ಆರೋಗ್ಯ, ವೈದ್ಯಕೀಯ ಇಲಾಖೆ ಎರಡೂ ಒಂದು ಸಚಿವಾಲಯದ ಅಡಿಯಿದ್ದರೆ ಕೊರೋನಾ ವಿರುದ್ಧ ದಿಟ್ಟ ಹೋರಾಟ ಮಾಡಬಹುದು: ಸುಧಾಕರ್

ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಇಲಾಖೆ ಎರಡೂ ಒಂದು ಸಚಿವಾಲಯದ ಅಡಿಯಿದ್ದರೆ ರಾಜ್ಯದಲ್ಲಿ ತಲೆದೋರಿರುವ ಕೊರೋನಾ ವೈರಸ್'ನ್ನು ಮಟ್ಟಹಾಕಲು ದಿಟ್ಟ ಹೋರಾಟ ನಡೆಸಬಹುದು ಎಂದು ಸಚಿವ ಸುಧಾಕರ್ ಅವರು ಹೇಳಿದ್ದಾರೆ. 
ಸಚಿವ ಸುಧಾಕರ್
ಸಚಿವ ಸುಧಾಕರ್
Updated on

ಬೆಂಗಳೂರು: ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಇಲಾಖೆ ಎರಡೂ ಒಂದು ಸಚಿವಾಲಯದ ಅಡಿಯಿದ್ದರೆ ರಾಜ್ಯದಲ್ಲಿ ತಲೆದೋರಿರುವ ಕೊರೋನಾ ವೈರಸ್'ನ್ನು ಮಟ್ಟಹಾಕಲು ದಿಟ್ಟ ಹೋರಾಟ ನಡೆಸಬಹುದು ಎಂದು ಸಚಿವ ಸುಧಾಕರ್ ಅವರು ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಇತ್ತೀಚೆಗಷ್ಟೇ ಶ್ರೀರಾಮುಲು ಅವರ ಬಳಿಯಿದ್ದ ಆರೋಗ್ಯ ಖಾತೆಯನ್ನು ತಮಗೆ ನೀಡಿದ್ದರ ಕುರಿತು ಹಾಗೂ ರಾಜ್ಯದಲ್ಲಿನ ಕೊರೋನಾ ನಿರ್ವಹಣೆ ಕುರಿತು ಮಾತನಾಡಿದ್ದಾರೆ. 

ವೈದ್ಯಕೀಯ ಶಿಕ್ಷಣ ಖಾತೆ ಹಾಗೂ ಆರೋಗ್ಯ ಖಾತೆ ಎರಡೂ ಪ್ರತ್ಯೇಕ ಇಲಾಖೆಗಳಾಗಿದ್ದು, ಎರಡೂ ಖಾತೆಯನ್ನು ಹೇಗೆ ನಿಭಾಯಿಸುತ್ತೀರಿ? 
ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡೂ ಒಂದಕ್ಕೊಂದು ಸಂಬಂಧವನ್ನು ಹೊಂದಿದೆ. ಈ ಹಿಂದೆ ಎರಡೂ ಖಾತೆಗಳು ಒಂದು ಸಚಿವಾಲಯದ ಅಡಿಯಲ್ಲಿಯೇ ಇತ್ತು. ಸಾಕಷ್ಟು ತಜ್ಞರ ಸಮಿತಿಗಳು ಉತ್ತಮ ಸಹಕಾರ, ಕಾರ್ಯನಿರ್ವಹಣೆಗೆ ಎರಡೂ ಇಲಾಖೆಯ ಒಬ್ಬ ಸಚಿವರ ಅಡಿಯಲ್ಲಿರಬೇಕೆಂದು ಸಲಹೆ ನೀಡಿದ್ದರು. ಜಿಲ್ಲಾ ಆರೋಗ್ಯ ಅಧಿಕಾರಿಗಳು ಆರೋಗ್ಯ ಇಲಾಖೆಗೆ ಮತ್ತು ಶಿಕ್ಷಣ ಇಲಾಖೆ ಎರಡಕ್ಕೂ ವರದಿ ಸಲ್ಲಿಸುತ್ತಾರೆ. ಇದರಿಂದ ಸಹಕಾರದ ಸಮಸ್ಯೆಗಳು ಎದುರಾಗುತ್ತದೆ. ಇದೀಗ ಎರಡೂ ಇಲಾಖೆಗಳು ಒಬ್ಬ ಸಚಿವರ ಅಡಿಯಲ್ಲಿರುವುದರಿಂದ ಸರ್ಕಾರ ಕೊರೋನಾ ವಿರುದ್ಧದ ಹೋರಾಟವನ್ನು ಉತ್ತಮವಾಗಿ ನಡೆಸಬಹುದಾಗಿದೆ 

ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ನಾಲ್ವರು ಮಂತ್ರಿಗಳು ಕೋವಿಡ್ ಪರಿಸ್ಥಿತಿ ನಿರ್ವಹಣೆ ಮಾಡುತ್ತಿದ್ದರು. ಇದೀಗ ನೀವೊಬ್ಬರೆ ನಿರ್ವಹಿಸಬೇಕಿದೆ...
ಅನ್ಲಾಕ್ ಆರಂಭವಾದ ಬಳಿಕ ಜುಲೈ ತಿಂಗಳಿನಿಂದ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದೆ. ಸರ್ಕಾರ ಬುಡದಿಂದ ಕೊರೋನಾ ವಿರುದ್ಧ ಹೋರಾಟ ಮಾಡಬೇಕಿದೆ. ಮುಖ್ಯಮಂತ್ರಿಗಳು ಸಚಿವರಿಗೆ ಕೆಲಸಗಳನ್ನು ಹಂಚಿಕೆ ಮಾಡಿದ್ದರು. ಒಬ್ಬ ಮಂತ್ರಿ ಕೋವಿಡ್ ಕೇರ್ ಸೆಂಟರ್ ಗಳ ಮೇಲೆ ನಿಗಾವಹಿಸಿದರೆ, ಮತ್ತೊಬ್ಬ ಸಚಿವರಿಗೆ ಖಾಸಗಿ ಆಸ್ಪತ್ರೆಗಳನ್ನು ನಿರ್ವಹಿಸುವ ಕರ್ತವ್ಯಗಳನ್ನು ನೀಡಿದ್ದರು. ಇದೀಗ ಈ ಎಲ್ಲಾ ಪ್ರಯತ್ನಗಳೂ ಕೂಡ ಕೆಲಸ ಮಾಡುತ್ತಿವೆ. 

ಖಾತೆಗಳ ಬದಲಾವಣೆಯು ಕೊರೋನಾ ನಿರ್ವಹಿಸಲು ಸರ್ಕಾರ ವೈಫಲ್ಯತೆಯನ್ನು ತೋರಿಸುತ್ತದೆ ಎಂದು ಹೇಳುತ್ತಿವೆ...? 
ವಿರೋಧ ಪಕ್ಷಗಳು ಸುಖಾಸುಮ್ಮನೆ ಇಂತಹ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಸಬೇಕು. ಸರ್ಕಾರದೊಂದಿಗೆ ಸಹಕಾರ ನೀಡಬೇಕು. 

ಮಾರುಕಟ್ಟೆಗಳಲ್ಲಿ ಆ್ಯಂಟಿವೈರಲ್ ರೆಮ್'ಡೆಸಿವಿರ್ ಚುಚ್ಚುಮದ್ದು ಲಸಿಕೆ ಸಿಗುತ್ತಿಲ್ಲ ಎಂಬ ಸಾಕಷ್ಟು ದೂರುಗಳು ಬರುತ್ತಿವೆ. ಆರಂಭದಲ್ಲಿ 1-2 ಶಾಟ್ ಗಳಷ್ಟು ಈ ಲಸಿಕೆಯನ್ನು ನೀಡುವ ವೈದ್ಯರು ನಂತರ ಮುಕ್ತ ಮಾರುಕಟ್ಟೆಗಳಲ್ಲಿ ಪ್ರತಿ ಇಂಜೆಕ್ಷನ್'ನ್ನು ರೂ.10 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ...?
ಇಂತಹ ಅಕ್ರಮಗಳು ಕಂಡು ಬಂದಿದ್ದೇ ಆದರೆ, ಇದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸರ್ಕಾರದ ಮೀಸಲಾತಿ ಅಡಿಯಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ರೆಮ್'ಡೆಸಿವಿರ್ ಲಸಿಕೆಯನ್ನು ಉಚಿತವಾಗಿ ನೀಡಬೇಕು. ಸೋಂಕಿತನ ಆರೋಗ್ಯ ಸ್ಥಿತಿ ಗಮನಿಸಿ ವೈದ್ಯರು ಎಷ್ಟು ಡೋಸ್ ನೀಡಬೇಕೆಂಬುದನ್ನು ನಿರ್ಧರಿಸುತ್ತಾರೆ. ಸೋಂಕಿತ ವ್ಯಕ್ತಿಗೆ ಗರಿಷ್ಠ 6 ಬಾಟಲಿಗಳ ಲಸಿಕೆಗಳನ್ನು ನೀಡಬಹುದಾಗಿದೆ. ಇದರ ವೆಚ್ಚ ರೂ. 32,400 ಆಗುತ್ತದೆ. ಇದನ್ನು ಸರ್ಕಾರ ರೋಗಿಗಳಿಗೆ ಉಚಿತವಾಗಿ ನೀಡಿದೆ. ಪ್ರತೀ ಆಸ್ಪತ್ರೆಯಲ್ಲೂ ಆರೋಗ್ಯ ಮಿತ್ರ ವಿಭಾಗವಿದ್ದು,  ಈ ವಿಭಾಗವು ಸಾಸ್ಟ್ (ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್) ನಿರ್ವಹಿಸಲು ಸಹಾಯ ಮಾಡುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com