ಅಗಲಿದ ಸಚಿವ ಸುರೇಶ್ ಅಂಗಡಿ ಕುಟುಂಬಕ್ಕೆ ರಾಜ್ಯಪಾಲರ ವಜುಭಾಯಿ ವಾಲಾ ಸಾಂತ್ವನ

ಇತ್ತೀಚೆಗೆ ನಿಧನರಾದ ರೈಲ್ವೆ ಸಚಿವ ಸುರೇಶ್ ಅಂಗಡಿಯವರ ಕುಟುಂಬ ಸದಸ್ಯರಿಗೆ ರಾಜ್ಯಪಾಲ ವಜುಭಾಯಿ ವಾಲಾ ಇಂದು ಬೆಳಗಾವಿಯಲ್ಲಿ ಸಾಂತ್ವನ ಹೇಳಿದರು.
ಅಗಲಿದ ಸಚಿವ ಸುರೇಶ್ ಅಂಗಡಿ ಮನೆಯಲ್ಲಿ ರಾಜ್ಯಪಾಲರು
ಅಗಲಿದ ಸಚಿವ ಸುರೇಶ್ ಅಂಗಡಿ ಮನೆಯಲ್ಲಿ ರಾಜ್ಯಪಾಲರು
Updated on

ಬೆಳಗಾವಿ: ಇತ್ತೀಚೆಗೆ ನಿಧನರಾದ ರೈಲ್ವೆ ಸಚಿವ ಸುರೇಶ್ ಅಂಗಡಿಯವರ ಕುಟುಂಬ ಸದಸ್ಯರಿಗೆ ರಾಜ್ಯಪಾಲ ವಜುಭಾಯಿ ವಾಲಾ ಇಂದು ಬೆಳಗಾವಿಯಲ್ಲಿ ಸಾಂತ್ವನ ಹೇಳಿದರು.

ಬೆಳಗಾವಿಯ ಸದಾಶಿವನಗರದಲ್ಲಿರುವ ದಿವಂಗತ ಸುರೇಶ್ ಅಂಗಡಿಯವರ ಮನೆಗೆ ರಾಜ್ಯಪಾಲರು ಭೇಟಿ ನೀಡಿದ್ದರು. ಈ ವೇಳೆ ಸಚಿವ ಅಂಗಡಿ ಪತ್ನಿ, ತಾಯಿ, ಮಕ್ಕಳನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.

ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು, ಸುರೇಶ್ ಅಂಗಡಿಯವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹೇಳಿದ್ದಾರೆ. 

ಸುರೇಶ್ ಅಂಗಡಿ ಉತ್ತಮ ಸಂಸದರಾಗಿದ್ದರು, ರೈಲ್ವೆ ಸಚಿವರಾಗಿ ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು ಎಂದು ಅಂಗಡಿಯವರ ಕಾರ್ಯಶೈಲಿಯನ್ನು ರಾಜ್ಯಪಾಲರು ಶ್ಲಾಘಿಸಿದ್ದಾರೆ. 

ಇದೇ ವೇಳೆ ಅಗಲಿದ ಸಚಿವರ ಪುತ್ರಿಯರ ಶಿಕ್ಷಣಕ್ಕೆ ಸಹಾಯ ಬೇಕಾದಲ್ಲಿ ರಾಜ್ಯಪಾಲರ ಕಚೇರಿಯನ್ನು ಸಂಪರ್ಕಿಸುವಂತೆ ಸಹ ಕುಟುಂಬಸ್ಥರಿಗೆ ರಾಜ್ಯಪಾಲರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com