ಬೆಂಗಳೂರು: ರೈಲ್ವೇ ಸಿಬ್ಬಂದಿಗಳಿಗೂ ಕೊರೋನಾ ಸೋಂಕು, ಕೆಎಸ್ಆರ್ ರೈಲ್ವೆ ಆಸ್ಪತ್ರೆ ಮೂಲಭೂತ ಸೌಕರ್ಯ ಹೆಚ್ಚಳ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಅಂತೆಯೇ ರೈಲ್ವೇ ಸಿಬ್ಬಂದಿಗಳಲ್ಲೂ ಸೋಂಕಿನ ಭೀತಿ ಹೆಚ್ಚಾಗಿದೆ. ಹೀಗಾಗಿ ಕೆಎಸ್ಆರ್ ರೈಲ್ವೆ ಆಸ್ಪತ್ರೆ ಮೂಲಭೂತ ಸೌಕರ್ಯ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ.
ರೈಲ್ವೇ ಆಸ್ಪತ್ರೆ
ರೈಲ್ವೇ ಆಸ್ಪತ್ರೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಅಂತೆಯೇ ರೈಲ್ವೇ ಸಿಬ್ಬಂದಿಗಳಲ್ಲೂ ಸೋಂಕಿನ ಭೀತಿ ಹೆಚ್ಚಾಗಿದೆ. ಹೀಗಾಗಿ ಕೆಎಸ್ಆರ್ ರೈಲ್ವೆ ಆಸ್ಪತ್ರೆ ಮೂಲಭೂತ ಸೌಕರ್ಯ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ.

ಕೆಎಸ್ಆರ್ ರೈಲ್ವೆ ನಿಲ್ದಾಣದ ಹಿಂದೆ ಇರುವ ರೈಲ್ವೆ ಆಸ್ಪತ್ರೆ ಕೋವಿಡ್-19ಗಾಗಿ ಮೀಸಲಿಟ್ಟಿರುವ ಆರೋಗ್ಯ ಕೇಂದ್ರವಾಗಿದೆ. ಇಲ್ಲಿ ಈಗಾಗಲೇ ಸೋಂಕಿತರು ಹೆಚ್ಚಾಗುವ ಭೀತಿಯಿಂದ ಮೂಲಭೂತ ಸೌಕರ್ಯಗಳನ್ನು ಹೆಚ್ಚಳ ಮಾಡಲಾಗಿದೆ. ದ್ರವ ಆಮ್ಲಜನಕ ಸ್ಥಾವರದಿಂದ ಸರಬರಾಜು ಮಾಡಲುಆಮ್ಲಜನಕವನ್ನು  ಸಂಗ್ರಹಿಸಬಲ್ಲ ಎರಡು ಟ್ಯಾಂಕರ್‌ಗಳು ಸಿದ್ಧಗೊಳಿಸಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ ಅವರು, 'ನಾವು ನಮ್ಮ ಸುಮಾರು 5,000 ಸಿಬ್ಬಂದಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದೇವೆ.ಈ ಪೈಕಿ 1,000 ಮಂದಿಯಲ್ಲಿ ಸೋಂಕು  ಪತ್ತೆಯಾಗಿದೆ. ಅವರಲ್ಲಿ 210 ಮಂದಿ ಇನ್ನೂ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 85 ಮಂದಿ ಮನೆ ಪ್ರತ್ಯೇಕತೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತೆಯೇ ಮಾರಕ ಕೊರೋನಾ ವೈರಸ್ ನಿಂದಾಗಿ ಬೆಂಗಳೂರು ರೈಲ್ವೇ ವಿಭಾಗದಲ್ಲಿ ಒಟ್ಟು 25 ಸಾವುಗಳು ಸಂಭವಿಸಿದ್ದು, ಈ ಪೈಕಿ ಹತ್ತು ಮಂದಿ ಹಾಲಿ  ನೌಕರರಾಗಿದ್ದು, ಎಂಟು ಮಂದಿ ಮಾಜಿ ಸಿಬ್ಬಂದಿ ಮತ್ತು ಎರಡೂ ವಿಭಾಗಗಳ ಏಳು ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ. ಕೃಷ್ಣರಾಜಪುರಂ ಲೊಕೊ ಶೆಡ್‌ನಲ್ಲಿ ಮಾತ್ರ, ಬಿಬಿಎಂಪಿ ಆರೋಗ್ಯ ಇಲಾಖೆಯ ನೆರವಿನೊಂದಿಗೆ ಪರೀಕ್ಷೆಗಳನ್ನು ನಡೆಸಿದ ನಂತರ 32 ಸಿಬ್ಬಂದಿಗಳು ಸೋಂಕಿಗೆ ತುತ್ತಾಗಿದ್ದಾರೆ ಎಂದು  ಹೇಳಿದರು.
 
ರೈಲ್ವೆ ಕೋವಿಡ್ ಆಸ್ಪತ್ರೆಯಲ್ಲಿ ಈಗ ವಾರ್ಡ್‌ನಲ್ಲಿ 40 ಹಾಸಿಗೆಗಳು, 14 ಐಸಿಯು ಹಾಸಿಗೆಗಳು, 24/7 ಆಂಬ್ಯುಲೆನ್ಸ್ ಸೇವೆಗಳು, ವಿಕಿರಣಶಾಸ್ತ್ರ ಮತ್ತು ಪ್ರಯೋಗಾಲಯ ಸೇವೆಗಳಿವೆ. ಕೋವಿಡ್ ರೋಗಿಗಳ ಚಿಕಿತ್ಸೆಗೆ ಸಹಾಯ ಮಾಡಲು ದಾದಿಯರು, ಲ್ಯಾಬ್ ತಂತ್ರಜ್ಞರು ಮತ್ತು ವಿಕಿರಣಶಾಸ್ತ್ರಜ್ಞರನ್ನು  ಹೊರತುಪಡಿಸಿ ಐಸಿಯು ರೋಗಿಗಳ ವೈದ್ಯರ ನಿರ್ಣಾಯಕ ಆರೈಕೆ ತಂಡವನ್ನು ಇತ್ತೀಚೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ನಮ್ಮಲ್ಲಿರುವ ಎಲ್ಲ ಹಾಸಿಗಳು ಭರ್ತಿಯಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಸಾಕಾಗುವಷ್ಟು ಆಮ್ಲ ಜನಕದ ದಾಸ್ತಾನಿದೆ. ಹೆಚ್ಚುವರಿ ಆಮ್ಲ ಜನಕ  ದಾಸ್ತಾನಿಗಾಗಿ ಆಮ್ಲಜನಕ ಸ್ಥಾವರ ನಿರ್ಮಾಣ ಮಾಡಲಾಗುತ್ತಿದೆ. ಈ ಸ್ಥಾವರವನ್ನು ಒಂದು ತಿಂಗಳ ಅವಧಿಯಲ್ಲಿ ಸಿದ್ಧಪಡಿಸಲಾಗುತ್ತದೆ. ಇದು ನಮ್ಮ ಟ್ಯಾಂಕರ್‌ಗಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. 

ನೈರುತ್ಯ ರೈಲ್ವೆಯ ಉಪ ಪ್ರಧಾನ ವ್ಯವಸ್ಥಾಪಕ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ ವಿಜಯ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡುತ್ತಾ, 'ಪ್ರತಿದಿನ ಸುಮಾರು 40 ಆರ್‌ಟಿ ಪಿಸಿಆರ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಮತ್ತು ವರದಿ ಮಾಡಲು ಮಾದರಿಗಳನ್ನು ಸರ್ಕಾರಿ ಲ್ಯಾಬ್‌ಗಳಿಗೆ  ಕಳುಹಿಸಲಾಗುತ್ತದೆ. ಎಲ್ಲಾ ರೋಗಲಕ್ಷಣದ ವ್ಯಕ್ತಿಗಳಿಗೆ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳನ್ನು ಸಹ ಮಾಡಲಾಗುತ್ತದೆ. ಇದಲ್ಲದೆ, ಹೊಸ ಕೋವಿಡ್ ಪ್ರಕರಣಗಳನ್ನು ಪತ್ತೆಹಚ್ಚಲು ಬೆಂಗಳೂರು ವಿಭಾಗದ ವಿವಿಧ ಘಟಕಗಳಲ್ಲಿ ತ್ವರಿತ ರ್ಯಾಪಿಡ್ ಆ್ಯಂಟಿಜೆನ್ ಶಿಬಿರಗಳನ್ನು ಮಾಡಲಾಗುತ್ತಿದೆ. ಅಂತೆಯೇ ಮನೆಯಲ್ಲೇ  ಪ್ರತ್ಯೇಕತೆಯಲ್ಲಿರುವ ರೋಗಿಗಳಿಗೆ, ಆರೋಗ್ಯ ಪರೀಕ್ಷಕರನ್ನು ಪ್ರತಿದಿನವೂ ಅವರ ಆರೋಗ್ಯವನ್ನು ಪರೀಕ್ಷಿಸಲು ನಿಯೋಜಿಸಲಾಗಿದೆ" ಎಂದು ಅವರು ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com