ಕೊರೋನಾ ಮಧ್ಯೆ ಉಪ ಚುನಾವಣೆ: ಶೇ.50ರಷ್ಟು ಜನರಿಗೆ ಪ್ರವೇಶ, ಒಳಾಂಗಣದಲ್ಲಿ ರಾಜಕೀಯ ಪ್ರಚಾರಕ್ಕೆ ಅವಕಾಶ

ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿ ಅದು ನಿಧಾನವಾಗಿ ಸಡಿಲಿಕೆಯಾಗುತ್ತಾ ಬಂದ ನಂತರ ಇದೀಗ ಚುನಾವಣಾ ಆಯೋಗ ಒಳಾಂಗಣದಲ್ಲಿ ಸೀಮಿತ ಜನರನ್ನು ಸೇರಿಸಿ ರಾಜಕೀಯ ಪ್ರಚಾರ ಮಾಡಬಹುದು ಎಂದು ಹೇಳಿದೆ.
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
Updated on

ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿ ಅದು ನಿಧಾನವಾಗಿ ಸಡಿಲಿಕೆಯಾಗುತ್ತಾ ಬಂದ ನಂತರ ಇದೀಗ ಚುನಾವಣಾ ಆಯೋಗ ಒಳಾಂಗಣದಲ್ಲಿ ಸೀಮಿತ ಜನರನ್ನು ಸೇರಿಸಿ ರಾಜಕೀಯ ಪ್ರಚಾರ ಮಾಡಬಹುದು ಎಂದು ಹೇಳಿದೆ.

ಆಡಿಟೋರಿಯಂಗಳಲ್ಲಿ 50 ಸೀಟುಗಳಿಗೆ ನಿರ್ಬಂಧ ಹೇರಲಾಗಿದ್ದು, ಒಂದು ಬಾರಿಗೆ 200ಕ್ಕಿಂತ ಹೆಚ್ಚು ಜನರು ಸೇರಬಾರದು ಎಂದು ನಿರ್ಬಂಧ ಹೇರಲಾಗಿದೆ. ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪ್ರಚಾರಗಳು ಮಹತ್ವ ಪಡೆದುಕೊಂಡಿದೆ. ಕೋವಿಡ್-19 ನಂತರ ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಈ ಹಿಂದೆ ಒಳಾಂಗಣ ರ್ಯಾಲಿಗಳಲ್ಲಿ 50 ಮಂದಿ ಮಾತ್ರ ಸೇರಬಹುದು ಎಂದು ನಿರ್ಬಂಧ ಹೇರಲಾಗಿತ್ತು. ಇದೀಗ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ರಾಜ್ಯ ಚುನಾವಣಾ ಆಯೋಗ ಮುಖ್ಯ ಅಧಿಕಾರಿ ಸಂಜೀವ್ ಕುಮಾರ್, ಒಳಾಂಗಣಗಳಲ್ಲಿ ಪ್ರಚಾರ ನಡೆಸಲು ಅವಕಾಶ ಕಲ್ಪಿಸಲಾಗಿದ್ದು ಸೀಮಿತ ಸಂಖ್ಯೆಯಲ್ಲಿ ಜನರು ಸೇರಬೇಕು. ಹಿಂದಿನಂತೆ ನಾಮಪತ್ರ ಸಲ್ಲಿಕೆ ವೇಳೆ ಜನರು ಸೇರುವುದು, ಮೆರವಣಿಗೆ ಇತ್ಯಾದಿಗಳಿಗೆ ಅವಕಾಶವಿಲ್ಲ.

ಸಾರ್ವಜನಿಕ ಭಾಷಣಗಳಿಗೆ ಜಿಲ್ಲಾಧಿಕಾರಿಗಳು ಸ್ಥಳಗಳನ್ನು ಗುರುತಿಸುತ್ತಾರೆ. ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತದೆ. ಅಂಚೆ ಮತಗಳಿಗೆ ಈ ಬಾರಿ ಪ್ರಾಶಸ್ತ್ಯವಿದೆ. ಇದುವರೆಗೆ ರಕ್ಷಣಾ ಇಲಾಖೆಯವರಿಗೆ ಮತ್ತು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವವರಿಗೆ ಮಾತ್ರ ಅಂಚೆ ಮತಗಳ ಸೌಲಭ್ಯವಿತ್ತು, ಈ ಬಾರಿ ಮತಗಟ್ಟೆಗೆ ಬಂದು ಮತ ಹಾಕಲು ಸಾಧ್ಯವಿಲ್ಲದವರಿಗೆ ಅವಕಾಶವಿದೆ ಎಂದರು.

ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿನ 80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರ ಮನೆಗಳಿಗೆ ಖುದ್ದಾಗಿ ಬೂತ್ ಮಟ್ಟದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇಂತವರಿಗೆ ಅರ್ಜಿಗಳನ್ನು ತುಂಬಲು ನೀಡಲಾಗುತ್ತದೆ. ಇದು ಕಡ್ಡಾಯವಲ್ಲ, ಆಯ್ಕೆಗಳಿರುತ್ತವೆ. ಬೂತ್ ಗೆ ಭೇಟಿ ಕೊಟ್ಟು ಮತ ಹಾಕಬೇಕೆಂದು ಇಚ್ಛಿಸುವವರು ಮತ ಹಾಕಬಹುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com