30 ನಿಮಿಷಗಳಲ್ಲಿ ಮಣ್ಣು ಪರೀಕ್ಷೆ ಫಲಿತಾಂಶ!: 8 ಕೋಟಿ ರೂ. ಹೂಡಿಕೆ ಗಳಿಸಿದ ಹುಬ್ಬಳ್ಳಿ ಮೂಲದ ಸ್ಟಾರ್ಟ್ ಅಪ್!

ಕೇವಲ 30 ನಿಮಿಷಗಳಲ್ಲಿ ಮಣ್ಣು ಪರೀಕ್ಷೆ ಫಲಿತಾಂಶ ನೀಡುವ ಸೌಲಭ್ಯವನ್ನು ಪರಿಚಯಿಸಿರುವ ಹುಬ್ಬಳ್ಳಿ ಮೂಲದ ಸ್ಟಾರ್ಟ್ ಅಪ್ ಅಗ್ರಿಟೆಕ್ ಕೇಂದ್ರೀಕೃತ ಹೂಡಿಕೆದಾರರಿಗೆ ಬರೊಬ್ಬರಿ 8 ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸಿದೆ. 
30 ನಿಮಿಷಗಳಲ್ಲಿ ಮಣ್ಣು ಪರೀಕ್ಷೆ ಫಲಿತಾಂಶ!: 8 ಕೋಟಿ ರೂ. ಹೂಡಿಕೆ ಗಳಿಸಿದ ಹುಬ್ಬಳ್ಳಿ ಮೂಲದ ಸ್ಟಾರ್ಟ್ ಅಪ್!
30 ನಿಮಿಷಗಳಲ್ಲಿ ಮಣ್ಣು ಪರೀಕ್ಷೆ ಫಲಿತಾಂಶ!: 8 ಕೋಟಿ ರೂ. ಹೂಡಿಕೆ ಗಳಿಸಿದ ಹುಬ್ಬಳ್ಳಿ ಮೂಲದ ಸ್ಟಾರ್ಟ್ ಅಪ್!

ಹುಬ್ಬಳ್ಳಿ: ಕೇವಲ 30 ನಿಮಿಷಗಳಲ್ಲಿ ಮಣ್ಣು ಪರೀಕ್ಷೆ ಫಲಿತಾಂಶ ನೀಡುವ ಸೌಲಭ್ಯವನ್ನು ಪರಿಚಯಿಸಿರುವ ಹುಬ್ಬಳ್ಳಿ ಮೂಲದ ಸ್ಟಾರ್ಟ್ ಅಪ್ ಅಗ್ರಿಟೆಕ್ ಕೇಂದ್ರೀಕೃತ ಹೂಡಿಕೆದಾರರಿಗೆ ಬರೊಬ್ಬರಿ 8 ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸಿದೆ. 

ಹೊಸದಾಗಿ ಪ್ರಾರಂಭವಾಗಿರುವ ಈ ಕಂಪನಿಯಿಂದ ರೈತರು ಕೇವಲ 30 ನಿಮಿಷಗಳಲ್ಲಿ ತಮ್ಮ ಕೃಷಿ ಭೂಮಿಯ ಮಣ್ಣಿನ ಪರೀಕ್ಷೆ ನಡೆಸಬಹುದಾಗಿದ್ದು, ಫಲಿತಾಂಶದ ವಿವರಗಳನ್ನು ಅವರ ಮೊಬೈಲ್ ಗೇ ಕಳಿಸಲಾಗುತ್ತದೆ. 
 
ಕೃಷಿ ಭೂಮಿಯಲ್ಲಿನ ಪೌಷ್ಟಿಕಾಂಶಗಳ ಬಗ್ಗೆ ರೈತರಿಗೆ ಅರಿವು ಇರಬೇಕಾಗುತ್ತದೆ. ಇಲ್ಲದೇ ಇದ್ದಲ್ಲಿ ಮಾಹಿತಿ ಇಲ್ಲದೇ ಹಾಕುವ ಗೊಬ್ಬರದಿಂದಾಗಿ ಇರುವ ಪೌಷ್ಟಿಕಾಂಶ ನಷ್ಟವಾಗುವುದರ ಜೊತೆಗೆ ಅಂತರ್ಜಲದ ಮೇಲೆಯೂ ಪರಿಣಾಮ ಬೀರಲಿದೆ.  ಕೃಷಿ ಮಾಡುವವರ ಸಂಖ್ಯೆ 30 ಕೋಟಿ ಇದ್ದು, ದೇಶಾದ್ಯಂತ 4000 ಮಣ್ಣು ಪರೀಕ್ಷಾ ಲ್ಯಾಬರೇಟರಿಗಳಿವೆಯಷ್ಟೇ. ಇದರಿಂದಾಗಿ ಸಾಕಷ್ಟು ಅಸಮತೋಲನ ಉಂಟಾಗಿ ರೈತರಿಗೆ ಉಪಯೋಗವಾಗುತ್ತಿಲ್ಲ. 

ಉಡುಪಿಯಲ್ಲಿ ಸಂದೀಪ್ ಕೊಂಡಾಜಿ ಎಂಬುವವರು ಕೃಷಿ ತಂತ್ರ ಎಂಬ ಸ್ಟಾರ್ಟ್ ಅಪ್ ಪ್ರಾರಂಭಿಸಿದ್ದು ಕೃಷಿ ರಾಸ್ತಾ ಎಂಬ ಕ್ಷಿಪ್ರ ಮಣ್ಣು ಪ್ರಯೋಗ ವಿಧಾನವನ್ನು ಪರಿಚಯಿಸಿದ್ದಾರೆ. ಇದರಿಂದಾಗಿ ಗೊಬ್ಬರದ ಪ್ರಮಾಣವನ್ನು ಅಗತ್ಯಕ್ಕೆ ತಕ್ಕಂತೆ ಹಾಕುವುದರಿಂದ ಕೃಷಿಕರು ಶೇ.15-25 ರಷ್ಟು ಹಣವನ್ನು ಉಳಿತಾಯ ಮಾಡಬಹುದಾಗಿದೆ ಎನ್ನುತ್ತಾರೆ ಸಂದೀಪ್ ಕೊಂಡಾಜಿ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com