ಪೊಲೀಸ್ ಇಲಾಖೆ ಆಧುನೀಕರಣಕ್ಕೆ 100 ಕೋಟಿ ರು. ಅನುದಾನ: ಸಿಎಂ ಯಡಿಯೂರಪ್ಪ

ಪೊಲೀಸ್ ಇಲಾಖೆಯ ಆಧುನಿಕರಣಕ್ಕಾಗಿ ಮುಂದಿನ ಬಜೆಟ್‌ನಲ್ಲಿ 100 ಕೋಟಿ ರೂಗಳ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯ
ವಿಧಿ ವಿಜ್ಞಾನ ಪ್ರಯೋಗಾಲಯ
Updated on

ಬೆಂಗಳೂರು: ಪೊಲೀಸ್ ಇಲಾಖೆಯ ಆಧುನಿಕರಣಕ್ಕಾಗಿ ಮುಂದಿನ ಬಜೆಟ್‌ನಲ್ಲಿ 100 ಕೋಟಿ ರೂಗಳ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಮಡಿವಾಳದಲ್ಲಿ ನಿರ್ಮಾಣಗೊಂಡಿರುವ ನ್ಯಾಯ ವಿಜ್ಞಾನ ಪ್ರಯೋಗಾಲಯ ನಿರ್ದೇಶನಾಲಯದ ನೂತನ ಕಟ್ಟಡ ಉದ್ಘಾಟಿಸಿ ಹಾಗೂ ಪೊಲೀಸ್ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಎಷ್ಟು ಮುಖ್ಯವೋ? ಅಪರಾಧಗಳನ್ನು ತಡೆಯುವುದು ಹಾಗೂ ತಪ್ಪಿತಸ್ಥರು
ಪಾರಾಗದಂತೆ ತನಿಖೆ ನಡೆಸುವುದೂ ಅಷ್ಟೇ ಮುಖ್ಯ. ಸರ್ಕಾರವು ಪೊಲೀಸ್ ಇಲಾಖೆಗೆ ಸುಸಜ್ಜಿತ ಕಟ್ಟಡ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒದಗಿಸುವ ಮೂಲಕ ನ್ಯಾಯ ವ್ಯವಸ್ಥೆಯನ್ನು ಬಲಗೊಳಿಸುತ್ತಿದೆ’ ಎಂದು ಹೇಳಿದರು.

ರಾಜ್ಯದ ಪೊಲೀಸ್ ವ್ಯವಸ್ಥೆಯು ದೇಶದಲ್ಲೇ ಅತ್ಯುತ್ತಮವಾಗಿದೆ. ಅದನ್ನು ಇನ್ನಷ್ಟು ಶಸಕ್ತಗೊಳಿಸಲು ಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಪೊಲೀಸ್ ಇಲಾಖೆಯ ಅಧುನೀಕರಣ ಕಾಲಕಾಲಕ್ಕೆ ನಡೆಯಬೇಕಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸೈಬರ್ ಅಪರಾಧಗಳಲ್ಲಿ ಹಣ ಕಳೆದುಕೊಂಡವರು ದೂರವಾಣಿ ಕರೆ ಮಾಡಿದರೆ ಸಾಕು ತಕ್ಷಣವೇ ಕೇಸು ದಾಖಲಿಸಿಕೊಂಡು ತೊಂದರೆಗೊಳಗಾದವರು ಮತ್ತು ಅಪರಾಧ ಮಾಡಿದವರ ಎರಡೂ ಖಾತೆಗಳನ್ನು ಜಪ್ತಿ ಮಾಡುವ ವಿನೂತನ ಪ್ರಯತ್ನವನ್ನು ರಾಜ್ಯ ಪೊಲೀಸರು ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಿದರು.

ಸೈಬರ್ ಕ್ರೈಂ ವಿಷಯದಲ್ಲಿ ಕರ್ನಾಟಕ ಸರ್ಕಾರ ಹೆಚ್ಚು ಅಭಿವೃದ್ದಿ ಸಾಧಿಸಿದೆ. ದೇಶದಲ್ಲೇ ಪ್ರಥಮ ಬಾರಿಗೆ ಪೊಲೀಸ್ ಸಹಾಯವಾಣಿ 100 ಗೆ ಕರೆ ಮಾಡಿ ಸೈಬರ್ ಕ್ರೈಂನ ದೂರುಗಳನ್ನು ದಾಖಲಿಸುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದರು. ಬ್ಯಾಂಕಿಂಗ್ ವಂಚನೆ ಪ್ರಕರಣಗಳಲ್ಲಿ ತೊಂದರೆಗೊಳಗಾದವರು ಕರೆ ಮಾಡಿದ ತಕ್ಷಣ ಅಕೌಂಟನ್ನು ಸೀಸ್ ಮಾಡುವುದು ಮತ್ತು ಅಪರಾಯನ್ನು ಪತ್ತೆಹಚ್ಚಿ ಆತನ ಖಾತೆಯನ್ನೂ ಜಪ್ತಿ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಇದಕ್ಕಾಗಿ ಆರ್ ಬಿಐ ಬ್ಯಾಂಕರ್ಸ್ ಗಳ ಜತೆ ಚರ್ಚೆ ಮಾಡಿದ್ದೇವೆ
ಎಂದು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com