ಲಾಕ್ ಡೌನ್ ಎಫೆಕ್ಟ್: ಪರಿಸ್ಥಿತಿ ಸುಧಾರಿಸದಿದ್ದರೆ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳ ಅಸ್ತಿತ್ವಕ್ಕೆ ಸಂಚಾಕಾರ!

ಸಣ್ಣ, ಮಧ್ಯಮ, ಮತ್ತು ಅತಿ ಸಣ್ಣ ಉದ್ಯಮಗಳ ಮೇಲೆ ಕೊರೋನಾ ಲಾಕ್ ಡೌನ್ ಗಾಯದ ಮೇಲೆ ಉಪ್ಪು ಸವರಿದಂತ ಪರಿಸ್ಥಿತಿ ನಿರ್ಮಾಣ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಶಿವಮೊಗ್ಗ: ಸಣ್ಣ, ಮಧ್ಯಮ, ಮತ್ತು ಅತಿ ಸಣ್ಣ ಉದ್ಯಮಗಳ ಮೇಲೆ ಕೊರೋನಾ ಲಾಕ್ ಡೌನ್ ಗಾಯದ ಮೇಲೆ ಉಪ್ಪು ಸವರಿದಂತ ಪರಿಸ್ಥಿತಿ ನಿರ್ಮಾಣ ಮಾಡಿದೆ.

ಆರ್ಥಿಕ ಕುಸಿತದಿಂದ ಈಗಾಗಲೇ ನಷ್ಟ ಅನುಭವಿಸುತ್ತಿರುವ ಉದ್ಯಮಗಳ ಮೇಲೆ ಬರೆ ಎಳೆದಂತಾಗಿದೆ. ಆಗ ತಾನೆ ಬೆಳವಣಿಗೆ ಕಾಣುತ್ತಿದ್ದ ಕೆಲ ಉದ್ಯಮಗಳು ಮತ್ತೆ ದಾರಿಗೆ ಬರಲು ಬಹುಕಾಲ ಸಮಯ ಹಿಡಿಯಲಿದೆ.

ದೇಶದ ಅತ್ಯಂತ ಕೈಗಾರಿಕೀಕರಣಗೊಂಡ ರಾಜ್ಯಗಳಲ್ಲಿ  ಕರ್ನಾಟಕ ಒಂದೆಂದು ಪರಿಗಣಿಸಲ್ಪಟ್ಟಿದ್ದು 7.6 ಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಹಾಗೂ ಅತಿ ಸಣ್ಣ ಕೈಗಾರಿಕೆಗಳನ್ನು ಹೊಂದಿದೆ. ಅದರಲ್ಲಿ 2.6 ಲಕ್ಷ ಉದ್ದಿಮೆಗಳು ಬೆಂಗಳೂರಿನಲ್ಲೇ ಇದ್ದು ಮತ್ತು ಈ ವಲಯಗಳಲ್ಲಿ ಸುಮಾರು 2.6 ಕೋಟಿ ಜನರನ್ನು ನೇಮಿಸಿಕೊಂಡಿದೆ.

ಲಾಕ್ ಡೌನ್ ನಿಂದ ಶೇ.20 ರಷ್ಟು ಉದ್ದಿಮೆಗಳು ನಷ್ಟ ಅನುಭವಿಸಿವೆ.ಎಂಎಸ್‌ಎಂಇಗಳ ವ್ಯವಹಾರ ವಹಿವಾಟು 10 ವರ್ಷಗಳ ಹಿಂದಕ್ಕೆ ಮರಳಿದೆ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀನಿವಾಸ ಆಶ್ರಣ್ಣ ತಿಳಿಸಿದ್ದಾರೆ.

ಬೆಂಗಳೂರು ಹೊರವಲಯದಲ್ಲಿರುವ ಪೀಣ್ಯಾ ಕೈಗಾರಿಕಾ ಕೇಂದ್ರದಲ್ಲಿ ಸುಮಾರು 8,500 ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿದ್ದು, ಅವುಗಳಲ್ಲಿ ಶೆ,80ರಷ್ಟು ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದವು ಲಾಕ್ ಡೌನ್ ಸಮಯದಲ್ಲಿ ಮುಚ್ಚಿವೆ, ಅವುಗಳಲ್ಲಿ ಶೇ.10 ರಷ್ಟು ಮತ್ತೆ ತೆರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಲಾಕ್ ಡೌನ್ ತೆರವಿನ ನಂತರ ಕಾರ್ಮಿಕರ ಕೊರತೆಯಿಂದಾಗಿ ಹಲವು ಉದ್ದಿಮೆಗಳು ಕಾರ್ಯಾರಂಭ ಮಾಡಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರು ತಮ್ಮ ತಮ್ಮ ಸ್ವಂತ ಸ್ಥಳಗಳಿಗೆ ತೆರಳಿದ್ದಾರೆ.

ಸಾಂಕ್ರಾಮಿಕ ರೋಗದಿಂದ ಉಂಟಾದ ಬಿಕ್ಕಟ್ಟನ್ನು ಎದುರಿಸಲು ಎಂಎಸ್‌ಎಂಇ ವಲಯವನ್ನು ಗುರಿಯಾಗಿಸಿಕೊಂಡು ಸರ್ಕಾರವು ಅನೇಕ ಸಾಪ್ ಮತ್ತು ಯೋಜನೆಗಳನ್ನು ಘೋಷಿಸಿತು, ಆದರೆ ಅವು ಕಾಗದದ ಮೇಲೆ ಮಾತ್ರ ಇರುತ್ತವೆ ಮತ್ತು ಎಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ ಕಾಸಿಯಾ ಅಧ್ಯಕ್ಷ ಕೆಬಿ ಅರಸಪ್ಪ ತಿಳಿಸಿದ್ದಾರೆ.

ಕೆಲವು ಕೈಗಾರಿಕೋದ್ಯಮಿಗಳು ತಮ್ಮ ಅರ್ಜಿ ವಿಲೇವಾರಿ ಕುರಿತಂತೆ ಮಾರ್ಗದರ್ಶನ ಮತ್ತು ಸಲಹೆಗಳಿಗಾಗಿ ಕಾಸಿಯಾ ಪದಾಧಿಕಾರಿಗಳನ್ನಾಗಲಿ ಅಥವಾ ಪರಿಷತ್ತಿನ ಕಾರ್ಯದರ್ಶಿಗಳನ್ನಾಗಲಿ ಸಂಪರ್ಕಿಸದೆ ಮಧ್ಯವರ್ತಿಗಳನ್ನು ಸಂಪರ್ಕಿಸಿ ಹಣ ನೀಡುತ್ತಿರುವುದು / ಅನೈತಿಕ ಮಾರ್ಗಗಳನ್ನು ಪಾಲಿಸುತ್ತಿರುವುದು ಇಲಾಖಾಧಿಕಾರಿಗಳ ಗಮನಕ್ಕೆ ಬಂದಿರುವುದಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳು ಕಾಸಿಯಾ ಗಮನಕ್ಕೆ ತಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆದುದರಿಂದ ಇಂತಹ ಕ್ರಮ ಗಳಿಗೆ ಅನುವು ಮಾಡಿಕೊಡದೆ ಹಾಗೂ ಹಾಲಿ ವ್ಯವಸ್ಥೆಯನ್ನು ಮಲಿನಗೊಳಿಸದೆ ಪರಿಷತ್ತು ತನ್ನ ಕೆಲಸಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗಲು ಅನುವು ಮಾಡಿಕೊಡುವಂತೆ ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆದಾರರಲ್ಲಿ ಕಾಸಿಯಾ ಕಳಕಳಿ ವಿನಂತಿಸಿದ್ದು, ವಿಷಯದ ಕುರಿತಂತೆ ಯಾವುದೇ ರೀತಿಯ ಮಾರ್ಗದರ್ಶನಕ್ಕಾಗಿ ಕಾಸಿಯಾ ಸಂಪರ್ಕಿಸಲು ಅರಸಪ್ಪ ಕೋರಿದ್ದಾರೆ.

ದೇಶದ ಜಿಡಿಪಿಗೆ ಗಮನಾರ್ಹವಾಗಿ ಕೊಡುಗೆ ನೀಡುವ ಎಂಎಸ್ಎಂಇಗಳನ್ನು ರಕ್ಷಿಸಲು ಸರ್ಕಾರವು ಬಯಸಿದರೇ, ಮೇಲಾಧಾರ ರಹಿತ ಸ್ವಯಂಚಾಲಿತ ಸಾಲಗಳಿಗೆ ಬದಲಾಗಿ ಸರ್ಕಾರವು ನೇರ ನಗದು ಪ್ರಯೋಜನಗಳನ್ನು ಘೋಷಿಸಬಹುದಿತ್ತು ಎಂದು ಅವರು ಹೇಳಿದ್ದಾರೆ.

“ನೈಸರ್ಗಿಕ ವಿಪತ್ತುಗಳಿಂದಾಗಿ ನಾವು ಯಾವತ್ತೂ ರಿಯಾಯಿತಿ ಕೇಳಲಿಲ್ಲ. ಆದರೆ ಈ ಸಮಯದಲ್ಲಿ, ಕೋವಿಡ್ ಕಾರಣ ನಮಗೆ ಸಹಾಯ ಬೇಕು. ಪರಿಣಾಮಕಾರಿ ರಕ್ಷಣಾ ಯೋಜನೆ ಕಾಣೆಯಾಗಿರುವುದರಿಂದ ನಾವು ನಿರಾಶೆಗೊಂಡಿದ್ದೇವೆ, ”ಎಂದು ಅರಸಪ್ಪ ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com