ನಟ, ನಟಿಯರು, ಗಣ್ಯರು ತಮ್ಮ ನಡವಳಿಕೆ ಶುದ್ಧವಾಗಿ ಇಟ್ಟುಕೊಳ್ಳಬೇಕು- ಡಾ.ಕೆ.ಸುಧಾಕರ್

ಸಿನಿಮಾ ನಟ-ನಟಿಯರು, ಗಣ್ಯರು ತಮ್ಮ ನಡವಳಿಕೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್
Updated on

ಗೌರಿ ಬಿದನೂರು: ಸಿನಿಮಾ ನಟ-ನಟಿಯರು, ಗಣ್ಯರು ತಮ್ಮ ನಡವಳಿಕೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಶುಕ್ರವಾರ ಗೌರಿಬಿದನೂರು ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಿನಿಮಾ ನಟ-ನಟಿಯರು, ಸಮಾಜದಲ್ಲಿ ಗುರುತಿಸಿಕೊಂಡಿರುವ ಗಣ್ಯರು ಜನರಿಗೆ ಅಂಬಾಸಿಡರ್‌ಗಳಿದ್ದಂತೆ. ಅವರೇ ದುಷ್ಚಟಗಳಿಗೆ ದಾಸರಾದರೆ ಅವರನ್ನು ಹಿಂಬಾಲಿಸುವ ಜನರನ್ನು ಸಹ ದಿಕ್ಕುತಪ್ಪಿಸಿದಂತೆ ಆಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಡ್ರಗ್ಸ್ ದಂದೆಯಲ್ಲಿ ದೊಡ್ಡ ದೊಡ್ಡ ನಾಯಕರು, ನಟ-ನಟಿಯರು ಭಾಗಿರುವ ಬಗ್ಗೆ  ವೈಯಕ್ತಿಯವಾಗಿ ಮಾತನಾಡುವುದಿಲ್ಲ.‌ಆದರೆ, ಇವರು ಸಮಾಜಕ್ಕೆ‌ ಅಂಬಾಸಿಡರ್ ಇದ್ದಂತೆ. ಇವರನ್ನು ಹಿಂಬಾಲಿಸುವ ಜನರಿಗೆ ಮಾರ್ಗದರ್ಶಿಗಳಂತೆ ಶುದ್ಧ ನಡವಳಿಕೆ ಹೊಂದಿರಬೇಕು. ಇವರೇ ಹಾದಿತಪ್ಪಿದರೆ ಹೇಗೆ?  ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com