ಲಲಿತಾ ಜ್ಯುವೆಲ್ಲರಿ ದರೋಡೆ ಪ್ರಕರಣ: ಜೈಲಿನಲ್ಲೇ ಮಾಸ್ಟರ್ ಮೈಂಡ್ ಸಾವು

ಲಲಿತಾ ಜ್ಯುವೆಲ್ಲರಿ ಪ್ಯಾಲೇಸ್ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಎನ್. ಮುರುಗನ್ ಅಲಿಯಾಸ್ ತಿರುವರೂರ್ ಮುರುಗನ್ ಅನಾರೋಗ್ಯದಿಂದ ಜೈಲಿನಲ್ಲೇ ಸಾವನ್ನಪ್ಪಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಲಲಿತಾ ಜ್ಯುವೆಲ್ಲರಿ ಪ್ಯಾಲೇಸ್ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಎನ್. ಮುರುಗನ್ ಅಲಿಯಾಸ್ ತಿರುವರೂರ್ ಮುರುಗನ್ ಅನಾರೋಗ್ಯದಿಂದ ಜೈಲಿನಲ್ಲೇ ಸಾವನ್ನಪ್ಪಿದ್ದಾನೆ.

ದರೋಡೆ ನಡೆದ 1 ವರ್ಷದ ನಂತರ ಆರೋಪಿ ಮುರುಗನ್ ನ್ಯಾಯಾಲಯಕ್ಕೆ ಶರಣಾಗಿದ್ದನು, ಆತನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಡಲಾಗಿತ್ತು. ಕಳೆದ ಕೆಲವು ತಿಂಗಳಿಂದ ಆತ ಅನಾರೋಗ್ಯದಿಂದ ಬಳಲುತ್ತಿದ್ದನು, 46 ವರ್ಷದ ಮುರುಗನ್ ನನ್ನು ಅಕ್ಟೋಬರ್ 12 ರಂದು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.

ತಿರುಚನಾಪಳ್ಳಿಯ ಜ್ಯುವೆಲ್ಲರಿ ಮಳಿಗೆಗೆ ಕನ್ನ ಹಾಕಿ 16 ಕೋಟಿಗೂ ಅಧಿಕ ಮೊತ್ತದ ವಜ್ರ ಮತ್ತು ಪ್ಲಾಟಿನಮ್‌ ಆಭರಣಗಳನ್ನು ಕದ್ದಿದ್ದ ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರು ನ್ಯಾಯಾಲಯಕ್ಕೆ ಶರಣಾಗಿದ್ದ.  2019 ಅಕ್ಟೋಬರ್ .2ರಂದು ಬೆಕ್ಕು ಮತ್ತು ನಾಯಿಯ ಮುಖವಾಡ ಧರಿಸಿದ್ದ ಗ್ಯಾಂಗ್‌ ತಿರುಚನಾಪಳ್ಳಿಯ ಆಭರಣ ಮಳಿಗೆಯನ್ನು ದೋಚಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com