾದ್ಯಂತ ಒಟ್ಟಾರೆ 1505 ಕೊರೋನಾ ಸೋಂಕು ದೃಢಪಟ್ಟಿದೆ.
ಈ ಮೂಲಕ ಕೋವಿಡ್-19 ಸಕ್ರಿಯ ಪ್ರಕರಣಗಳು 25316 ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಂಶಗಳ ಪ್ರಕಾರ ಕೋವಿಡ್-19 ಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಇಂದು 1067 ಜನರು ಡಿಸ್ಚಾರ್ಜ್ ಆಗಿದ್ದರೆ, 12 ಜನರು ಸಾವನ್ನಪ್ಪಿದ್ದು ಒಟ್ಟು ಸಾವಿನ ಸಂಖ್ಯೆ 11726ಕ್ಕೆ ಏರಿಕೆಯಾಗಿದೆ. ಈ ವರೆಗೂ 842499 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ವರೆಗೂ ಆಸ್ಪತ್ರೆಯ ಐಸಿಯುವಿನಲ್ಲಿ 409 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳು ಶೇಕಡಾವಾರು ಪ್ರಮಾಣ ಶೇ.1.25 ರಷ್ಟಿದ್ದು, ಮರಣದ ಪ್ರಮಾಣ ಶೇ.0.79 ರಷ್ಟಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ