ಯುವಕರ ನಡುವೆ ವಾಗ್ವಾದ: ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ ವ್ಯಕ್ತಿ ಕೊಲೆ

ವಾಗ್ವಾದವೊಂದು ಅತಿರೇಕಕ್ಕೆ ತಿರುಗಿ‌ ವ್ಯಕ್ತಿಯೋರ್ವನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಗಂಗೋಡನಹಳ್ಳಿ ಮಾರಮ್ಮನ ದೇವಸ್ಥಾನದ ಬಳಿ ಶನಿವಾರ ಮಧ್ಯರಾತ್ರಿ ನಡೆದಿದೆ.
ಯುವಕರ ನಡುವೆ ವಾಗ್ವಾದ: ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ ವ್ಯಕ್ತಿ ಕೊಲೆ
Updated on

ಬೆಂಗಳೂರು: ವಾಗ್ವಾದವೊಂದು ಅತಿರೇಕಕ್ಕೆ ತಿರುಗಿ‌ ವ್ಯಕ್ತಿಯೋರ್ವನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಗಂಗೋಡನಹಳ್ಳಿ ಮಾರಮ್ಮನ ದೇವಸ್ಥಾನದ ಬಳಿ ಶನಿವಾರ ಮಧ್ಯರಾತ್ರಿ ನಡೆದಿದೆ.

ವಾಗ್ವಾದದಲ್ಲಿ ತೊಡಗಿಸಿಕೊಂಡಿದ್ದ ದುಷ್ಕರ್ಮಿಗಳು ಅಬ್ದುಲ್ ಸಾಹೀಲ್ ಎಂಬಾತನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಸಾಹೀಲ್ ಶನಿವಾರ ರಾತ್ರಿ ಏರಿಯಾ ಯುವಕರೊಂದಿಗೆ ವಾಗ್ವಾದ ನಡೆಸಿದ್ದನು. ಈ ಘಟನೆ ನಡೆದ ನಂತರ ಮಧ್ಯರಾತ್ರಿ 12.30ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಮೂರ್ನಾಲ್ಕು ಜನರ ತಂಡ ಮಾರಕಾಸ್ತ್ರಗಳಿಂದ ಸಾಹಿಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ. 

ಘಟನೆ ಬಗೆಗೆ ಮಾಹಿತಿ ಪಡೆದ ಸಾಹೀಲ್ ಕುಟುಂಬ ಸದಸ್ಯರು ಆತನನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಸೇರುವ ಮುನ್ನವೇ ಆತ ಕೊನೆಯುಸಿರೆಳೆದಿದ್ದಾನೆ.  ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಸಾಹೀಲ್ ಹತ್ಯೆ ಕುರಿತಂತೆ  ಚಂದ್ರಾ ಲೇಔಟ್​ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com