ಬಿಬಿಎಂಪಿ ಆನ್ ಲೈನ್ ಪೋರ್ಟಲ್: ಬಿಲ್ಡಿಂಗ್ ಪ್ಲ್ಯಾನ್ ಅನುಮೋದನೆಗೆ 200ಕ್ಕೂ ಹೆಚ್ಚು ಅರ್ಜಿಗಳು

ಕಟ್ಟಡ ನಿರ್ಮಾಣ ಅನುಮೋದನೆ ಅರ್ಜಿಗಳಿಗೆ ಅನುಮತಿ ನೀಡಲು ಇತ್ತೀಚೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಆರಂಭಿಸಿರುವ ಪೋರ್ಟಲ್ ನಲ್ಲಿ ಹಲವರು ಅರ್ಜಿ ಸಲ್ಲಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಟ್ಟಡ ನಿರ್ಮಾಣ ಅನುಮೋದನೆ ಅರ್ಜಿಗಳಿಗೆ ಅನುಮತಿ ನೀಡಲು ಇತ್ತೀಚೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಆರಂಭಿಸಿರುವ ಪೋರ್ಟಲ್ ನಲ್ಲಿ ಹಲವರು ಅರ್ಜಿ ಸಲ್ಲಿಸುತ್ತಿದ್ದಾರೆ.

ಕಳೆದ ಜುಲೈಯಲ್ಲಿ ಆರಂಭವಾದ ಪೋರ್ಟಲ್ ನಲ್ಲಿ ಬಿಲ್ಡಿಂಗ್ ಪ್ಲಾನ್ ಅನುಮೋದನೆಯನ್ನು ಆನ್ ಲೈನ್ ನಲ್ಲಿ ನೀಡಲಾಗುತ್ತದೆ. ಈಗಾಗಲೇ 200ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಬಹುತೇಕ ಅರ್ಜಿಗಳು ವಸತಿ ನಿವೇಶನಗಳಿಗಾಗಿದ್ದು ಸಣ್ಣ ಸೈಟುಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲು ಆಗಿರುವ ಅರ್ಜಿಗಳೂ ಸೇರಿವೆ.

ತೀರಾ ಇತ್ತೀಚೆಗೆ ಬಿಬಿಎಂಪಿಗೆ ಮಣಿಪಾಲ ವಿಶ್ವವಿದ್ಯಾಲಯದಿಂದ ಅತಿದೊಡ್ಡ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಅನುಮೋದನೆಗೆ ಅರ್ಜಿ ಬಂದಿದೆ. ಯಲಹಂಕ ವಿಮಾನ ನಿಲ್ದಾಣ ಹತ್ತಿರ 8 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಕಟ್ಟಡವಿದು. ನಿಯಮ ಪ್ರಕಾರ, ಬಿಬಿಎಂಪಿ ಪೋರ್ಟಲ್ ನಲ್ಲಿ ಕಳುಹಿಸಲಾದ ಅರ್ಜಿ ಅನುಮೋದನೆ ಪಡೆಯಲು 18 ದಿನಗಳು ಬೇಕಾಗುತ್ತವೆ. ನಮ್ಮ ಬಳಿಗೆ ಅರ್ಜಿ ಬಂದು ಮೂರು ದಿನಗಳಾಗಿದೆ. ಇದೀಗ ಕಂದಾಯ ಇಲಾಖೆ ತೆರಿಗೆ ಮತ್ತು ಅಂಕಿಅಂಶಗಳ ಬಗ್ಗೆ ಲೆಕ್ಕ ಹಾಕುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ಪೋರ್ಟಲ್ ನಲ್ಲಿ ಆನ್ ಲೈನ್ ಬಿಲ್ಡಿಂಗ್ ಪ್ಲಾನ್ ಅನುಮೋದನೆ ವ್ಯವಸ್ಥೆಯಲ್ಲಿ 30*40ಯಿಂದ 150 ಎಕರೆವರೆಗಿನ ಪ್ರದೇಶಗಳಿಗೆ ಅನುಮೋದನೆಗೆ ಅರ್ಜಿ ಹಾಕಬಹುದು. ಎಲ್ಲಾ ಅರ್ಜಿಗಳನ್ನು ಅಪ್ ಲೋಡ್ ಮಾಡಿ, ಸೈಟ್ ಗಳ ಪ್ಲಾನ್, ರೇಖಾಚಿತ್ರ, ವಿಳಾಸ ನೋಡಿಕೊಂಡು ಸರಿಯಾಗಿದೆಯೇ ಇಲ್ಲವೇ ಎಂದು ಹೇಳುತ್ತದೆ.

ರೇಖಾಚಿತ್ರಗಳನ್ನು ಅನುಮೋದಿಸಿದ ನಂತರ, ಪೋರ್ಟಲ್ ದಿನಾಂಕ ಮತ್ತು ಸಮಯದ ಬಗ್ಗೆ ಮಾಲೀಕರಿಗೆ ತಿಳಿಸುತ್ತದೆ, ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ಬಿ, ಬೆಸ್ಕಾಮ್, ಅಗ್ನಿಶಾಮಕ ಮತ್ತು ತುರ್ತುಸ್ಥಿತಿ ಮತ್ತು ಇತರ ಸರ್ಕಾರಿ ಇಲಾಖೆಗಳ ಎಂಜಿನಿಯರುಗಳು ಕ್ಷೇತ್ರ ಪರಿಶೀಲನೆಗಾಗಿ ನಿವೇಶನಕ್ಕೆ ಭೇಟಿ ನೀಡುತ್ತಾರೆ. ಕ್ಷೇತ್ರ ಪರಿಶೀಲನಾ ವರದಿಗಳನ್ನು ಅಪ್‌ಲೋಡ್ ಮಾಡಲು ಸರ್ಕಾರಿ ಸಂಸ್ಥೆಗಳಿಗೆ ಮೂರು ದಿನಗಳ ಕಾಲಾವಕಾಶ ನೀಡಲಾಗುತ್ತದೆ, ಅದರ ಆಧಾರದ ಮೇಲೆ ಯೋಜನೆಗೆ ಅಂತಿಮ ಅನುಮತಿ ನೀಡಲಾಗುತ್ತದೆ.

ಆರ್ಕಿಟೆಕ್ಟ್ ಗಳಿಗೆ ತರಬೇತಿ: ನಾಗರಿಕರು ರೇಖಾಚಿತ್ರಗಳನ್ನು ನೇರವಾಗಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಸಾಧ್ಯವಿಲ್ಲ, ಬಿಬಿಎಂಪಿಯಲ್ಲಿ ನೋಂದಾಯಿತ ವಾಸ್ತುಶಿಲ್ಪಿಗಳ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ.ಅನೇಕ ಜನರಿಗೆ ಸರಿಯಾದ ವಾಸ್ತುಶಿಲ್ಪಿಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಬಿಬಿಎಂಪಿ ವತಿಯಿಂದ ವಾಸ್ತುಶಿಲ್ಪಿಗಳಿಗೆ ತರಬೇತಿ ನೀಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com