ನವೆಂಬರ್ 1ನ್ನು ಬಾಲ್ಯವಿವಾಹ ವಿರೋಧಿ ದಿನವನ್ನಾಗಿ ಘೋಷಣೆ ಮಾಡಿ: ಮಕ್ಕಳ ಹಕ್ಕುಗಳ ಟ್ರಸ್ಟ್ ಆಗ್ರಹ

ನವೆಂಬರ್ 1 ನ್ನು ಬಾಲ್ಯವಿವಾಹ ವಿರೋಧಿ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಬೆಂಗಳೂರಿನ ಮಕ್ಕಳ ಹಕ್ಕುಗಳ ಟ್ರಸ್ಟ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನವೆಂಬರ್ 1 ನ್ನು ಬಾಲ್ಯವಿವಾಹ ವಿರೋಧಿ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಬೆಂಗಳೂರಿನ ಮಕ್ಕಳ ಹಕ್ಕುಗಳ ಟ್ರಸ್ಟ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. 

ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಅನ್ನು ನವೆಂಬರ್ 1 ರಂದು ಜಾರಿಗೆ ತರಲಾಗಿತ್ತು. ಇದೇ ದಿನವನ್ನೇ ಬಾಲ್ಯವಿವಾಹ ವಿರೋಧಿ ದಿನವಾಗಿ ಸರ್ಕಾರ ಘೋಷಣೆ ಮಾಡಬೇಕೆಂದು ಮಕ್ಕಳ ಹಕ್ಕುಗಳ ಟ್ರಸ್ಟ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮನವಿ ಪತ್ರವನ್ನು ಸಲ್ಲಿಸಿದೆ. 

ಕಾಯ್ದೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಹೆಣ್ಣು ಮಕ್ಕಳು ಮತ್ತು 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರ ವಿವಾಹವನ್ನು ನಿಷೇಧಿಸಲಾಗಿದೆ. ಎಲ್ಲಾ ಬಾಲ್ಯ ವಿವಾಹಗಳನ್ನು ‘ವಾಯ್ಡ್‌ ಅಬ್ ಇನಿಷಿಯೋ' ಎಂದು ಘೋಷಿಸುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. 

ಚಿಕ್ಕವಯಸ್ಸಿನಲ್ಲಿಯೇ ವಿವಾಹವಾಗುವ ಬಾಲಕಿಯರು ಶಿಕ್ಷಣ, ಆರೋಗ್ಯದ ಆರೈಕೆ, ಹಿಂಸಾಚಾರ ಸಹನೆ, ತಾರತಮ್ಯ, ಆರ್ಥಿಕ ಅವಲಂಬನೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಶಿಶುಗಳ ಮರಣ ಪ್ರಮಾಣ ಕೂಡ ಏರಿಕೆಯಾಗುತ್ತದೆ. ತಾಯಿಯಂದಿರ ಮರಣ ಕೇವಲ ಸಂಖ್ಯೆಯಾದರೆ, ಅದು ದೇಸದ ಅಭಿವೃದ್ಧಿಗೂ ಅಡ್ಡಿಯುಂಟೂ ಮಾಡುತ್ತದೆ ಎಂದು ಸಿಆರ್‌ಟಿಯ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ ಶರ್ಮಾ ಎನ್ ವಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com